Gadag ತಾಲೂಕಿನ ಹರ್ತಿ ಬಳಿ ಟಾಟಾ ಏಸ್ ಗೂಡ್ಸ್ ವಾಹನ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ 8 ಮಂದಿ ಗಾಯಗೊಂಡಿದ್ದಾರೆ.

Gadag ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ ಎಂಟು ಮಂದಿ ಗಾಯಗೊಂಡ ಘಟನೆ ನಡೆದಿದೆ. ಕಾಮಣ್ಣನ ಉತ್ಸವ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಟಾಟಾ ಏಸ್ (Tata Ace) ಗೂಡ್ಸ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.
ಈ ದುರ್ಘಟನೆ ಗದಗ (Gadag) ತಾಲೂಕಿನ ಹರ್ತಿ (Harti) ಗ್ರಾಮದ ಬಳಿ ನಡೆದಿದೆ. ಉತ್ಸವ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದವರಿದ್ದ ವಾಹನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ.
READ THIS : ದಾಖಲೆಯ 17ನೇ ಬಜೆಟ್ ಮಂಡಿಸಲಿರುವ Siddaramaiah – ನಿರೀಕ್ಷೆಗಳೇನು?

ಇಬ್ಬರು ಸ್ಥಳದಲ್ಲೇ ಸಾವು
ಅಪಘಾತದ ಪರಿಣಾಮವಾಗಿ ಮುತ್ತಪ್ಪ ಸುಟಗೇರಿ (35) , ನಿಂಗಪ್ಪ ಯಳವತ್ತಿ (36) ಇವರು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನೂ ಎಂಟು ಮಂದಿ ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಉತ್ಸವ ನೋಡಲು ಹೋದವರ ಮೇಲೆ ದುರ್ಘಟನೆ
ಮೃತರು ಹಾಗೂ ಗಾಯಾಳುಗಳು ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದ ನಿವಾಸಿಗಳು.
ಗೋಜನೂರಿನಲ್ಲಿ ನಡೆದ ಕಾಮಣ್ಣನ ಉತ್ಸವದ ಡಿಜೆ ಮೆರವಣಿಗೆ ನೋಡಲು ಒಟ್ಟು 10 ಮಂದಿ ಹೋಗಿದ್ದರು.
ಉತ್ಸವ ಮುಗಿಸಿಕೊಂಡು ಬೆಳಗಿನ ಜಾವ ಗೋಜನೂರಿನಿಂದ ಹಿರೇಕೊಪ್ಪಕ್ಕೆ ಹಿಂದಿರುಗುವಾಗ ಚಾಲಕನಿಗೆ ನಿದ್ರೆ ಮಂಪರು ಬಂದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ವಾಹನ ಸಂಪೂರ್ಣ ನಜ್ಜುಗುಜ್ಜು
ಅಪಘಾತದ ತೀವ್ರತೆಗೆ ಟಾಟಾ ಏಸ್ ಗೂಡ್ಸ್ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
MUST WATCH : ಕೊಂಡೋತ್ಸವದ ವೇಳೆ ಪವಾಡ..! ದೇವರ ಪವಾಡಕ್ಕೆ ಭಕ್ತರು ಬೆರಗು..! |




