17 ನೇ ಬಜೆಟ್ ಮಂಡನೆ ಮೂಲಕ ಸಿದ್ದರಾಮಯ್ಯ ದಾಖಲೆ – ಬಜೆಟ್ನಲ್ಲಿ Tumkurಗೆ ಬಂಫರ್ ಕೊಡುಗೆ ನೀಡಿದ CM.

ಸಿಎಂ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಿದ್ದು, ದಾಖಲೆಯ 17ನೇ ಬಜೆಟ್ ಮಂಡಿಸಿದ್ದಾರೆ. ಎರಡನೇ ಬಾರಿ ಸಿಎಂ ಆದ ಬಳಿಕ ಸಿದ್ದರಾಮಯ್ಯ 10ನೇ ಬಾರಿ ಬಜೆಟ್ ಮಂಡನೆ ಮಾಡಿದ್ದು, ಒಟ್ಟು 4.48 ಲಕ್ಷ ಕೋಟಿ ಗಾತ್ರದ ಬಜೆಟ್ ಇದಾಗಿದ್ದು, ವಿವಿಧ ಕ್ಷೇತ್ರಗಳಿಗೆ ಅನುದಾನವನ್ನು ಘೋಷಣೆ ಮಾಡಿದ್ದಾರೆ.
Tumkur ನಗರದ ಬೆಂಗಳೂರು ನಗರಕ್ಕೆ ಪರ್ಯಾಯ ನಗರವಾಗಿ ಬೆಳೆಯುತ್ತಿದ್ದು, ಸಿದ್ದು ಬಜೆಟ್ನಲ್ಲಿ ಸುಮಾರು 6 ಕೋಟಿ ಅನುದಾನವನ್ನು ಘೋಷಣೆ ಮಾಡಿದ್ದಾರೆ.

ನೀರಾವರಿ ಸಮಸ್ಯೆಗೆ ಹೆಚ್ಚಿನ ಆದ್ಯತೆ
ಸಿದ್ದರಾಮಯ್ಯ ಅವರ ಬಜೆಟ್ ಮಂಡನೆಯಲ್ಲಿ ತುಮಕೂರಿಗೆ ಹೆಚ್ಚಿನ ಅನುದಾನ ನೀಡುವಂತೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದ್ದು, ತುಮಕೂರು ಜಿಲ್ಲೆಗೆ ಸಾಕಷ್ಟು ಅನುದಾನವನ್ನು ನೀಡುವ ಮೂಲಕ ಜಿಲ್ಲೆಗೆ ಸಿದ್ದು ಕೊಡುಗೆ ನೀಡಿದ್ದಾರೆ. ನೀರಾವರಿ ಕ್ಷೇತ್ರಕ್ಕೆ ಮಹತ್ವ ನೀಡಿರುವ ಸಿಎಂ ಸಿದ್ದರಾಮಯ್ಯ, ಎತ್ತಿನಹೊಳೆ ಕಾಮಗಾರಿ ಪೂರ್ಣಕ್ಕೆ ಆದ್ಯತೆ ನೀಡಿದ್ದಾರೆ.
ಎತ್ತಿನಹೊಳೆ ಕಾಮಗಾರಿಯ ಬಾಕಿ ಇರುವ 18.73 ಕಿಲೋ ಮೀಟರ್ ಕಾಲುವೆ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲು ಸಿದ್ದರಾಮಯ್ಯ ಬಜೆಟ್ನಲ್ಲಿ ತೀರ್ಮಾನಿಸಿದ್ದಾರೆ.
ಹೆಚ್ಚುವರಿ ನೀರನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಕೊರಟಗೆರೆ ತಾಲೂಕಿನ ವಡೇರಹಳ್ಳಿ ಸಮೀಪದ 1.2 ಟಿಎಂಸಿ ಸಾಮರ್ಥ್ಯದ ಡ್ಯಾಂ ನಿರ್ಮಾಣಕ್ಕೆ ಸಿದ್ದು ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ.
ಈ ಮೂಲಕ ಬರ ಪೀಡಿತ ತಾಲೂಕುಗಳಲ್ಲಿ ನೀರಾವರಿ ಸಮಸ್ಯೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಕಲಾವಿದರನ್ನು ಬೆಳೆಸಲು ಸಿದ್ದು ಆದ್ಯತೆ
ಇನ್ನು ಸಿಎಂ ಸಿದ್ದರಾಮಯ್ಯ ಬಜೆಟ್ನಲ್ಲಿ ತುಮಕೂರಿನಲ್ಲಿರುವ ಗುಬ್ಬಿ ವೀರಣ್ಣ ಕಲಾ ಮಂದಿರವನ್ನು ಉನ್ನತೀಕರಣಗೊಳಿಸಲು ಸುಮಾರು 3 ಕೋಟಿ ರೂಪಾಯಿ ಅನುದಾನವನ್ನು ಸಿದ್ದು ಘೋಷಣೆ ಮಾಡಿದ್ದಾರೆ.
ಈ ಮೂಲಕ ಕಲಾವಿದರನ್ನು ಬೆಳೆಸಲು ಸಿದ್ದು ಆದ್ಯತೆ ನೀಡಿದ್ದಾರೆ.
READ THIS : ಈ ವರ್ಷ1.32 ಲಕ್ಷ ಕೋಟಿ ಸಾಲ – ಸಾಲಗಾರ ಸಿದ್ದರಾಮಯ್ಯ – BJP ಟೀಕೆ..!!

ಜಿಲ್ಲೆಯ ಕ್ರೀಡಾಪಟುಗಳಿಗೆ ಗುಡ್ ನ್ಯೂಸ್
ಇನ್ನು ತುಮಕೂರಿನಲ್ಲಿ ಈಗಾಗಲೇ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾನಾ ತರಭೇತಿ ಕೇಂದ್ರಗಳು ನಿರ್ಮಾಣ ಆಗ್ತಾ ಇದ್ದು, ಇದೀಗ ಬಜೆಟ್ನಲ್ಲಿ ತುಮಕೂರು ಜಿಲ್ಲೆಯಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಸುಮಾರು ಮೂರು ಕೋಟಿ ವೆಚ್ಚದಲ್ಲಿ ಉನ್ನತೀಕರಣಕ್ಕೆ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಈ ಮೂಲಕ ತುಮಕೂರು ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿಯ ಕೆಲಸಗಳು ಆಗಲಿದ್ದು, ಜಿಲ್ಲೆಯ ಕ್ರೀಡಾಪಟುಗಳಿಗೆ ಗುಡ್ ನ್ಯೂಸ್ ಅಂತಾನೇ ಹೇಳಲಾಗ್ತಿದೆ.

ಬಜೆಟ್ನಲ್ಲಿ ಸಿದ್ದು ಸಂತಸ
ಇನ್ನು ಸಿಎಂ ಸಿದ್ದರಾಮಯ್ಯ ಜನರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಈಗಾಗಲೇ ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಕ್ಯಾನ್ಸರ್ ಆಸ್ಪತ್ರೆಯನ್ನು ಪೂರ್ಣಗೊಳಿಸಲಾಗಿರುವ ಬಗ್ಗೆ ಬಜೆಟ್ನಲ್ಲಿ ಸಿದ್ದು ಸಂತಸ ವ್ಯಕ್ತಪಡಿಸಿದ್ರು.
6 ಕೋಟಿ ಅನುದಾನ ಘೋಷಣೆ
ಒಟ್ನಲ್ಲಿ ಸಿದ್ದರಾಮಯ್ಯ ಅವರ 17ನೇ ಬಜೆಟ್ನಲ್ಲಿ ಹೇಳಿಕೊಳ್ಳದಷ್ಟು ಅನುದಾನವನ್ನು ಜಿಲ್ಲೆಗೆ ಕೊಡದಿದ್ದರೂ ಕೂಡ 6 ಕೋಟಿ ಅನುದಾನವನ್ನು ಘೋಷಣೆ ಮಾಡಿದ್ದಾರೆ.
ಈ ಮೂಲಕ ಜಿಲ್ಲೆ ಮತ್ತಷ್ಟು ಅಭಿವೃದ್ಧಿಗೆ ಸಹಕಾರಿ ಆಗಲಿದೆ ಅಂತಾ ಕೆಲವರು ಅಭಿಪ್ರಾಯ ಪಟ್ಟರೆ, ಇನ್ನು ಕೆಲವರು ಇನ್ನು ಹೆಚ್ಚಿನ ಅನುದಾನ ಘೋಷಣೆ ಮಾಡಬೇಕಿತ್ತು ಅಂತಾ ಬೇಸರ ವ್ಯಕ್ತಪಡಿಸ್ತಾ ಇದ್ದಾರೆ.

MUST WATCH : ಯುವ ಸಬಲೀಕರಣ ವಿಶೇಷ ಕಾರ್ಯಾಗಾರ ಇದ್ರಿಂದ ವಿದ್ಯಾರ್ಥಿಗಳಿಗೆ ಎಷ್ಟು ಉಪಯೋಗ




