Yadgir : ಜಾತ್ರೆ ಸಂಭ್ರಮ ಕಣ್ಣೀರಿನಲ್ಲಿ ಅಂತ್ಯ.

Yadgir : ಧಾರ್ಮಿಕ ಉತ್ಸವದ ಉಲ್ಲಾಸ ಕ್ಷಣಾರ್ಧದಲ್ಲಿ ದಾರುಣ ದುರಂತಕ್ಕೆ ತಿರುಗಿದೆ. ಭೀಮಾ ನದಿಯಲ್ಲಿ 7 ವರ್ಷದ ಬಾಲಕಿ ಮುಳುಗಿ ಸಾವನಪ್ಪಿರುವ ದಾರಣ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇದನ್ನು ಓದಿ : 56,432 ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಚಿವ ಸಂಪುಟ ಅಸ್ತು
ಜಾತ್ರೆ ಸಂಭ್ರಮ ಕಣ್ಣೀರಿನಲ್ಲಿ ಅಂತ್ಯ
ಜೋಳದಗಡಿ ಗ್ರಾಮದ ಮೀನುಗಾರ ಕುಟುಂಬದ 7 ವರ್ಷದ ಮರೇಮ್ಮ ಪೋಷಕರೊಂದಿಗೆ ಬೆನಕನಹಳ್ಳಿ ಗ್ರಾಮದಲ್ಲಿ ನಡೆದ ಮಾರಮ್ಮ ದೇವಿಯ ಜಾತ್ರೆಗೆ ಆಗಮಿಸಿದ್ದಳು. ಜಾತ್ರೆಯ ಅಂಗವಾಗಿ ನದಿ ತೀರದಲ್ಲಿ ಜನಸಂದಣಿ ಹೆಚ್ಚಿದ ವೇಳೆ, ಬಾಲಕಿ ಅಜಗೂರಕತೆಯಿಂದ ನೀರಿನೊಳಗೆ ಜಾರಿಬಿದ್ದಿದ್ದಾಳೆ ಎಂದು ತಿಳಿದುಬಂದಿದೆ.
ಚಿಕಿತ್ಸೆ ಫಲಿಸದೇ ಬಾಲಕಿ ಸಾವು – Yadgir
ಇನ್ನು ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ನೀರಿಗೆ ಧುಮುಕಿ ಬಾಲಕಿಗಾಗಿ ರಕ್ಷಣೆ ಕಾರ್ಯಾಚರಣೆ ನಡೆಸಿ, ಪ್ರಜ್ಙಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಹೊರತೆಗೆದಿದ್ದಾರೆ. ಬಳಿಕ ಹೆಚ್ಚಿನ ಚಿಕೆತ್ಸೆಗೆ ಬೆಂಡಬೆಂಬಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಾಲಕಿಯನ್ನು ಸಾಗಿಸಲಾಯಿತು, ಆದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.
ಇದನ್ನು ನೋಡಿ : ಅದ್ದೂರಿಯಾಗಿ ಜರುಗಿದ ಚಿಕ್ಕ ಮಧುರೈ ಶನಿ ಮಹಾತ್ಮಸ್ವಾಮಿಯ ಬ್ರಹ್ಮ ರಥೋತ್ಸವ




