IND vs PAK : ಕ್ರಿಕೆಟ್ ಇತಿಹಾಸದಲ್ಲಿ ನಾಳೆ ವಿಶೇಷ ದಿನ. ಈ ದಿನದಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದಲ್ಲ, ಎರಡು ರೋಮಾಂಚಕ ಪಂದ್ಯಗಳಲ್ಲಿ ಸೆಣೆಸಾಡಲಿವೆ.

IND vs PAK : ಫೆಬ್ರವರಿ 15, 2026 ಭಾನುವಾರ ಕ್ರಿಕೆಟ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ ಕಾದಿದೆ. ICC Men’s T20 World Cup 2026 ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಹಿರಿಯ ತಂಡಗಳು ಕೊಲಂಬೊದ R. ಪ್ರೇಮದಾಸ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
ಭಾರತ-ಪಾಕ್ ನಡುವೆ ಎರಡೆರಡು ಪಂದ್ಯ
ಉಭಯ ತಂಡಗಳು ತಲಾ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ತಲಾ 4 ಅಂಕಗಳೊಂದಿಗೆ ಅಗ್ರ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ. ಭಾರತ +3.050 ನೆಟ್ ರನ್ರೇಟ್ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನ +0.932 ನೆಟ್ ರನ್ರೇಟ್ನೊಂದಿಗೆ ಎರಡನೇ ಸ್ಥಾನದಲ್ಲಿದೆ.
ಇನ್ನೊಂದೆಡೆ, ಇದೇ ದಿನ ಮಹಿಳಾ ಕ್ರಿಕೆಟ್ನಲ್ಲಿ ಕೂಡ ಭಾರತ–ಪಾಕಿಸ್ತಾನ ಪೈಪೋಟಿ ನಡೆಯಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯೋಜಿಸಿರುವ ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ತಂಡಗಳು ಫೆಬ್ರವರಿ 15 ರಂದು ಮುಖಾಮುಖಿಯಾಗಲಿವೆ.

ಈ ಪಂದ್ಯವು ಟೆರ್ಡ್ಥೈ ಬ್ಯಾಂಕಾಕ್ನ ಕ್ರಿಕೆಟ್ ಮೈದಾನದಲ್ಲಿ ಮಧ್ಯಾಹ್ನ 12:30 ಕ್ಕೆ ಪ್ರಾರಂಭವಾಗಲಿದೆ. ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ಪಂದ್ಯವು ಸಂಜೆ 7 ಗಂಟೆಗೆ ಶುರುವಾಗಲಿದೆ.
ಈ ಟೂರ್ನಿ ಯುವ ಆಟಗಾರ್ತಿಯರಿಗೆ ತಮ್ಮ ಸಾಮರ್ಥ್ಯ ತೋರಿಸಲು ಮಹತ್ವದ ವೇದಿಕೆಯಾಗಿದೆ. ಈ ಪಂದ್ಯಾವಳಿ ಯುವ ಆಟಗಾರರಿಗೆ ಪ್ರಮುಖ ವೇದಿಕೆಯಾಗಿದೆ.
ಇದನ್ನೂ ಓದಿ : ಕೊನೆಗೂ ಕ್ಯಾಪ್ಟನ್ ಹೆಸರು ಘೋಷಿಸಿದ Rajasthan Royals! ಯಾರು ಹೊಸ ನಾಯಕ?

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ನಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸುತ್ತಿದ್ದು, ಅವುಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ಗ್ರೂಪ್ ಹಂತದಲ್ಲಿ ಪ್ರತಿಯೊಂದು ತಂಡವು ಉಳಿದ ತಂಡಗಳ ವಿರುದ್ಧ ಆಡಲಿದ್ದು, ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್ಗೆ ಮುನ್ನಡೆಯಲಿವೆ.
ಒಂದೇ ದಿನ ಭಾರತ–ಪಾಕಿಸ್ತಾನ ನಡುವೆ ಎರಡು ಹೈವೋಲ್ಟೇಜ್ ಪಂದ್ಯಗಳು ನಡೆಯುತ್ತಿರುವುದು ಕ್ರಿಕೆಟ್ ಪ್ರಿಯರಿಗೆ ವಿಶೇಷ ಕ್ಷಣವಾಗಲಿದೆ.
MUST WATCH : ತುಮಕೂರಿನಲ್ಲಿ ಸಿಕ್ಕಾಪಟ್ಟೆ ಬಿಸಿಲು – ಬಿಸಿಲಿನ ಝಳಕ್ಕೆ ಕಂಗಾಲದ ಜನರು




