ಒಂದೇ ದಿನಕ್ಕೆ ಏರಿಕೆ ಆಯ್ತು Gold Rate – ಚಿನ್ನ, ಬೆಳ್ಳಿ ರೇಟ್ ಕೇಳಿದ್ರೆ ನೀವು ಶಾಕ್ ಆಗ್ತಿರಾ..?

ಇರಾನ್ ದೇಶದ ಮೇಲೆ ಇಸ್ರೇಲ್ ಹಾಗೂ ಅಮೆರಿಕಾ ದೇಶಗಳು ಜಂಟಿಯಾಗಿ ಯುದ್ಧ ನಡೆಸುತ್ತಿದ್ದರೆ, ಮತ್ತೊಂದ್ಕಡೆ ಇರಾನ್ ಕೂಡ ಪ್ರತಿ ದಾಳಿ ನಡೆಸುತ್ತಿದೆ. ಯುದ್ಧದ ಎಫೆಕ್ಟ್ ವಿಶ್ವದ ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದ್ದು ಚಿನ್ನ, ಬೆಳ್ಳಿ ದರ ದಿಢೀರ್ ಏರಿಕೆ ಆಗಿದ್ದು, ಜನರು ಕಂಗಾಲಾಗುವಂತೆ ಮಾಡಿದೆ.

ಒಂದೇ ದಿನಕ್ಕೆ ಏರಿಕೆ ಕಂಡ Gold Rate
ಯುದ್ಧದ ಎಫೆಕ್ಟ್ನಿಂದಾಗಿ ನಿನ್ನೆ ಒಂದೇ ದಿನ 24 ಕ್ಯಾರೆಟ್ 10 ಗ್ರಾಂ Gold Rate ಬರೋಬ್ಬರಿ 8 ಸಾವಿರದ 471 ರೂಪಾಯಿಗೆ ಏರಿಕೆ ಆಗಿದೆ. ಅಲ್ದೇ ಬೆಳ್ಳಿಯ ದರವೂ ಪ್ರತಿ ಕೆ.ಜಿಗೆ 24 ಸಾವಿರ ರೂಪಾಯಿ ದಿಢೀರ್ ಏರಿಕೆ ಆಗಿದೆ. ನಿ
ನ್ನೆ ಚಿನ್ನದ ಬೆಲೆ ಶೇಕಡಾ 5.34ರಷ್ಟು ಏರಿಕೆಯಾಗಿದ್ದು, ಸದ್ಯ 10 ಗ್ರಾಂ ಚಿನ್ನದ ದರ 1 ಲಕ್ಷದ 67 ಸಾವಿರದ 59 ರೂಪಾಯಿಗೆ ತಲುಪಿದೆ. ಮತ್ತೊಂದೆಡೆ, ಬೆಳ್ಳಿ ಬೆಲೆಗಳು ಶೇ.9.09 ರಷ್ಟು ಏರಿಕೆ ಆಗಿದ್ದು, 1 ಕೆಜಿ ಬೆಳ್ಳಿಗೆ 2 ಲಕ್ಷದ 66 ಸಾವಿರದ 127 ರೂಪಾಯಿ ಆಗಿದೆ.
ಇದನ್ನು ಓದಿ : ಗ್ರಹಣ ಆರಂಭಕ್ಕೂ ಮುನ್ನವೇ ತುಮಕೂರಿನ ದೇವಾಲಯಗಳು ಬಂದ್!

ಗ್ರಾಹಕರು ಕಂಗಾಲು
ಇದೀಗ ಮದುವೆ ಶುಭಸಮಾರಂಭಗಳು ಶುರುವಾಗುತ್ತಿದ್ದು, ಕುಸಿದಿದ್ದ ಚಿನ್ನ, ಬೆಳ್ಳಿ ದರದಲ್ಲಿ ದಿಢೀರ್ ಏರಿಕಾ ಆಗ್ತಾ ಇದ್ದು ಗ್ರಾಹಕರನ್ನು ಕಂಗಾಲಾಗುವಂತೆ ಮಾಡುತ್ತಿದೆ.
ಇರಾನ್-ಇಸ್ರೇಲ್ ಯುದ್ಧ ಮುಂದುವರಿದರೆ, ಅನೇಕ ತಜ್ಞರ ಪ್ರಕಾರದಂತೆ ಚಿನ್ನ ಹಾಗೂ ಬೆಳ್ಳಿ ದರಗಳು ಏರಿಕೆ ಆಗುತ್ತಲೇ ಇರುತ್ತದೆ ಎಂದು ಭವಿಷ್ಯ ನುಡಿದಿದ್ದು ಜನರನ್ನು ಚಿಂತೆಗೆ ದೂಡುವಂತೆ ಮಾಡ್ತಿದೆ̤

ಇದನ್ನು ನೋಡಿ : APMC ಮಾರುಕಟ್ಟೆಯಲ್ಲಿ ಕಳ್ಳರ ಕೈಚಳಕ ತರಕಾರಿಯನ್ನು ಬಿಡದೇ ಕದ್ದೊಯ್ದ ಖದೀಮ




