Rashmika – Vijay ಅವರು ಈಗ ಬಹಳ ಗ್ರ್ಯಾಂಡ್ ಆಗಿ ಹೈದರಾಬಾದ್ನಲ್ಲಿ ರಿಸೆಪ್ಷನ್ ಮಾಡಿಕೊಂಡಿದ್ದಾರೆ.

ನ್ಯಾಯನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ವಿವಾಹ ಆರತಕ್ಷತೆ ಸಮಾರಂಭ ಹೈದರಾಬಾದ್ನಲ್ಲಿ ಅದ್ಧೂರಿಯಾಗಿ ನೆರವೇರಿತು.

ಹೈದರಾಬಾದ್ನಲ್ಲಿ Rashmika – Vijay ರಾಯಲ್ ಆರತಕ್ಷತೆ
ಫೆಬ್ರವರಿ 26 ರಂದು ಅತ್ಯಂತ ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿಜಯ್ ಹಾಗೂ ರಶ್ಮಿಕಾ ಸತಿ-ಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಿನ್ನೆ ಹೈದರಾಬಾದ್ನ ಐಷಾರಾಮಿ ‘ತಾಜ್ ಕೃಷ್ಣ’ ಹೋಟೆಲ್ನಲ್ಲಿ ತಾರಾ ಜೋಡಿಯ ಆರತಕ್ಷತೆ ಕಾರ್ಯಕ್ರಮವನ್ನು ಬಹಳ ಅದ್ಧೂರಿಯಾಗಿ ಆಯೋಜಿಸಲಾಗಿತ್ತು.

ಸಾಂಪ್ರದಾಯಿಕ ಉಡುಗೆ
ಇನ್ನು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರುವುದು ನವಜೋಡಿಯ ಉಡುಗೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಮದುವೆ ಅಥವಾ ರಿಸೆಪ್ಷನ್ ಕಾರ್ಯಕ್ರಮಗಳಲ್ಲಿ ದುಬಾರಿ ಡಿಸೈನರ್ ಉಡುಪುಗಳನ್ನು ಧರಿಸುವುದು ಸಾಮಾನ್ಯ. ಆದರೆ ಈ ಜೋಡಿ ಅದಕ್ಕೆ ಭಿನ್ನವಾಗಿ ಅಪ್ಪಟ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿ ಎಲ್ಲರ ಗಮನ ಸೆಳೆದರು.

ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಿದ ನ್ಯಾಯನಲ್ ಕ್ರಶ್
Rashmika Mandanna ಅವರು ಕರ್ನಾಟಕದ ಹೆಮ್ಮೆಯಾದ ಕೆಂಪು ಬಣ್ಣದ ‘ಮೈಸೂರು ಸಿಲ್ಕ್’ ಸೀರೆಯಲ್ಲಿ ಕಂಗೊಳಿಸಿದರೆ, Vijay Deverakonda ಪಂಚೆ ಮತ್ತು ಶರ್ಟ್ ಧರಿಸಿ ಸರಳ ದೇಸಿ ಲುಕ್ನಲ್ಲಿ ಕಾಣಿಸಿಕೊಂಡರು. ಸಾಂಪ್ರದಾಯಿಕ ಉಡುಗೆಯಲ್ಲಿ ಗ್ರ್ಯಾಂಡ್ ಎಂಟ್ರಿ ನೀಡಿದ ಈ ಜೋಡಿಯನ್ನು ಅಲ್ಲಿದ್ದ ಅತಿಥಿಗಳು ಕಣ್ತುಂಬಿಕೊಂಡಿದ್ದಾರೆ.
READ THIS : Bengaluru|ಪವಿತ್ರಾ ಗೌಡ ಮನೆ ಊಟಕ್ಕೆ ಸಂಪೂರ್ಣ ಬ್ರೇಕ್!

ಆರತಕ್ಷತೆಯಲ್ಲಿ ಭಾಗಿಯಾದ ಡಿಸಿಎಂ ಡಿಕೆಶಿ
ಇನ್ನು ಈ ಕಾರ್ಯಕ್ರಮದಲ್ಲಿ ರಾಮ್ ಚರಣ್, ಚಿರಂಜೀವಿ, ಅಲ್ಲು ಅರ್ಜುನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಭಾಗಿ ಆದರು.

ಡಿಕೆ ಶಿವಕುಮಾರ್ ಟ್ವೀಟ್ನಲ್ಲಿ ಏನಿದೆ?
ಡಿಕೆ ಶಿವಕುಮಾರ್ ಟ್ವೀಟ್ನಲ್ಲಿ Vijay – Rashmika ಅವರ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಲು ಮತ್ತು ವೈಯಕ್ತಿಕವಾಗಿ ದಂಪತಿಗಳಿಗೆ ನನ್ನ ಶುಭಾಶಯಗಳನ್ನು ತಿಳಿಸಲು ಸಂತೋಷವಾಗಿದೆ. ಅವರು ಈ ಹೊಸ ಅಧ್ಯಾಯವನ್ನು ಒಟ್ಟಿಗೆ ಪ್ರಾರಂಭಿಸುತ್ತಿರುವಾಗ ಅವರೆಲ್ಲರಿಗೂ ಸಂತೋಷ ಮತ್ತು ಒಗ್ಗಟ್ಟಿನ ಜೀವನವನ್ನು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
MUST WATCH : ಕೊಂಡೋತ್ಸವದ ವೇಳೆ ಪವಾಡ..! ದೇವರ ಪವಾಡಕ್ಕೆ ಭಕ್ತರು ಬೆರಗು




