ಫೆ. 26ಕ್ಕೆ ನ್ಯಾಷನಲ್ ಕ್ರಶ್ Rashmika Mandanna ಮದುವೆ.

ನ್ಯಾಷನಲ್ ಕ್ರಶ್ ಎಂದೇ ಖ್ಯಾತಿಯಾಗಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಇದೇ ಫೆಬ್ರವರಿ 26 ರಂದು ಸಪ್ತಪದಿ ತುಳಿಯಲಿದ್ದು, ಇದೀಗ ಮದುವೆ ಆಮಂತ್ರಣದ ಫೋಟೋ ವೈರಲ್ ಆಗ್ತಿದೆ. ಇನ್ನು ವೆಡ್ಡಿಂಗ್ ಫೋಟೋ ನೋಡಿ ರಶ್ನಿಕಾ ಹಾಗೂ ವಿಜಯ್ ದೇವರಕೊಂಡ ಫ್ಯಾನ್ಸ್ ಫುಲ್ ಖುಷಿಯಾಗಿದ್ದರು.

ಗುಟ್ಟಾಗಿ ನಿಶ್ಚಿತಾರ್ಥ
ಹೌದು, ನ್ಯಾಷನಲ್ ಕ್ರಶ್ Rashmika Mandanna ಮತ್ತು ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಗಾಸಿಪ್ ಟಾಲಿವುಡ್ನಲ್ಲಿ ಜೋರಾಗಿಯೇ ಇತ್ತು. ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಆದ ನಂತರ ರಶ್ಮಿಕಾ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಅಂತ ಪೋಟೋಗಳು ವೈರಲ್ ಅಗಿದ್ವು. ಇದರ ಬೆನ್ನಲ್ಲೇ ಈ ಜೋಡಿ ಅಕ್ಟೋಬರ್ನಲ್ಲಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ರು. ಫೆಬ್ರವರಿಯಲ್ಲಿ ಈ ಜೋಡಿ ರಾಜಸ್ಥಾನದ ಉದಯಪುರದ ಪ್ಯಾಲೇಸ್ನಲ್ಲಿ ವಿವಾಹವಾಗಲಿದ್ದಾರೆ.
ಇದನ್ನು ಓದಿ : ಹಲವು ಕೋರ್ಟ್ಗಳಿಗೆ Bomb Threat – ಬಾಂಬ್ ಸ್ಫೋಟಿಸುವುದಾಗಿ ಸಂದೇಶ

ಯಾವಾಗ ಮದುವೆ..?
ಇನ್ನು ವೈರಲ್ ಆದ ಆಮಂತ್ರಣ ಪತ್ರದಲ್ಲಿ ಫೆಬ್ರವರಿ 26 ರಂದು ಉದಯಪುರದ ಪ್ಯಾಲೇಸ್ ನಲ್ಲಿ ತಾರಾ ಜೋಡಿಯ ವಿವಾಹ ಸಮಾರಂಭ ನಡೆಯಲಿದ್ದು, ಮಾರ್ಚ್ 4 ರಂದು ಹೈದರಾಬಾದ್ನಲ್ಲಿ ಆರತಕ್ಷತೆ ನಡೆಯಲಿದೆ ಎಂದು ಬರೆಯಲಾಗಿದೆ. ಆಹ್ವಾನದ ಮೂಲಕ, ವಿಜಯ್ ಮತ್ತು ರಶ್ಮಿಕಾ ತಮ್ಮ ಸ್ನೇಹಿತರು ಹಾಗೂ ಪ್ರೀತಿಪಾತ್ರರಿಗೆ ಆರತಕ್ಷತೆಯಲ್ಲಿ ಭಾಗವಹಿಸಿ ತಮ್ಮನ್ನು ಆಶೀರ್ವದಿಸುವಂತೆ ಕೇಳಿಕೊಂಡಿದ್ದಾರೆ.

ಇದನ್ನು ನೋಡಿ : SIDDAGANGA MUTT | ಅದ್ಧೂರಿ ಸಿದ್ದಗಂಗಾ ಮಠದ ರಥೋತ್ಸವ ಭಕ್ತಿ ಪರಕಾಷ್ಠೆ ಮೆರೆದ ಭಕ್ತ ಗಣ




