ಮಾ.10ಕ್ಕೆ ಶಾಸಕರಿಗೆ ಡಿನ್ನರ್ – ಕೆಪಿಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸುತ್ತಾರಾ DK?

ಪವರ್ ಶೇರಿಂಗ್ ಜಟಾಪಟಿ, ಎಲ್ಲಾ ರಾಜಕೀಯ ಗೊಂದಲಗಳ ನಡುವೆ ಡಿಸಿಎಂ DK ಶಿವಕುಮಾರ್ ಮಾರ್ಚ್ 10 ರಂದು ಎಲ್ಲಾ ಕಾಂಗ್ರೆಸ್ ಶಾಸಕರಿಗೆ ಡಿನ್ನರ್ ಆಯೋಜಿಸಿದ್ದಾರೆ.
KPCC ಅಧ್ಯಕ್ಷರಾಗಿ 6 ವರ್ಷ ಪೂರ್ಣ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಆರು ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆ ನಗರದಲ್ಲಿನ ಖಾಸಗಿ ವಸತಿ ಗೃಹದಲ್ಲಿ ಡಿನ್ನರ್ ಪಾರ್ಟಿ ಆಯೋಜಿಸಲಾಗಿದೆ. ಮಾರ್ಚ್ 6ಕ್ಕೆ ಅಂದರೆ ನೆನ್ನೆಗೆ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರ್ಣಗೊಂಡಿದೆ.
READ THIS : ಡಾಗ್ ಸತೀಶ್ಗೆ ಕೊಲೆ ಬೆದರಿಕೆ – Rajath ವಿರುದ್ಧ ಬಿತ್ತು ಕೇಸ್!

ಯಾರಿಗೆ ಆಹ್ಯಾನ..?
ಈ ಔತಣಕೂಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಕಾಂಗ್ರೆಸ್ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಪಕ್ಷದ ಹಿರಿಯ ಮುಖಂಡರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದುಬಂದಿದೆ.
ಮಾ.10ಕ್ಕೆ ಶಾಸಕರಿಗೆ ಡಿನ್ನರ್!
ಈ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಅವರು, “6 ವರ್ಷಗಳ ಕಾಲ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಪಕ್ಷಕ್ಕೆ ಹೊಸ ರಕ್ತ ಬರಬೇಕು. ಹೊಸ ಮುಖಗಳಿಗೆ ಅವಕಾಶ ಸಿಗಬೇಕು. ನಾನು ಹೋರಾಟಗಾರ,” ಎಂದು ಹೇಳುವ ಮೂಲಕ ಅಧ್ಯಕ್ಷ ಸ್ಥಾನವನ್ನು ತ್ಯಜಿಸುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.

MUST WATCH : ದಾಖಲೆಯ ಸಿದ್ದು BUDGETನಲ್ಲಿ ತುಮಕೂರಿಗೆ ಏನೆಲ್ಲಾ ಕೊಡುಗೆ ಸಿಕ್ಕಿತು.?




