
TUMAKURU : ತುಮಕೂರು ನಗರದ ಅಭಿವೃದ್ಧಿ ಹೊಂದುತ್ತಿದ್ದಂತೆ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ತಲೆ ದೋರುತ್ತಿದೆ. ತುಮಕೂರು ನಗರ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಹಾಗೂ ಶಿವಮೊಗ್ಗ, ಹೊನ್ನಾವರ ಸೇರಿ ನಾನಾ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಹಲವು ರಸ್ತೆಗಳನ್ನು ಅಭಿವೃದ್ದಿ ಮಾಡಲಾಗಿದೆ. ಇನ್ನು ನಗರದಲ್ಲಿ ಟ್ರಾಫಿಕ್ ಕಂಟ್ರೋಲ್ಗಾಗಿ ಔಟರ್ ರಿಂಗ್ ರೋಡ್ ಜೊತೆ ಸರ್ವೀಸ್ ರಸ್ತೆಯನ್ನು ಕೂಡ ನಿರ್ಮಾಣ ಮಾಡಲಾಗಿದೆ. ಆದರೆ ಸರ್ವೀಸ್ ರಸ್ತೆಯಲ್ಲಿ ಓಡಾಡಲು ಆಗದಂತಹ ಸ್ಥಿತಿ ನಿರ್ಮಾಣ ಆಗಿದೆ.
ತುಮಕೂರು ನಗರ ಹೊರವಲಯದ ಔಟರ್ ರಿಂಗ್ ರೋಡ್ ತುಂಬಾ ಅಭಿವೃದ್ಧಿ ಆಗಿದೆ, ಆದರೆ ರಿಂಗ್ ರೋಡ್ನ ಸರ್ವೀಸ್ ರಸ್ತೆಯನ್ನ ಪಾರ್ಕಿಂಗ್ ಸ್ಪಾಟ್ ಆಗಿ ಮಾಡಿಕೊಳ್ಳುತ್ತಿದ್ದು, ವಾಹನ ಸವಾರರು ಓಡಾಡಲು ಪರದಾಡುವಂತಾಗಿದೆ. ನಗರದ ಟೋಲ್ನಿಂದ ಗುಬ್ಬಿ ಗೇಟ್ಗೆ ಸಂಪರ್ಕ ಕಲ್ಪಿಸುವ ಔಟರ್ ರಿಂಗ್ ರೋಡ್ನ ಸದಾಶಿವನಗರದ ಬಳಿಯ ಸರ್ವೀಸ್ ರಸ್ತೆಯಲ್ಲಿರೋ ಮಹೀಂದ್ರಾ ಕಾರ್ ಶೋ ರೂಂ ಸಿಬ್ಬಂದಿ ಹಾಗೂ ಕಾರ್ ಸರ್ವೀಸ್ಗೆ ಬರುವವರು ಸರ್ವೀಸ್ ರಸ್ತೆಯನ್ನ ಪಾರ್ಕಿಂಗ್ ಸ್ಪಾಟ್ ಆಗಿ ಮಾಡಿಕೊಂಡಿದ್ದಾರೆ. ಇದರಿಂದ ದಿನ ಓಡಾಡಲು ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.
ಇನ್ನು ರಿಂಗ್ ರೋಡ್ ಸೇರಿ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಗಾಡಿಗಳನ್ನು ನಿಲ್ಲಿಸಲು ಸಂಚಾರಿ ಪೊಲೀಸ್ ಇಲಾಖೆ ಯಾವುದೇ ಪರ್ಮಿಷನ್ ಕೊಟ್ಟಿಲ್ಲ. ಹೀಗಿದ್ರು ಕೂಡ ಮಹೀಂದ್ರ ಶೋ ರೂಂ ಅವರು ಪಾರ್ಕಿಂಗ್ ಸ್ಪಾಟ್ ಆಗಿ ಮಾಡಿಕೊಳ್ಳುತ್ತಿದ್ದಾರೆ. ಹಲವು ಬಾರಿ ಪೊಲೀಸರು ಪಾರ್ಕಿಂಗ್ ಮಾಡಿಕೊಂಡಿದ್ದ ಗಾಡಿಗಳನ್ನು ತೆರವು ಮಾಡಿಸಿದ್ರು. ಆದರೆ ಮತ್ತೆ ಶೋ ರೂಂ ಅವರು ಮತ್ತೆ ವಾಹನಗಳನ್ನು ಸರ್ವೀಸ್ ರಸ್ತೆಯಲ್ಲೇ ಪಾರ್ಕಿಂಗ್ ಮಾಡ್ತಾ ಇದ್ದಾರೆ. ಇದರಿಂದ ಅಪಘಾತಗಳು ಆಗುವ ಸಾದ್ಯತೆ ಹೆಚ್ಚಾಗಿರುತ್ತೆ ಎಂದು ಸಾರ್ವಜನಿಕರು ಕಿಡಿಕಾರಿದರು.




