Dharwad ನಿಂದ ಆರಂಭವಾದ ಸರ್ಕಾರಿ ಹುದ್ದೆ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಈಗ ರಾಜ್ಯಾದ್ಯಂತ ವಿಸ್ತರಿಸಲಿದೆ.

Dharwad : ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಸುವಂತೆ ಆಗ್ರಹಿಸಿ ಉದ್ಯೋಗಾಂಕ್ಷಿಗಳಿಗೆ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ಮಾಡಿದ ಬೆನ್ನಲ್ಲೇ ರಾಜ್ಯಾದ್ಯಂತ ಹೋರಟಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಧಾರವಾಡದಲ್ಲಿ ನಡೆದ ಜಂಟಿ ಸುದ್ದಿಗೋಷ್ಟಿಯಲ್ಲಿ ಜನಸಾಮನ್ಯರ ವೇದಿಕೆ,ಉದ್ಯೋಗಾಂಕ್ಷಿಗಳ ಹೋರಾಟ ಸಮಿತಿ ಹಾಗೂ ರೈತ ಸೇನಾ ಮುಖಂಡರು ಸರ್ಕಾರದ ವಿರುದ್ದ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಪಕ್ಷಗಳ ವಿರುದ್ದ ಆಕ್ರೋಶ
ಧಾರವಾಡದಿಂದ ಶುರುವಾದ ಸರ್ಕಾರಿ ಹುದ್ದೆ ಭರ್ತಿಗೆ ಆಗ್ರಹಿಸಿ ಯುವಕರ ಹೋರಾಟ ಈಗ ರಾಜ್ಯಾದ್ಯಂತ ವಿಸ್ತರಿಸಲಾಗಿದೆ. FRBM ಕಾಯ್ದೆಯಿಂದ ಹುದ್ದೆ ಕಡಿತವಾಗುತ್ತಿದ್ದು,56 ಸಾವಿರ ಹುದ್ದೆ ಭರ್ತಿ ಘೋಷಣೆಯೂ ವೇಳಾಪಟ್ಟಿ ಇಲ್ಲದೆ ವಿಳಂಬವಾಗಿದೆ. ಯುವಕರ ದುರ್ಭಳಕೆ ಕುರಿತು ರಾಜಕೀಯ ಪಕ್ಷಗಳ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.
ಇದನ್ನು ಓದಿ : ಸಂಗೀತ್ ಪಾರ್ಟಿಯಲ್ಲಿ ರಾತ್ರಿಯಿಡೀ ಕುಣಿದು ಕುಪ್ಪಳಿಸಿದ Vijay – Rashmika

ಆರು ತಿಂಗಳಿಂದ ನೀವು ಏನು ಮಾಡ್ತಿದ್ದೀರಿ ಎಂದ ವೇದಿಕೆ ಸಂಚಾಲಕ!
ಜನಸಾಮನ್ಯರ ವೇದಿಕೆ ಸಂಚಾಲಕ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ರಾಜ್ಯ ಸರ್ಕಾರ ಕೋಡಲೇ ಖಾಲಿ ಹುದ್ದೆಗಳ ಅಧಿಸೂಚನೆ ಹೊರಡಿಸಬೇಕು. ಕಳೆದ ಆರು ತಿಂಗಳಿನಿಂದ 21 ಜಿಲ್ಲೆಗಳಲ್ಲಿ ಹೋರಾಟ ರೂಪಿಸಿದ್ದೇವೆ.
ಅದರ ಪರಿಣಾಮವಾಗಿ ಬೆಳಗಾವಿ ಅಧಿವೇಶನದಲ್ಲಿ 24 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಲಾಯಿತು. ಆದರೆ ಮೂರು ತಿಂಗಳು ಕಳದರೂ ಅಧಿಸೂಚನೆ ಹೊರಬಂದಿಲ್ಲ ಎಂದು ಆರೋಪಿಸಿದ್ದಾರೆ.
56 ಸಾವಿರ ಭರ್ತಿ ಘೋಷಣೆ ಅದರೂ ಸ್ಪಷ್ಟ ವೇಳಾಪಟ್ಟಿಯಿಲ್ಲ!
ಇತ್ತೀಚೆಗ ಸರ್ಕಾರ 56 ಸಾವರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದರು, ಅದಕ್ಕೆ ಸ್ಪಷ್ಟ ವೇಳಾಪಟ್ಟಿಯಿಲ್ಲ. ಪ್ರತಿಪಕ್ಷ ನಾಯಕರು ನಮ್ಮ ಹೋರಾಟದ ಫಲವೇ ಇದು ಎಂದು ಹೀಳಿಕೊಳ್ಳುತ್ತಿರುವುದನ್ನು ಪ್ರಶ್ನಿಸಿದ ಅವರು, ಆರು ತಿಂಗಳಿನಿಂದ ನೀವು ಏನು ಮಾಡುತ್ತಿದ್ದಿರಿ ಎಂದು ತೀವ್ರವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಯುವಕರನ್ನು ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಪ್ರತಿದಿನ ಒಂದೊಂದು ಜಿಲ್ಲೆಯಲ್ಲಿ ಯುವ ಅಧಿವೇಶನ
FRBM ಕಾಯ್ದೆ ರದ್ದು ಪಡಿಸಬೇಕು ಎಂದು ಆಗ್ರಹಿಸಿ, ಮಾರ್ಚ್ 6ರಿಂದ 22ರವರೆಗೆ ರಾಜ್ಯಾದ್ಯಂತ ಯುವ ಅಧಿವೇಶನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಪ್ರತಿದಿನ ಒಂದೊಂದು ಜಿಲ್ಲೆಯಲ್ಲಿ ಯುವ ಅಧಿವೇಶನ ನಡೆಸಲಾಗುತ್ತಿದ್ದು, ಈ ಹೋರಾಟ ಧಾರವಾಡದಿಂದ ಡಿಸಿ ಕಚೇರಿ ಎದರು ಆರಂಭವಾಗಲಿದ. ಧಾರವಾಡದಿಂದ ಆರಂಭವಾದ ಈ ಚಳುವಳಿ ಈಗ ರಾಜ್ಯಾದ್ಯಂತ ವಿಸ್ತರಿಸಲು ಸಜ್ಜಾಗಿದ್ದು, ಉದ್ದೋಗಾಕಾಂಕ್ಷಿಗಳು ಹೋರಾಟಕ್ಕೆ ಹೊಸ ವೇಗ ಸಿಕ್ಕದೆ.
ಇದನ್ನು ನೋಡಿ : IRAN ಮೇಲೆ ಯುದ್ಧದ EFFECT – ಚಿನ್ನ,ಬೆಳ್ಳಿ ರೇಟ್ ಗೆ ಶಾಕ್ ಆಗ್ತಿರಾ? | GOLD RATE




