Cinema News : ಟಾಲಿವುಡ್ನ ಮೋಸ್ಟ್ ಲವಬಲ್ ಜೋಡಿ ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ವೈವಾಹಿಕ ಜೀವನಕ್ಕೆ ಕಾಲಿಡಲು ದಿನಾಂಕ ನಿಗದಿಯಾಗಿದೆ.

Cinema News : ಹಲವು ದಿನಗಳಿಂದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಲವ್ ಗಾಸಿಪ್ಗಳಿಗೆ ಕೊನೆಗೂ ತೆರೆ ಬಿದ್ದಿದೆ. ಟಾಲಿವುಡ್ನ ಮೋಸ್ಟ್ ಲವಬಲ್ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲು ದಿನಾಂಕ ನಿಗದಿಯಾಗಿದೆ.
ಫೆಬ್ರವರಿ 26ರಂದು ರಾಜಸ್ಥಾನದ ಐತಿಹಾಸಿಕ ನಗರಿ Udaipurನಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗ್ತಿದೆ. ಮದುವೆ ಸಂಭ್ರಮ ಫೆಬ್ರವರಿ 24ರಿಂದಲೇ ಆರಂಭವಾಗಲಿದ್ದು, 26ರಂದು ಹಸೆಮಣೆ ಏರಲಿದ್ದಾರೆ.
ಈಗಾಗಲೇ ಎರಡೂ ಕುಟುಂಬಗಳಲ್ಲಿ ಸಂಪ್ರದಾಯದಂತೆ ಮದುವೆ ಪೂರ್ವ ಪೂಜೆಗಳು ನೆರವೇರಿವೆ. ರಶ್ಮಿಕಾ ಅವರ ತವರು ಮನೆಯಲ್ಲಿ ಹಾಗೂ ವಿಜಯ್ ಅವರ ನಿವಾಸದಲ್ಲಿ ಶಾಸ್ತ್ರಗಳು ನಡೆದಿವೆ ಎನ್ನಲಾಗಿದೆ.

ನೋ ಫೋನ್ ಪಾಲಿಸಿ
ಇವರ ಮದುವೆಯಲ್ಲಿ ‘ನೋ ಫೋನ್’ ನಿಯಮ ಜಾರಿಯಲ್ಲಿದೆ. ಸಮಾರಂಭದ ವೇಳೆ ಯಾವುದೇ ಫೋಟೋ ಅಥವಾ ವಿಡಿಯೋ ಲೀಕ್ ಆಗದಂತೆ ಮೊಬೈಲ್ ಫೋನ್ಗಳಿಗೆ ನಿಷೇಧ ವಿಧಿಸಲಾಗಿದೆ. ಫೋಟೋಗ್ರಾಫರ್ ಹಾಗೂ ವಿಡಿಯೋಗ್ರಾಫರ್ ತಂಡದೊಂದಿಗೆ ಗೌಪ್ಯತಾ ಒಪ್ಪಂದಕ್ಕೂ ಸಹಿ ಹಾಕಿಸಲಾಗಿದೆ.
ಅಚ್ಚರಿಯ ಸಂಗತಿಯೆಂದರೆ, ಮದುವೆಗೆ ಚಿತ್ರರಂಗದ ಸಹೋದ್ಯೋಗಿಗಳು ಅಥವಾ ಸ್ಟಾರ್ ನಟ-ನಟಿಯರಿಗೆ ಆಹ್ವಾನ ನೀಡಿಲ್ಲ. ಕೇವಲ ಕುಟುಂಬದವರು ಮತ್ತು ಅತಿ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಖಾಸಗಿಯಾಗಿ ಮದುವೆ ನಡೆಯಲಿದೆ.
ಇದನ್ನೂ ಓದಿ: ನ್ಯಾಷನಲ್ ಕ್ರಶ್ಗೆ ಮದುವೆ ಸಂಭ್ರಮ – ಯಾವಾಗ ಮದುವೆ..?

ಮಾರ್ಚ್ 4ಕ್ಕೆ ಹೈದರಾಬಾದ್ನಲ್ಲಿ ಆರತಕ್ಷತೆ
ಉದಯಪುರದಲ್ಲಿ ಖಾಸಗಿ ಸಮಾರಂಭದ ಬಳಿಕ ಮಾರ್ಚ್ 4ರಂದು ಹೈದರಾಬಾದ್ನಲ್ಲಿ ಅದ್ದೂರಿ ಆರತಕ್ಷತೆ ನಡೆಯಲಿದೆ. ಅಲ್ಲಿ ಚಿತ್ರರಂಗದ ಗಣ್ಯರು, ಸ್ನೇಹಿತರು ಹಾಗೂ ಸಹೋದ್ಯೋಗಿಗಳು ಭಾಗವಹಿಸಲಿದ್ದಾರೆ.
ಕೈಬರಹದ ಪತ್ರ, ‘ನೋ ಗಿಫ್ಟ್’ ಮನವಿ
ವಿಜಯ್ ಮತ್ತು ರಶ್ಮಿಕಾ ತಮ್ಮ ಆಪ್ತ ಸ್ನೇಹಿತರಿಗೆ ಸ್ವತಃ ಕೈಬರಹದ ಪತ್ರಗಳನ್ನು ಕಳುಹಿಸಿದ್ದು, ‘ನಮಗೆ ನಿಮ್ಮ ಆಶೀರ್ವಾದ ಸಾಕು, ಯಾವುದೇ ಉಡುಗೊರೆ ತರಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ. ಮದುವೆ ಬಳಿಕ ಈ ಜೋಡಿ ಕೆಲಸದಿಂದ 1 ತಿಂಗಳ ಕಾಲ ವಿರಾಮ ಪಡೆಯಲಿದ್ದಾರೆ.
‘Geetha Govindam’ ಮತ್ತು ‘Dear Comrade’ ಸಿನಿಮಾಗಳ ಮೂಲಕ ಅಭಿಮಾನಿಗಳ ಮನ ಗೆದ್ದ ಈ ಜೋಡಿ, ಇದೀಗ ನಿಜ ಜೀವನದಲ್ಲೂ ಒಂದಾಗುತ್ತಿರುವುದು ಫ್ಯಾನ್ಸ್ಗೆ ಹಬ್ಬದ ಸಂಭ್ರಮ ತಂದಿದೆ.
MUST WATCH : NATIONAL CRUSHಗೆ ಮದುವೆ ಸಂಭ್ರಮ ಯಾವಾಗ ಮದುವೆ.. ಹೇಗಿದೆ ಪ್ರಿಪರೇಷನ್




