ಬಿಗ್ ಬಾಸ್ ಮಾಜಿ ಸ್ಪರ್ಧಿ Rajath ಗೆ ಮತ್ತೆ ಸಂಕಷ್ಟ : ಸಿಗರೇಟ್ ಹಿಡಿದು ಫೋಟೋ ಶೂಟ್ ಮಾಡಿದಕ್ಕೆ ‘FIR’ ದಾಖಲು!

ಸಾಂಸ್ಕೃತಿಕ ನಗರಿ ಮೈಸೂರಿನ ಪಾರಂಪರಿಕ ಕಟ್ಟಡದ ಮುಂದೆ ಬಗ್ ಬಾಸ್ ಖ್ಯಾತಿಯ ರಜತ್ ಕಿಶನ್ ಸಿಗರೇಟ್ ಸೇದುತ್ತಾ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ರಜತ್ ಅವರ ಈ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಪಾರಂಪರಿಕ ಕಟ್ಟಡದ ಬಳಿ ಸಿಗರೇಟ್ ಸೇದಿ ಫೋಟೋಶೂಟ್
ಹೌದು Rajath ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಲನ್ ಪಾತ್ರದಲ್ಲಿ ಕಾರ್ ನಲ್ಲಿ ಎಂಟ್ರಿಕೊಟ್ಟು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಮೈಸೂರಿನ ಹಳೆ ಡಿಸಿ ಕಚೇರಿಯ ಬಳಿ ಪಾರಂಪರಿಕ ಕಟ್ಟಡದ ಬಳಿ ಫೋಟೋ ಶೂಟ್ ಮಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ಆದರೆ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎನ್ನುವ ಬರವಣಿಗೆ ಇಲ್ಲದೆ ಪೋಸ್ಟ್ ಮಾಡಿದ್ದರಿಂದ ಕನ್ನಡಪರ ಹೋರಾಟಗಾರರು ಇದೀಗ ಮೈಸೂರಿನ ಲಕ್ಷ್ಮಿಪುರ ಪೊಲೀಸ್ ಠಾಣೆಗೆ ರಜತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಇದನ್ನು ಓದಿ : ಮಾರ್ಚ್ 18 ರಿಂದ SSLC ಪರೀಕ್ಷೆಆರಂಭ – ವಿದ್ಯಾರ್ಥಿಗಳೇ ಈ ನಿಯಮಗಳ ಪಾಲನೆ ಕಡ್ಡಾಯ.!

‘ಜೈಲಿಗೆ ಹೋಗಿ ಬಂದ್ರೂ ಬುದ್ಧಿ ಕಲಿಲ್ಲ’ ಎಂದ ಫ್ಯಾನ್ಸ್..!
ಈ ಹಿಂದೆ ಕೂಡ ಶೂಟಿಂಗ್ ಸೆಟ್ನಲ್ಲಿ ಮಾರಕಾಸ್ತ್ರ ಹಿಡಿದು ಫೋಟೋಶೂಟ್ ಮಾಡಿಸಿಕೊಂಡ ಕಾರಣ ಪೊಲೀಸರ ಜೈಲು ಅನುಭವ ಪಡೆದ ರಜತ್, ಈಗ ಮತ್ತೊಮ್ಮೆ ಬೇಜವಾಬ್ದಾರಿತನ ತೋರಿಸಿದ್ದಾರೆ. “ಜೈಲಿಗೆ ಹೋಗಿ ಬಂದರೂ ಇವರಿಗೆ ಬುದ್ಧಿ ಬಂದಿಲ್ಲವೇ?” ಎಂದು ನೆಟ್ಟಿಗರು ಕಾಮೆಂಟ್ ಮೂಲಕ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಇದನ್ನು ನೋಡಿ : METRO ಪ್ರಯಾಣಿಕರಿಗೆ ಮತ್ತೆ SHOCK – ಫೆಬ್ರವರಿ 9 ರಿಂದ ಹೊಸ ದರ ಜಾರಿ




