Chamarajanagara : ಮದುವೆ ಮಂಟಪದಲ್ಲಿ ನಡೆದ ದುರ್ಘಟನೆಯಿಂದ ಫೋಟೋಗ್ರಾಫರ್ ಸಾವನ್ನಪ್ಪಿದ್ದಾರೆ.

Chamarajanagara : ಗುಂಡ್ಲುಪೇಟೆ ಪಟ್ಟಣದಲ್ಲಿ ಮದುವೆ ಮಂಟಪದಲ್ಲಿ ನಡೆದ ದುರ್ಘಟನೆಯಿಂದ ಫೋಟೋಗ್ರಾಫರ್ ಪರಿಶಿವಮೂರ್ತಿ ಸಾವನ್ನಪ್ಪಿದ್ದಾರೆ.
ಫೋಟೋಗ್ರಾಫರ್ ದಾರುಣ ಸಾವು
ಮದುವೆ ಆರ್ಡರ್ಗೆ ಆಗಮಿಸಿದ್ದ ಪರಿಶಿವಮೂರ್ತಿ ಮಂಟಪದಲ್ಲಿ ಮದುವೆಯ ಪ್ರಮುಖ ಕ್ಷಣಗಳನ್ನು ಸೆರೆಹಿಡಿಯಲು ಕೆಲಸ ನಡೆಸುತ್ತಿದ್ದ ವೇಳೆ ಅಚಾನಕ್ ಕುಸಿದು ಬಿದ್ದು ಗಾಯಗೊಂಡಿದ್ದಾರೆ. ಅವರೊಂದಿಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ಹಾಗೂ ಮದುವೆ ಮನೆಯವರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ತೀವ್ರ ಗಾಯಗಳಿಂದಾಗಿ ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ : Hassan|ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು ಆರೋಪ

ಸ್ಥಳೀಯರು ಶೋಕ
ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಕುಟುಂಬದ ಏಕೈಕ ಜೀವನೋಪಾಯದ ಆಧಾರವಾಗಿದ್ದ ಪರಿಶಿವಮೂರ್ತಿಯವರ ನಿಧನದಿಂದ ಕುಟುಂಬದವರು ಆರ್ಥಿಕ ಮತ್ತು ಮಾನಸಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಪ್ರಕರಣ ದಾಖಲು
ಇನ್ನು ಘಟನೆ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕುಸಿತದ ನಿಖರ ಕಾರಣ ಹಾಗೂ ಮಂಟಪದಲ್ಲಿ ಸುರಕ್ಷತಾ ಕ್ರಮಗಳ ಕೊರತೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಮದುವೆ ಮಂಟಪಗಳಲ್ಲಿ ಫೋಟೋಗ್ರಾಫರ್ಗಳು ಮತ್ತು ಇತರ ಸಿಬ್ಬಂದಿಗೆ ಸಮರ್ಪಕ ಸುರಕ್ಷತಾ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯರು ಮತ್ತು ಸಮುದಾಯದವರು ಆಗ್ರಹಿಸಿದ್ದಾರೆ. ಪ್ರಕರಣದ ಸಂಪೂರ್ಣ ವಿವರಗಳನ್ನು ಪೊಲೀಸರು ಮುಂದಿನ ತನಿಖೆಯಲ್ಲಿ ಬಹಿರಂಗಪಡಿಸುವ ನಿರೀಕ್ಷೆಯಿದೆ.
ಇದನ್ನು ನೋಡಿ : ROKING STAR YASH | ರಾಕಿಂಗ್ ಸ್ಟಾರ್ ನ ಹೊಸ ಗೆಟಪ್ಮೇಕಿಂಗ್ ವಿಡಿಯೋಗೆ ಫ್ಯಾನ್ಸ್ ಫಿದಾ




