
ರಾಜ್ಯ ಸರ್ಕಾರದ ಸಾವಿರ ದಿನಗಳ ಕಾರ್ಯಕ್ರಮದ ವಿರುದ್ಧ ಪ್ರತಿಪಕ್ಷ BJP ನಾಯಕರು ವಾಗ್ದಾಳಿ ನಡೆಸಿದ್ದಾರೆ. ಇದು ಸಾವಿರ ದಿನಗಳ ಸರ್ಕಾರ ಅಲ್ಲ, ಸಾವಿರಾರು ಸಮಸ್ಯೆಗಳ ಸರ್ಕಾರ ಎಂದು ಟೀಕಿಸಿದ್ದಾರೆ.

ಇದನ್ನು ಓದಿ : Haveri ಸಮಾವೇಶದಲ್ಲಿ ಸಿಎಂ ಪುತ್ಥಳಿ ಅನಾವರಣ..!!
ಸಾವಿನ ಸೂತಕದ ದಿನಗಳು
ಈ ಸಂಬಂಧ ಟೀಕಿಸಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್, “ಕಾಂಗ್ರೆಸ್ ಸರ್ಕಾರವು ಸಾವಿರ ದಿನಗಳನ್ನು ಸಂಭ್ರಮಿಸುತ್ತಿದೆ, ಆದರೆ ಕನ್ನಡಿಗರ ಪಾಲಿಗೆ ಇದು ‘ಸಾವಿನ ಸೂತಕದ ದಿನಗಳು’. ಇದು ಸಾವಿರಾರು ಸಮಸ್ಯೆಗಳ ಸರ್ಕಾರ, ಸಾವಿರಾರು ವೈಫಲ್ಯಗಳ ಸರ್ಕಾರ, ಸಾವಿರಾರು ಕೋಟಿ ಭ್ರಷ್ಟಾಚಾರದ ಸರ್ಕಾರ” ಎಂದು ಟೀಕಿಸಿದ್ದಾರೆ.
ಸಾವಿರಾರು ಸಮಸ್ಯೆಗಳ ಸರ್ಕಾರ – BJP
“ಸರ್ಕಾರಿ ಅಧಿಕಾರಿಗಳ, ನೌಕರರ ಸಾವು, ಆರ್ಸಿಬಿ ಅಭಿಮಾನಿಗಳ ಸಾವು, ಗುತ್ತಿಗೆದಾರರ ಸಾವು, ಅನ್ನದಾತ ರೈತರ ಸಾವು, ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವು, ಭ್ರೂಣದಲ್ಲಿ ಹೆಣ್ಣು ಕಂದಮ್ಮಗಳ ಸಾವು, ಅತ್ಯಾಚಾರಕ್ಕೊಳಗಾಗಿ ಬಾಲಕಿಯರ ಸಾವು, ಸಾವಿರಾರು ಸಮಸ್ಯೆಗಳ ಸರ್ಕಾರ” ಎಂದು ಕಿಡಿ ಕಾರಿದ್ದಾರೆ.
ಇದನ್ನು ನೋಡಿ : ಬಾವಿಗೆ ಬಿದ್ದು ಚೀರಾಡಿದ ಚಿರತೆ ಚಿರತೆ ರಕ್ಷಣೆಗೆ ಅಧಿಕಾರಿಗಳ ಸರ್ಕಸ್




