CJ Roy ಪ್ರಕರಣಕ್ಕೆ ಟ್ವಿಸ್ಟ್.. ತನಿಖೆಗೆ ಸಂಬಂಧಿಸಿ ಮತ್ತೊಂದು ಅಪ್ಡೇಟ್ಸ್..!

ಬಹುಚರ್ಚಿತ CJ Roy ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ (Human Rights Commission) ಮಹತ್ವದ ಹೆಜ್ಜೆ ಇಟ್ಟಿದೆ. ಈ ಪ್ರಕರಣದಲ್ಲಿ ಸಮಗ್ರ ತನಿಖೆ ಕೋರಿ ದೂರು ನೀಡಿದ್ದ RTI ಕಾರ್ಯಕರ್ತ ವಿಜಯ್ ಡೆನ್ನಿಸ್ ಅವರಿಗೆ ಆಯೋಗವು ನೋಟಿಸ್ ಜಾರಿ ಮಾಡಿದೆ.
ದೂರಿನಲ್ಲಿದ್ದ ಆರೋಪ ಏನು?
ಸಿಜೆ ರಾಯ್ ಅವರಿಗೆ ಕೆಲವರು ಮಾನಸಿಕ ಕಿರುಕುಳ ನೀಡಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂಬ ಗಂಭೀರ ಆರೋಪವನ್ನು ವಿಜಯ್ ಡೆನ್ನಿಸ್ ದೂರಿನಲ್ಲಿ ಉಲ್ಲೇಖಿಸಿದ್ದರು. ಕಿರುಕುಳ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣದ ಸಮಗ್ರ ಮತ್ತು ಸ್ವತಂತ್ರ ತನಿಖೆ ನಡೆಸಬೇಕು ಎಂದು ಅವರು ಆಯೋಗವನ್ನು ಮನವಿ ಮಾಡಿದ್ದರು.
ಇದನ್ನು ಓದಿ : ಜೈಲು ವಾಸಕ್ಕೆ ಸೊರಗಿ ಹೋದ ದಾಸ – ಕೋರ್ಟ್ಗೆ ವಿಶೇಷ ಮನವಿ..!

ಸಾಕ್ಷ್ಯ ಸಲ್ಲಿಸಲು ಸೂಚನೆ
ಈ ದೂರಿನ ಪರಿಶೀಲನೆ ವೇಳೆ, “ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಅಥವಾ ಸಾಕ್ಷ್ಯಾಧಾರಗಳಿದ್ದರೆ ಅವನ್ನು ಆಯೋಗದ ಮುಂದೆ ಹಾಜರುಪಡಿಸಿ” ಎಂದು ವಿಜಯ್ ಡೆನ್ನಿಸ್ ಅವರಿಗೆ ನೋಟಿಸ್ ಮೂಲಕ ಸೂಚಿಸಲಾಗಿದೆ.
ಫೆಬ್ರವರಿ 23ರಂದು ಹಾಜರಾತಿ
ಮಾನವ ಹಕ್ಕುಗಳ ಆಯೋಗದ ಡಿವೈಎಸ್ಪಿ Sudhir Hegde ಅವರು ನೋಟಿಸ್ ಜಾರಿ ಮಾಡಿದ್ದು, ಇದೇ ತಿಂಗಳ 23ರಂದು ಬೆಳಿಗ್ಗೆ 10 ಗಂಟೆಗೆ ಖುದ್ದು ಹಾಜರಾಗಿ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸುವಂತೆ ನಿರ್ದೇಶನ ನೀಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಸಿಜೆ ರಾಯ್ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆಯಿದೆ.

ಇದನ್ನು ನೋಡಿ : ATM ಹಣ ಸಾಗಿಸ್ತಿದ್ದ ವ್ಯಾನ್ ಪಲ್ಟಿ -ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾ*




