Tumakuru : ಮರಕ್ಕೆ ಡಿಕ್ಕಿ ಹೊಡೆದ ಲಾರಿ, ಸ್ಥಳದಲ್ಲೇ ಇಬ್ಬರ ಸಾವು.

Tumakuru ಕುಣಿಗಲ್ ಮುಖ್ಯ ರಸ್ತೆಯ ತುಮಕೂರು ವಿಶ್ವವಿದ್ಯಾಲಯ ಟರ್ನಿಂಗ್ ರಸ್ತೆ ಹಾಗೂ ರಂಗನಾಥಪುರ ಗ್ರಾಮದ ಸೇತುವೆ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನ ಕೇರಳ ಮೂಲದವರೆಂದು ಗುರುತಿಸಲಾಗಿದೆ.

ಸ್ಥಳದಲ್ಲೇ ಇಬ್ಬರು ದಾರುಣ ಸಾವು
ತಮಿಳುನಾಡಿನಿಂದ ಕಡಪ ಕಲ್ಲುಗಳನ್ನು ತುಂಬಿಕೊಂಡು ತುಮಕೂರಿನಿಂದ ಕುಣಿಗಲ್ ಕಡೆಗೆ ಲಾರಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಇನ್ನು ಅತೀವೇಗದಿಂದ ಲಾರಿ ಚಲಾಯಿಸುತ್ತಿದ್ದಾಗ ಚಾಲಕ ನಿದ್ರೆಗೆ ಜಾರಿದ ಪರಿಣಾಮ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿದ್ದ ದೊಡ್ಡ ಅರಳಿಮರ ಹಾಗೂ ಸೇತುವೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿ ಚಾಲಕ ಸೇರಿದಂತೆ ಇನ್ನೋರ್ವ ವ್ಯಕ್ತಿ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
READ THIS : ಕೆಪಿಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸುತ್ತಾರಾ ಡಿಕೆ ಶಿವಕುಮಾರ್?

ಪ್ರಕರಣ ದಾಖಲು
ಇನ್ನು ಈ ರಸ್ತೆಯಲ್ಲಿ ದಿನನಿತ್ಯ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿದ್ದು, ವಾಹನಗಳ ಅತಿವೇಗವೇ ಪ್ರಮುಖ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸದ್ಯ ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

MUST WATCH : ಸಿದ್ದು BUDGET ನಲ್ಲಿ ತುಮಕೂರಿಗೆ ಕೊಡುಗೆ – KORATAGEREಯಲ್ಲಿ DAM ನಿರ್ಮಾಣಕ್ಕೆ ಸಿಗ್ನಲ್




