ಸಪ್ತ ಸಾಗರದಾಚೆ ಎಲ್ಲೊ ಹಾಗೂ ಕಾಂತಾರ: ಚಾಪ್ಟರ್ 1 ಬಳಿಕ Rukmini Vasanth ತಮಿಳಿನ ಧ್ರುವ್ ವಿಕ್ರಂ ಜೊತೆ ಹೊಸ ಪ್ರೇಮಕಥೆ ಸಿನಿಮಾದಲ್ಲಿ ನಟಿಸಲಿದ್ದಾರೆ…

ಕನ್ನಡದ ಪ್ರತಿಭಾವಂತ ನಟಿ Rukmini Vasanth ಈಗ ತಮಿಳು ಚಿತ್ರರಂಗದಲ್ಲೂ ಮತ್ತೊಂದು ದೊಡ್ಡ ಅವಕಾಶವನ್ನು ಕೈಸೇರಿಸಿಕೊಂಡಿದ್ದಾರೆ.
‘ಸಪ್ತ ಸಾಗರದಾಚೆ ಎಲ್ಲೊ’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳ ಯಶಸ್ಸಿನ ಬಳಿಕ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಧ್ರುವ್ ವಿಕ್ರಂ ಜೊತೆ ಹೊಸ ಪ್ರೇಮಕಥೆ ಸಿನಿಮಾ
ರುಕ್ಮಿಣಿ ವಸಂತ್ ಅವರು ತಮಿಳಿನ ಯುವ ನಟ Dhruv Vikram (ಚಿಯಾನ್ ವಿಕ್ರಂ ಪುತ್ರ) ಜೊತೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ.
ಇದು ಧ್ರುವ್ ವಿಕ್ರಂ ಅವರ ನಾಲ್ಕನೇ ಸಿನಿಮಾ ಆಗಿದ್ದು, ಅಪ್ಪಟ ಪ್ರೇಮಕಥಾ ಚಿತ್ರವಾಗಿರಲಿದೆ. ಸಿನಿಮಾದಲ್ಲಿ ಮತ್ತೊಬ್ಬ ನಾಯಕಿಯೂ ಇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹೊಸ ನಿರ್ದೇಶಕ, ಖ್ಯಾತ ನಿರ್ಮಾಣ ಸಂಸ್ಥೆ
ಈ ಸಿನಿಮಾವನ್ನು ಹೊಸ ನಿರ್ದೇಶಕ ದೀಪಕ್ ರೆಡ್ಡಿ ನಿರ್ದೇಶಿಸಲಿದ್ದಾರೆ. ಕಿರುಚಿತ್ರದ ಮೂಲಕ ಗಮನ ಸೆಳೆದಿದ್ದ ಅವರು, ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಹೊರಹೊಮ್ಮಲಿದ್ದಾರೆ.
ಖ್ಯಾತ ನಿರ್ಮಾಣ ಸಂಸ್ಥೆ Mythri Movie Makers ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.
ಚಿತ್ರೀಕರಣ ಏಪ್ರಿಲ್ ತಿಂಗಳಲ್ಲಿ ಆರಂಭವಾಗಲಿದೆ.
ಇದನ್ನು ಓದಿ : Bengaluru| ಡ್ರ್ಯಾಗರ್ನಿಂದ ಇರಿದು ವ್ಯಕ್ತಿಯ ಬರ್ಬರ Murder?

ರುಕ್ಮಿಣಿ ವಸಂತ್ ಬ್ಯುಸಿ ಶೆಡ್ಯೂಲ್
ಪ್ರಸ್ತುತ ರುಕ್ಮಿಣಿ ವಸಂತ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
- Toxic ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗಲಿದೆ.
- Jr. NTR ನಟನೆಯ ಹೊಸ ಸಿನಿಮಾದಲ್ಲೂ ಅವರು ಅಭಿನಯಿಸುತ್ತಿದ್ದಾರೆ.
- ಈ ಚಿತ್ರಕ್ಕೆ Prashanth Neel ನಿರ್ದೇಶನ ಮಾಡುತ್ತಿದ್ದಾರೆ.
- ಜೊತೆಗೆ ಹಿಂದಿಯೊಂದರಿಂದಲೂ ಹೊಸ ಆಫರ್ ಬಂದಿದ್ದು, ಶೀಘ್ರದಲ್ಲೇ ಆ ಸಿನಿಮಾ ಆರಂಭವಾಗಲಿದೆ.

ಒಂದರ ಹಿಂದೆ ಒಂದಾಗಿ ದೊಡ್ಡ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ರುಕ್ಮಿಣಿ ವಸಂತ್, ದಕ್ಷಿಣದಿಂದ ಬಾಲಿವುಡ್ ವರೆಗೂ ತಮ್ಮ ಪ್ರತಿಭೆಯನ್ನು ಚಾಟುವ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗುವತ್ತ ವೇಗವಾಗಿ ಹೆಜ್ಜೆ ಇಡುತ್ತಿದ್ದಾರೆ.
ಇದನ್ನು ನೋಡಿ : ಮುಂದೆ ಮೈತ್ರಿ ಅಧಿಕಾರಕ್ಕೆ ಬಂದ್ರೆ ಗ್ಯಾರಂಟಿ ಯೋಜನೆ ಸಿಗುತ್ತಾ..?




