ತಾರಕಕ್ಕೇರಿದ ಡಾಗ್ ಸತೀಶ್ vs ಬುಜ್ಜಿ ಫೈಟ್! Rajath ಮೇಲೆ ಬಿತ್ತು ಮತ್ತೊಂದು ಕೇಸ್.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ರಿಯಾಲಿಟಿ ಶೋಗಳ ಮೂಲಕ ಜನಪ್ರಿಯರಾದ ವ್ಯಕ್ತಿಗಳ ಹೆಸರುಗಳು ಬೇರೆ ಬೇರೆ ವಿವಾದಗಳಲ್ಲಿ ಕೇಳಿಬರುತ್ತಿರುವುದು ಸಾಮಾನ್ಯವಾಗಿದೆ. ಈಗ ಅದೇ ರೀತಿಯ ಒಂದು ಘಟನೆ ಬೆಳಕಿಗೆ ಬಂದಿದೆ. ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ರಜತ್ ಕಿಶನ್ ವಿರುದ್ಧ ಇದೀಗ FIR ದಾಖಲಾಗಿದೆ.

Rajath ಮೇಲೆ ಬಿತ್ತು ಮತ್ತೊಂದು ಕೇಸ್
ಬೆಂಗಳೂರಿನ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ Rajath ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ ಅವರ ಆಪ್ತನಿಗೆಬೆದರಿಕೆನೀಡಿದ ಆರೋಪದಡಿ ಈ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
READ THIS : ಸಿದ್ದು ದಾಖಲೆಯ ಬಜೆಟ್ನಲ್ಲಿ ತುಮಕೂರಿಗೆ ಸಿಕ್ಕಿದ್ದೇನು..?

ಡಾಗ್ ಸತೀಶ್ vs ಬುಜ್ಜಿಫೈಟ್!
ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಇನ್ನು ದೂರಿನಲ್ಲಿ, ಫೋನ್ ಕರೆ ಮೂಲಕ ಬೆದರಿಕೆ ಹಾಕಿ, ಡಾಗ್ಸತೀಶ್ ಅವರ ಸ್ನೇಹವನ್ನು ಬಿಡಬೇಕು ಹಾಗೂ ಅವರೊಂದಿಗೆ ಓಡಾಡಬಾರದು ಎಂದು ಬೆದರಿಕೆ ಹಾಕಿದ್ದಾರೆ.
Sir this is Rajath Buji, call maadtidini call back madthira… illa nave olage kalusbeka? ಎಂದು ಮೆಸೇಜ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಜೊತೆಗೆ ಕಾನ್ಫರೆನ್ಸ್ ಕಾಲ್ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ
ಹೀಗಾಗಿ ಕಾನ್ಫರೆನ್ಸ್ ಕಾಲ್ ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪದಂತೆ ಘಟನೆ ಸಂಬಂಧ BNS 351(2), 352 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.
ಜೊತೆಗೆ ಕರೆಯಲ್ಲಿ ಮಾತನಾಡಿರೋದು ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್, ಅಥವಾ ಬೇರೆ ವ್ಯಕ್ತಿನಾ ಎಂದು ಪೊಲೀಸರ ಪರಿಶೀಲನೆ ನಡೆಸುತ್ತಿದ್ದಾರೆ.
ಸದ್ಯ ದೂರಿನ ಆಧಾರದ ಮೇಲೆ ರಜತ್ ಹಾಗೂ ಕಿರಣ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

MUSR WATCH : ಹೆಬ್ಬೂರು ಬಳಿ ಗಂಡನನ್ನೇ ಕೊಂ*ದ್ದ ಹೆಂಡ್ತಿ – ಕೊಲೆ ರಹಸ್ಯದ ಬಗ್ಗೆ SP ಏನಂದ್ರು?




