ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ Pavithra Gowda ಗೆ ಹೈಕೋರ್ಟ್ನಲ್ಲಿ ಹಿನ್ನಡೆ ಆಗಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ Pavithra Gowda ಗೆ ಹೈಕೋರ್ಟ್ನಲ್ಲಿ ಹಿನ್ನಡೆಯಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ಪವಿತ್ರಾ ಗೌಡ ವಿಶೇಷ ಅನುಮತಿಗಳೊಂದಿಗೆ ಜೈಲಿಗೆ ನಾಗರಾಜ್ ಮತ್ತು ಲಕ್ಷ್ಮಣ್ ಅವರುಗಳು ಮನೆಯಿಂದಲೇ ಊಟ ತರಿಸಿಕೊಳ್ಳುತ್ತಿದ್ದರು. ಇದೀಗ ಆ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದ್ದು, ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳ ಮನೆ ಊಟಕ್ಕೆ ಬ್ರೇಕ್ ಬಿದ್ದಿದೆ.
Pavithra Gowda ಮನೆ ಊಟಕ್ಕೆ ಸಂಪೂರ್ಣ ಬ್ರೇಕ್!
ಈ ಹಿಂದೆ 57ನೇ ಸಿಸಿಎಚ್ ನ್ಯಾಯಾಲಯವು ವಾರಕ್ಕೊಮ್ಮೆ ಅಥವಾ ವೈದ್ಯಕೀಯ ಕಾರಣಗಳಿದ್ದರೆ ಮನೆಯಿಂದ ಊಟ ತರಿಸಿಕೊಳ್ಳಲು ಅವಕಾಶ ನೀಡಿತ್ತು.
ಅದರಂತೆ ಪವಿತ್ರಾ ಗೌಡ ಸೇರಿದಂತೆ ಪ್ರಕರಣದ ಇತರೆ ಆರೋಪಿಗಳಾದ ನಾಗರಾಜ್ ಮತ್ತು ಲಕ್ಷ್ಮಣ್ ಕೂಡ ಮನೆಯಿಂದ ಊಟ ಪಡೆಯುತ್ತಿದ್ದರು.

ವೈದ್ಯಕೀಯ ಸಲಹೆ ಇದ್ದರೆ ಮಾತ್ರ ಅವಕಾಶ
ಈ ವಿಶೇಷ ಅನುಮತಿಯನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು 57ನೇ ಸಿಸಿಎಚ್ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸಿದ್ದಾರೆ. “ಆರೋಪಿ ಕೇಳಿದ ಕೂಡಲೇ ಮನೆ ಊಟಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ವೈದ್ಯಕೀಯ ಸಲಹೆ ಇದ್ದರೆ ಮಾತ್ರ ಅವಕಾಶ” ಎಂದು ಸ್ಪಷ್ಟಪಡಿಸಿದ್ದಾರೆ.
READ THIS : ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಬಲೆಗೆ ಬಿದ್ದ ಆಹಾರ ನಿರೀಕ್ಷಕ

ವಿಶೇಷ ಸೌಲಭ್ಯಕ್ಕೆ ವಿರೋಧ
ಜೈಲಧಿಕಾರಿಗಳು ಆರಂಭದಿಂದಲೂ ಈ ವಿಶೇಷ ಸೌಲಭ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಜೈಲಿನಲ್ಲಿ ಎಫ್ಎಸ್ಎಸ್ಎಐ ಮಾರ್ಗಸೂಚಿಗಳಂತೆ ಗುಣಮಟ್ಟದ, ಶುಚಿ ಮತ್ತು ಆರೋಗ್ಯಕರ ಆಹಾರವನ್ನು ಎಲ್ಲಾ ಕೈದಿಗಳಿಗೆ ನೀಡಲಾಗುತ್ತಿದೆ.
ಹೀಗಿರುವಾಗ ಕೆಲವರಿಗೆ ಮಾತ್ರ ಮನೆ ಊಟ ನೀಡುವುದು ಸಮಂಜಸವಲ್ಲ ಎಂದು ವಾದಿಸಿದ್ದರು. ವಾದ ಆಲಿಸಿದ್ದ ಹೈಕೋರ್ಟ್ ಕಳೆದ ತಿಂಗಳೇ ಮನೆ ಊಟಕ್ಕೆ ತಡೆ ನೀಡಿತ್ತು. ಇದೀಗ ತಡೆಯನ್ನು ಆದೇಶವನ್ನಾಗಿ ಬದಲಾಯಿಸಿದ್ದು, ಇದೀಗ ಪವಿತ್ರಾ ಮತ್ತು ಇತರೆ ಆರೋಪಿಗಳಮನೆಊಟಕ್ಕೆಸಂಪೂರ್ಣಬ್ರೇಕ್ ಬಿದ್ದಿದೆ.

MUST THIS : KB CROSS ನಲ್ಲಿ ಬಸ್ ನಿಲ್ದಾಣವೇ ಇಲ್ಲ ಬಿಸಿಲು, ಮಳೆಯಲ್ಲೇ ಪ್ರಯಾಣಿಕರ ಪರದಾಟ




