ಮದುವೆಗೆ ಬಂದಿದ್ದ ಮಹಿಳೆ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ Hassan ದಲ್ಲಿ ನಡೆದಿದೆ.

ಮದುವೆಗೆ ಬಂದಿದ್ದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ Hassan ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ನಡೆದಿದೆ. ಮಹಿಳೆಯ ಉಡುಪು, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ನಿವಾಸಿಯಾಗಿರುವ ಪ್ರಿಯಾಂಕ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ನಿಗೂಢವಾಗಿ ನಾಪತ್ತೆ
ಮದುವೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪ್ರಿಯಾಂಕ ಚಿಕ್ಕಮಗಳೂರಿಗೆ ಗುರುವಾರ ಬಂದಿದ್ದರು. ನಿಗೂಢವಾಗಿ ನಾಪತ್ತೆಯಾದ ಬೆನ್ನಲ್ಲೇ ಈ ವಿಚಾರವಾಗಿ ದೂರು ಕೊಟ್ಟರೂ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಸಂಬಂಧಿಕರು ಗಂಭೀರವಾಗಿ ಆರೋಪಿಸಿದ್ದಾರೆ. ಇದೀಗ ಅರೆಹಳ್ಳಿ ಹಾಗೂ ಬೇಲೂರು ಠಾಣೆ ಪೊಲೀಸರ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನು ಓದಿ : ಪ್ರೇಮಿಗಳ ದಿನಾಚರಣೆ ಆಚರಣೆಗೆ ನಂದಿ ಬೆಟ್ಟಕ್ಕೆ ಬಂದ ಪ್ರೇಮಿಗಳಿಗೆ ಶಾಕ್..!
“ನಿಮ್ಮ ಪತ್ನಿಯ ಆಧಾರ್ ಕಾರ್ಡ್ ನಮಗೆ ಸಿಕ್ಕಿದೆ”
ಧರ್ಮಸ್ಥಳಕ್ಕೆ ಪಾದಯಾತ್ರೆಗೆ ಹೊರಟಿದ್ದ ಜನರಿಗೆ ಪ್ರಿಯಾಂಕ ಆಧಾರ್ ಕಾರ್ಡ್ ಪತ್ತೆಯಾಗಿದೆ. ಆಧಾರ್ ಕಾರ್ಡ್ನಲ್ಲಿರುವ ನಂಬರ್ಗೆ ಕರೆ ಮಾಡಿದಾಗ ಅದು ಆಕೆಯ ಪತಿಗೆ ಹೋಗಿದ್ದು, “ನಿಮ್ಮ ಪತ್ನಿಯ ಆಧಾರ್ ಕಾರ್ಡ್ ನಮಗೆ ಸಿಕ್ಕಿದೆ” ಎಂದು ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದಾಗ ಆಕೆಯ ಉಡುಪು, ಚಪ್ಪಲಿ, ವ್ಯಾನಿಟಿಬ್ಯಾಗ್ ಪತ್ತೆಯಾಗಿದೆ, ಆದರೆ ಪ್ರಿಯಾಂಕ ಸಿಕ್ಕಿಲ್ಲ.
ಮೈಮೇಲಿದ್ದ ಚಿನ್ನಾಭರಣಕ್ಕಾಗಿ ಕೊಲೆಯಾದ ಶಂಕೆ – Hassan
ರಾಷ್ಟ್ರೀಯ ಹೆದ್ದಾರಿ 373 ಸಮೀಪ ಇರುವ ಕೆರೆಯ ಬಳಿ ಚಪ್ಪಲಿ, ಬಟ್ಟೆ, ವ್ಯಾನಿಟಿ ಬ್ಯಾಗ್ ಹಾಗೂ ಎಲ್ಲವೂ ಪತ್ತೆಯಾಗಿದೆ. ಹಾಗಾಗಿ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಿಯಾಂಕಳನ್ನ ತೀವ್ರವಾಗಿ ಹುಡುಕಾಟ ನಡೆಸಲಾಗುತ್ತಿದೆ. ಗುರುವಾರ ಬಂದಂತಹ ಮಹಿಳೆ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ.
ಕುಟುಂಬಸ್ಥರ ಮಾಹಿತಿ ಪ್ರಕಾರ ಸುಮಾರು 25 ರಿಂದ 30 ಲಕ್ಷ ಮೌಲ್ಯದ ಒಡವೆ ಆಕೆಯ ಮೇಲೆ ಇತ್ತು ಹಾಗಾಗಿ ಆಕೆಯನ್ನು ಅದಕ್ಕೋಸ್ಕರ ಯಾರಾದರೂ ಅತ್ಯಾಚಾರ ಮಾಡಿ ಕೊಲೆ ಮಾಡಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಬಂದು ಆಕೆ ಏನಾದರೂ ಮೃತಪಟ್ಟಿದರೆ, ಶವಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇದನ್ನು ನೋಡಿ : ಅಬ್ಬಬ್ಬಾ.. ತುಮಕೂರಿನಲ್ಲಿ ಸಿಕ್ಕಾಪಟ್ಟೆ ಬಿಸಿಲು – ಬಿಸಿಲಿನ ಝಳಕ್ಕೆ ಕಂಗಾಲದ ಜನರು




