ಬೆಂಗಳೂರಿನಲ್ಲಿ ವ್ಯಕ್ತಿಯೋರ್ವನ ಬರ್ಬರ Murder ನಡೆದಿದೆ.

ಬೆಂಗಳೂರು ನಗರದ ಬಸವೇಶ್ವರನಗರ ವ್ಯಾಪ್ತಿಯ ಶಿವನಹಳ್ಳಿಯಲ್ಲಿ ವ್ಯಕ್ತಿಯೊಬ್ಬರ ಬರ್ಬರ ಹತ್ಯೆ ನಡೆದ ಘಟನೆ ತಡರಾತ್ರಿ ಬೆಳಕಿಗೆ ಬಂದಿದೆ.
ಡ್ರ್ಯಾಗರ್ನಿಂದ ಇರಿದುMurder
ರಾತ್ರಿ 11.30ರ ಸುಮಾರಿಗೆ ಶಶಿಕುಮಾರ್ ಎಂಬಾತನನ್ನು ಚಾಕು ಹಾಗೂ ಡ್ಯಾಗರ್ನಿಂದ ಇರಿದು ಕೊಲೆ ಮಾಡಲಾಗಿದೆ. ಈ ಭೀಕರ Murder ಶಿವನಹಳ್ಳಿಯಲ್ಲಿರುವ ಶ್ರೀ ಗುರು ರಾಘವೇಂದ್ರ ವೆಜ್ & ದೋಸೆ ಕಾರ್ನರ್ ಹೋಟೆಲ್ ಬಳಿ ನಡೆದಿದೆ.

ಊಟಕ್ಕೆ ಬಂದಿದ್ದವನ ಅಟ್ಯಾಕ್
ಮೃತ ಶಶಿಕುಮಾರ್ ರಾತ್ರಿ ಊಟಕ್ಕೆ ಹೋಟೆಲ್ಗೆ ಹೋಗಿದ್ದ ವೇಳೆ ಇಬ್ಬರು ವ್ಯಕ್ತಿಗಳೊಂದಿಗೆ ಗಲಾಟೆ ನಡೆದಿದ್ದು, ಗಲಾಟೆಯು ವಿಕೋಪಕ್ಕೆ ತಿರುಗಿ ಅವರು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : ಚಂದ್ರಗ್ರಹಣದ ದಿನವೂ Male Mahadeshwara ದರ್ಶನಕ್ಕೆ ಅವಕಾಶ..!!
ಕ್ಷುಲ್ಲಕ ಕಾರಣಕ್ಕೆ Murder..?
ಇನ್ನು ಘಟನೆಗೆ ಕ್ಷುಲ್ಲಕ ಕಾರಣವೇ ಕಾರಣವೋ ಅಥವಾ ಹಳೆಯ ವೈಷಮ್ಯ ಹಿನ್ನೆಲೆಯೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.

ಈ ಭೀಕರ ಹತ್ಯೆಯಿಂದ ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನು ನೋಡಿ : ಟೀಚರ್ ಬೈದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹ* ಮಾಡಿಕೊಂಡಳಾ..?





