
ಮೈಸೂರು ದಸರಾ ದಂತೆ ತುಮಕೂರಿನಲ್ಲೂ ಅದ್ಧೂರಿಯಾಗಿ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲಾಗ್ತಿದೆ, ತುಮಕೂರಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಧಾರ್ಮಿಕ ಮಂಟಪ ನಿರ್ಮಾಣ ಮಾಡಲಾಗಿದ್ದು, ಮಂಟಪದಲ್ಲಿ ಚಾಮುಂಡೇಶ್ವರಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ದೇವಿಗೆ ನಿತ್ಯ ನವರಾತ್ರಿ ಅಂಗವಾಗಿ ಒಂದೊಂದು ಅವತಾರದಲ್ಲಿ ದೇವಿಗೆ ಅಲಂಕಾರ ಮಾಡಲಾಗ್ತಿದ್ದು, ಇಂದು ದೇವಿಗೆ ಕುಷ್ಮಾಂಡ ಅಲಂಕಾರವನ್ನು ಮಾಡಲಾಗಿತ್ತು.

ನವರಾತ್ರಿ 4ನೇ ದಿನವಾದ ಇಂದು ದೇವಿಗೆ ಪೊಲೀಸ್ ಇಲಾಖೆಯಿಂದ ವಿಶೇಷ ಪೂಜೆ ಕೈಗೊಳ್ಳಲಾಗಿತ್ತು. . ಮುಂಜಾನೆ ಬ್ರಾಹ್ಮಿ ಮೂಹರ್ತದಲ್ಲಿ ದೇವಿಗೆ ಸುಪ್ರಭಾತ ಸೇವೆ, ಗಣಪತಿ ಪೂಜೆ, ಮಹಾಲಕ್ಷ್ಮೀ ಪೂಜೆ ಸೇರಿ ದೇವಿಗೆ ವಿಶೇಷ ಪೂಜೆ ನೇರವೇರಿಸಲಾಗಿದ್ದು, ಎಸ್ಪಿ ಅಶೋಕ್ ವೆಂಕಟ್, ಕಮಿಷನರ್ ಅಶ್ವಿಜಾ, ಡಿಸಿ ಶುಭಕಲ್ಯಾಣ್, ಜಿಲ್ಲಾ ಪಂಚಾಯ್ತಿ ಸಿಇಒ ಜಿ. ಪ್ರಭು ಸೇರಿ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಪೂಜೆಯಲ್ಲಿ ಭಾಗಿಯಾಗಿದ್ರು. ಇನ್ನು ತುಮಕೂರು ದಸರಾ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ಅವರ ನೃೇತೃತ್ವದಲ್ಲಿ ನಡೆಯುತ್ತಿದ್ದು, ಪೂಜೆಯಲ್ಲಿ ಗೃಹ ಸಚಿವ ಪರಮೇಶ್ವರ್ ದಂಪತಿ, ಮಾಜಿ ಶಾಸಕ ಡಿ.ಸಿ ಗೌರಿ ಶಂಕರ್ ಸೇರಿ ಹಲವು ನಾಯಕರು ದಸರಾ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ಗೌರಿ ಶಂಕರ್, ದಸರಾ ನೋಡಬೇಕು ಅಂದ್ರೆ ಮೈಸೂರಿಗೆ ಹೋಗಬೇಕಿತ್ತು. ಆದ್ರೆ ಕಳೆದ ವರ್ಷದಿಂದ ತುಮಕೂರಿನಲ್ಲೇ ಅದ್ಧೂರಿಗಾಗಿ ದಸರಾ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ದಸರಾ ಅಂದ್ರೆ ತುಮಕೂರು ಅಂತಾ ಜನರು ನೆನಪಿಸಿಕೊಳ್ಳುವ ಕಾಲ ಬರುತ್ತೆ ಎಂದು ಹೇಳಿದ್ರು.

VOICE: ಇನ್ನು ತುಮಕೂರು ದಸರಾ ಅಂಗವಾಗಿ ನಗರಕ್ಕೆ ಸಂಪೂರ್ಣ ದೀಪಾಲಂಕಾರ ಮಾಡಲಾಗಿದ್ದು, ದೀಪಾಲಂಕಾರವನ್ನು ಜನರು ವೀಕ್ಷಿಸಲು ಅಂಬಾರಿ ಬಸ್ನನ್ನು ಮೊದಲ ಬಾರಿಗೆ ತುಮಕೂರಿನಲ್ಲಿ ಪರಿಚಯಿಸಲಾಗಿದೆ. ಲಂಡನ್ ಮಾದರಿಯ ಅಂಬಾರಿ ಬಸ್ ಓಪನ್ ಬಸ್ ಆಗಿದ್ದು, ಜನರು ಉಚಿತವಾಗಿ ಬಸ್ನಲ್ಲಿ ಪ್ರಯಾಣ ಮಾಡಿ, ಲೈಟಿಂಗ್ಸ್ ವೀಕ್ಷಣೆ ಮಾಡಲು ಜಿಲ್ಲಾಡಳಿತ ಅವಕಾಶ ನೀಡಿದೆ. ತುಮಕೂರು ಜನರಂತೂ ಅಂಬಾರಿ ಬಸ್ ಏರಿ ನಗರ ಸುತ್ತಿ ಲೈಟಿಂಗ್ಸ್ ವೀಕ್ಷಣೆ ಮಾಡಿ ಫುಲ್ ಖುಷಿಯಾಗಿದ್ದಾರೆ.




