2026ರ ಮೊದಲ ರಕ್ತ ಚಂದ್ರಗ್ರಹಣದ ಹಿನ್ನೆಲೆ Tumakuru ನಗರದ ಈ ದೇವಾಲಯಗಳಲ್ಲಿ ದರ್ಶನ ಬಂದ್ ಆಗಿದೆ.

ಇಂದು 2026ರ ಮೊದಲ ರಕ್ತ ಚಂದ್ರಗ್ರಹಣ (ಕೇತುಗ್ರಸ್ತ ಚಂದ್ರಗ್ರಹಣ) ಸಂಭವಿಸುತ್ತಿದೆ. ಸನಾತನ ಸಂಸ್ಕೃತಿಯಲ್ಲಿ ಗ್ರಹಣಗಳಿಗೆ ವಿಶೇಷ ಪ್ರಾಶಸ್ತ್ಯ ಇರುವ ಹಿನ್ನೆಲೆ, Tumakuru ನಗರದ ಪ್ರಮುಖ ದೇವಾಲಯಗಳಲ್ಲಿ ಗ್ರಹಣ ಅವಧಿಯಲ್ಲಿ ಪೂಜೆ-ಪುನಸ್ಕಾರಗಳನ್ನು ಸ್ಥಗಿತಗೊಳಿಸಿ, ದೇವಾಲಯಗಳ ಬಾಗಿಲುಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.
ಗ್ರಹಣ ಸಮಯದಲ್ಲಿ ಬಂದ್ ಆಗುವ ಪ್ರಮುಖ ದೇವಾಲಯಗಳು
ಪ್ರಮುಖವಾಗಿ ತುಮಕೂರಿನ ಬಿ.ಹೆಚ್. ರಸ್ತೆಯಲ್ಲಿರುವ ಸೋಮೇಶ್ವರ ಸ್ವಾಮಿ ದೇವಾಲಯ, ಕೋತಿ ತೋಪಿನಲ್ಲಿರುವ ಕಾಶಿ ವಿಶ್ವನಾಥ ದೇವಾಲಯ ಹಾಗೂ ಶನೇಶ್ವರ ದೇವಾಲಯಗಳಲ್ಲಿ ಗ್ರಹಣದ ಸಮಯದಲ್ಲಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಗ್ರಹಣ ಮುಗಿದ ನಂತರ ಶಾಂತಿ ಹೋಮ, ಗ್ರಹಣ ದೋಷ ನಿವಾರಣೆಗೆ ವಿವಿಧ ಹೋಮಗಳು ದೇವಾಲಯ ಶುದ್ಧೀಕರಣ ಕಾರ್ಯಗಳನ್ನು ಪೂರ್ಣಗೊಳಿಸಿದ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಇದನ್ನು ಓದಿ : Bengaluru| ಡ್ರ್ಯಾಗರ್ನಿಂದ ಇರಿದು ವ್ಯಕ್ತಿಯ ಬರ್ಬರ Murder?
ಗ್ರಹಣಾನಂತರ ವಿಶೇಷ ಪೂಜಾ ಕಾರ್ಯಕ್ರಮಗಳು – Tumakuru
ಇದಲ್ಲದೆ, ಶ್ರೀ ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಹಾಗೆಯೇ, ಬಿ.ಹೆಚ್. ರಸ್ತೆಯ ಸೋಮೇಶ್ವರ ದೇವಾಲಯದಲ್ಲೂ ಗ್ರಹಣದ ನಂತರ ವಿಶೇಷ ಅಭಿಷೇಕ ಕಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ರಕ್ತ ಚಂದ್ರಗ್ರಹಣದ ಸಮಯ ವಿವರ
ಇಂದು ಸಂಭವಿಸುವ ಗ್ರಸ್ತೋದಯ ಪಾಕ್ಷಿಕ ಕೇತುಗ್ರಸ್ತ ಚಂದ್ರಗ್ರಹಣದ ಸಮಯ ಹೀಗಿದೆ:
- ಸ್ಪರ್ಶ ಕಾಲ: ಮಧ್ಯಾಹ್ನ 2:39
- ಮಧ್ಯಮ ಕಾಲ: ಸಂಜೆ 4:29
- ಮೋಕ್ಷ ಕಾಲ: ಸಂಜೆ 6:19
ಆದ್ದರಿಂದ, ಈ ಅವಧಿಯಲ್ಲಿ ತುಮಕೂರಿನ ಪ್ರಮುಖ ದೇವಾಲಯಗಳು ಬಂದ್ ಆಗಲಿವೆ.
ಇದನ್ನು ನೋಡಿ : ಮುಂದೆ ಮೈತ್ರಿ ಅಧಿಕಾರಕ್ಕೆ ಬಂದ್ರೆ ಗ್ಯಾರಂಟಿ ಯೋಜನೆ ಸಿಗುತ್ತಾ..?




