Chikkaballapura : ನಂದಿಬೆಟ್ಟ ಇಂದು ಫುಲ್ ಬಂದ್.. ಬಂದ್ – ಪ್ರೇಮಿಗಳ ಗೋಳು ಕೇಳೊರು ಯಾರು?

ಪ್ರೇಮಿಗಳಿಗೆ ಸ್ವರ್ಗ ಎಂದೇ ಹೇಳಬಹುದಾದ ನಂದಿ ಬೆಟ್ಟ, ಪ್ರೇಮಿಗಳ ದಿನಚಾರಣೆ ಅಂಗವಾಗಿ ನಿರ್ಬಂಧ ಹೇರಲಾಗಿದ್ದು, ಪ್ರೇಮಿಗಳಿಗೆ ನಿರಾಸೆಯಾಗಿದೆ. ಹೌದು Chikkaballapura ದಲ್ಲಿ ಇರುವಂತಹ ನಂದಿ ಬೆಟ್ಟಕ್ಕೆ ನಿತ್ಯ ನೂರಾರು ಮಂದಿ ಪ್ರವಾಸಿಗರು, ಪ್ರೇಮಿಗಳು ಬರ್ತಾರೆ. ಅಲ್ದೇ ಇಂದು ವಿಶೇಷವಾದ ದಿನವಾಗಿದ್ದು, ಲವರ್ಸ್ ಡೇ ಸೆಲೆಬ್ರೇಷನ್ಗೆ ನೂರಾರು ಪ್ರೇಮಿಗಳು ನಂದಿಬೆಟ್ಟಕ್ಕೆ ಆಗಮಿಸಿದ್ದು, ಪ್ರೇಮಿಗಳಿಗೆ ಬಿಗ್ ಶಾಕ್ ಎದುರಾಗಿದೆ.
ನಂದಿ ಬೆಟ್ಟಕ್ಕೆ ಇಂದು ಪ್ರವೇಶ ನಿರ್ಬಂಧ
ಚಿಕ್ಕಬಳ್ಳಾಪುರದಲ್ಲಿರೋ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ನಂದಿ ಬೆಟ್ಟಕ್ಕೆ ಇಂದು ಪ್ರವೇಶ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಜಿ. ಪ್ರಭು ಆದೇಶ ಹೊರಡಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ, ಹಾಗೂ ಜನದಟ್ಟಣೆ ನಿಯಂತ್ರಿಸಲು ಮತ್ತು ಶಾಂತಿ ಕಾಪಾಡಲು ಈ ಕ್ರಮ ಕೈಗೊಂಡಿದ್ದು, ಪ್ರೇಮಿಗಳಿಗೆ ನಿರಾಸೆಯಾಗಿದೆ.

ಇದನ್ನು ಓದಿ : ನನ್ನ ಮದುವೆ April 1ಕ್ಕೆ..! – ವದಂತಿಗಳಿಗೆ ತೆರೆ ಎಳೆದ Mrunal Thakur ..!!
ಜಾಲಿ ಮೂಡ್ನಲ್ಲಿದ್ದ ಪ್ರೇಮಿಗಳಿಗೆ ನಿರಾಸೆ
ಪ್ರತಿ ವರ್ಷವು ಕೂಡ ಫೆಬ್ರವರಿ 14 ರಂದು ನಂದಿಬೆಟ್ಟಕ್ಕೆ ನೂರಾರು ಮಂದಿ ಜೋಡಿ ಹಕ್ಕಿಗಳು, ಸೆಲೆಬ್ರೇಟ್ ಮಾಡಲು ಬರ್ತಾ ಇದ್ರು. ಆದ್ರೆ ಈ ವರ್ಷ ಜಿಲ್ಲಾಡಳಿತ ಭದ್ರತೆಯ ನೆಪದಲ್ಲಿ ನಂದಿಬೆಟ್ಟಕ್ಕೆ ಲಾಕ್ ಹಾಕಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರಿಗೆ ನಂದಿ ಬೆಟ್ಟದತ್ತ ಸುಳಿಯುವಂತಿಲ್ಲ, ಹಾಗೂ ವಾಹನಗಳ ಪ್ರವೇಶವೂ ಸಂಪೂರ್ಣ ನಿರ್ಭಂದಿಸಲಾಗಿದೆ. ಇನ್ನು ಪ್ರೇಮಿಗಳ ದಿನಾಚರಣೆ ಆಚರಣೆಗೆ ಕೆಲ ಪ್ರೇಮಿಗಳು ಬೆಳಗ್ಗೆಯೇ ನಂದಿ ಬೆಟ್ಟಕ್ಕೆ ಆಗಮಿಸಿದ್ದು, ನಂದಿ ಬೆಟ್ಟದ ಚೆಕ್ ಪೋಸ್ಟ್ ನಲ್ಲೆ ತಡೆಹಾಕಲಾಗಿದ್ದು, ಜಾಲಿ ಮೂಡ್ ನಲ್ಲಿ ಬಂದಂತಹ ಪ್ರೇಮಿಗಳಿಗೆ ನಿರಾಸೆಯಿಂದ ವಾಪಸ್ ಆದ್ರು.
ಪ್ರೇಮಿಗಳು ತೀವ್ರ ಅಸಮಾಧಾನ
ಇನ್ನು ಜಿಲ್ಲಾಧಿಕಾರಿಗಳ ಹೊಸ ಆದೇಶಕ್ಕೆ ಪ್ರೇಮಿಗಳು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದು, ಪ್ರೇಮಿಗಳ ಸ್ವರ್ಗಕ್ಕೆ ಬಾಗಿಲು ಹಾಕಿದ್ದು ಎಷ್ಟು ಸರಿ? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.

ಇದನ್ನು ನೋಡಿ : ATM ನಲ್ಲಿ ಹಣ ದೋಚಲು ಕಳ್ಳರು ಮಾಡಿದ ಪ್ಲಾನ್ ಗೆ ಪೊಲೀಸರೇ ಶಾಕ್




