Hassan : ಚಿನ್ನಾಭರಣ ಧರಿಸಿ ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕುಣಿಗಲ್ನಲ್ಲಿ ಮಹಿಳೆ ಜೀವಂತವಾಗಿ ಪತ್ತೆಯಾಗಿದ್ದಾಳೆ.

Hassan : ಕುಣಿಗಲ್ನಿಂದ ಹಾಸನ ಜಿಲ್ಲೆ ಬೇಲೂರಿಗೆ ಮದುವೆಗೆ ಹೋಗಿದ್ದ ಮಹಿಳೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮದುವೆಗೆಂದು ಹೋಗಿದ್ದ ಮಹಿಳೆ ಪ್ರಿಯಾಂಕಾ ಕುಣಿಗಲ್ನಲ್ಲಿ ಪರ ಪುರಷನ ಜೊತೆ ತಗ್ಲಾಕೊಂಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ನಾಪತ್ತೆಯಾಗಿದ್ದ ಮಹಿಳೆ ಕೇಸ್ಗೆ ಬಿಗ್ ಟ್ವಿಸ್ಟ್
ಕುಣಿಗಲ್ ಮೂಲದ 29 ವರ್ಷದ ಪ್ರಿಯಾಂಕ, ಬಿಹಾರ ಮೂಲದ ಡೇವಿಡ್ ಎಂಬಾತನ ಜೊತೆ ಕುಣಿಗಲ್ನ ಗೊಟ್ಟಿಕೆರೆಯ ಮನೆಯೊಂದರಲ್ಲಿ ಪೋಲಿಸರು ಪತ್ತೆ ಹಚ್ಚಿದ್ದು, ಮಹಿಳೆಯ ಖತರ್ನಾಕ್ ಪ್ಲಾನ್ನನ್ನು ಪೊಲೀಸರು ಬೇಧಿಸಿದ್ದಾರೆ.
ಸುಮಾರು 30 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಧರಿಸಿ ಮಹಿಳೆ ನಾಪತ್ತೆಯಾಗಿ ನಾಟಕವಾಡಲು ಹೋಗಿ ಈಗ ಸಿಕ್ಕಿಬಿದ್ದಿದ್ದಾಳೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕಲ್ಕೆರೆಯ ಗ್ರಾಮದ ಕೆರೆಯ ಬಳಿ ಪ್ರಿಯಾಂಕಳ ಬಟ್ಟೆ, ಒಳ ಉಡುಪು, ಚಪ್ಪಲಿ, ವ್ಯಾನಿಟಿ ಬ್ಯಾಗ್ ಪತ್ತೆಯಾಗಿತ್ತು.

ಇದರಿಂದ ಆತಂಕಗೊಂಡ ಸಂಬಂಧಿಕರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ರು. ಸ್ಥಳಕ್ಕೆ ಹಾಸನ ಎಸ್ಪಿ ಕೂಡ ಭೇಟಿ ನೀಡಿ ಪರೀಶೀಲನೆ ನಡೆಸಿದ್ದರು. ಮಹಿಳೆಯನ್ನ ಯಾರೋ ಕೊಂದು ಕೆರೆಗೆ ಎಸೆದಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿ, ಸುಮಾರು ಗಂಟೆಗಳ ಕಾಲ ಕಲ್ಕೆರೆ ಗ್ರಾಮದ ಕೆರೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ಪರಪುರಷನ ಜೊತೆ ಮನೆಯೊಂದರಲ್ಲಿ ಮಹಿಳೆ ಪತ್ತೆ
ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೇವಲ 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ನಾಪತ್ತೆಯಾದ ಮಹಿಳೆಯ ಪ್ರಕರಣವನ್ನು ಭೇದಿಸಿದ್ದು, ಮಹಿಳೆಯ ಪ್ಲಾನ್ನನ್ನು ಬಯಲು ಮಾಡಿದ್ದಾರೆ.
ಇನ್ನು ಪ್ರಿಯಾಂಕಾ, ಬಿಹಾರ ಮೂಲದ ಡೇವಿಡ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬ ಆರೋಪ ಕೇಳಿ ಬಂದಿದ್ದು, ಅಕ್ರಮ ಸಂಬಂಧ ಗೊತ್ತಾಗದಂತೆ ಎಸ್ಕೇಪ್ ಆಗಲು ಮಹಿಳೆ ಖತರ್ನಾಕ್ ಪ್ಲಾನ್ ಮಾಡಿದ್ದಳು ಎಂದು ಹೇಳಲಾಗ್ತಿದೆ.
ಡೇವಿಡ್ ಕುಣಿಗಲ್ನ ಫ್ಯಾಕ್ಟರಿ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಾ ಇದ್ದು, ಆ ಫ್ಯಾಕ್ಟರಿಯಲ್ಲಿಯೇ ಪ್ರಿಯಾಂಕಾ ಕೆಲಸ ಮಾಡ್ತಾ ಇದ್ದು, ಈ ವೇಳೆ ಇವರಿಬ್ಬರ ಪರಿಚಯವಾಗಿ ಅಕ್ರಮ ಸಂಬಂಧಕ್ಕೆ ತಿರುಗಿತ್ತು ಎಂದು ಹೇಳಲಾಗ್ತಿದೆ.
ಇದನ್ನೂ ಓದಿ : ಮದುವೆಗೆ ಬಂದಿದ್ದ ಮಹಿಳೆ ನಿಗೂಢ ರೀತಿಯಲ್ಲಿ ಕಣ್ಮರೆ- ಮೈಮೇಲಿದ್ದ ಚಿನ್ನಾಭರಣಕ್ಕಾಗಿ ಕೊಲೆಯಾದ ಶಂಕೆ

ಖತರ್ನಾಕ್ ಪ್ಲಾನ್ ಮಾಡಿ ಎಸ್ಕೇಪ್ ಆಗಿದ್ದ ಮಹಿಳೆ
ಇನ್ನು ಖತರ್ನಾಕ್ ಲೇಡಿ ಪ್ರಿಯಾಂಕ ಪ್ಲಾನ್ ಮಾಡಿಯೇ ಒಡವೆಗಳನ್ನು ಹಾಕಿಕೊಂಡು ಹೋಗಿದ್ದು, ಮೈಮೇಲೆ ಧರಿಸಿದ್ದ ಒಡವೆಗಾಗಿ ಯಾರೋ ಕಿಡ್ನ್ಯಾಪ್ ಮಾಡಿದ್ದಾರೆಂದು ನಂಬಿಸಲು ತನ್ನ ಬಟ್ಟೆ, ಚಪ್ಲಲಿ, ಬ್ಯಾಗ್ ಎಲ್ಲವನ್ನೂ ಕಲ್ಕೆರೆ ಗ್ರಾಮದ ಬಳಿ ಬಿಸಾಕಿ ಹೋಗಿದ್ದಳು ಎನ್ನಲಾಗ್ತಿದೆ.
ಸದ್ಯ ಈ ಸಂಬಂಧ ತನಿಖೆ ಮುಂದುವರೆದಿದ್ದು, ತನಿಖೆ ಬಳಿಕ ಅಸಲಿ ಸತ್ಯ ಗೊತ್ತಾಗಲಿದೆ. ಅದೇನೆ ಆಗಲಿ ಮದುವೆ ಆಗಿ ಗಂಡ ಇದ್ದು, ಮತ್ತೊಬ್ಬನ ಜೊತೆ ಸಂಬಂಧ ಇಟ್ಟುಕೊಂಡು, ಖತರ್ನಾಕ್ ಪ್ಲಾನ್ ಮಾಡಿ ಎಸ್ಕೇಪ್ ಆಗಲು ಹೋಗಿ ತಗ್ಲಾಕೊಂಡಿದ್ದು, ಪೊಲೀಸರ ಅತಿಥಿಯಾಗಿದ್ದಾಳೆ.
MUST WATCH : ಚಿನ್ನಾಭರಣದ ಜೊತೆ ಮಹಿಳೆ ನಿಗೂಢ ನಾಪತ್ತೆ




