Indian Bank ಗಿರಿನಗರ ಶಾಖೆಯಲ್ಲಿ ಗ್ರಾಹಕರ 2.7 ಕೆಜಿ ಚಿನ್ನ ಕಳವು ಪ್ರಕರಣ ಬಹಿರಂಗ. ಆನ್ಲೈನ್ ಬೆಟ್ಟಿಂಗ್ಗೆ ಹಣ ಬಳಸಿದ Assistant Manager ಬಂಧನ..

ಚಿನ್ನ ಅಡವಿಟ್ಟು ಸಾಲ ಪಡೆದ ಗ್ರಾಹಕರಿಗೆ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಗಿರಿನಗರದಲ್ಲಿರುವ Indian Bank ಶಾಖೆಯ ಅಸಿಸ್ಟೆಂಟ್ ಮ್ಯಾನೇಜರ್ನೇ
ಗ್ರಾಹಕರ ಕೋಟಿ ಕೋಟಿ ಮೌಲ್ಯದ ಚಿನ್ನ ಕಳವು ಮಾಡಿರುವುದು ಪತ್ತೆಯಾಗಿದೆ. ಆರೋಪಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಕಿರಣ್ ಕುಮಾರ್, ಇಂಡಿಯನ್ ಬ್ಯಾಂಕ್ ಗಿರಿನಗರ ಶಾಖೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಬ್ಯಾಂಕ್ನಲ್ಲಿ ಗ್ರಾಹಕರು ಅಡವಿಟ್ಟಿದ್ದ ಚಿನ್ನವನ್ನು ಲಾಕರ್ನಿಂದ ಸ್ವಲ್ಪ ಸ್ವಲ್ಪವಾಗಿ ಕಳವು ಮಾಡುತ್ತಿದ್ದನೆಂದು ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನು ಓದಿ : ನನ್ನ ಮದುವೆ April 1ಕ್ಕೆ..! – ವದಂತಿಗಳಿಗೆ ತೆರೆ ಎಳೆದ Mrunal Thakur ..!!

ಎಷ್ಟು ಚಿನ್ನ ಕಳವು?
ಸುಮಾರು 2 ಕೆಜಿ 787 ಗ್ರಾಂ ಚಿನ್ನಾಭರಣ ಕಳವು , ಅಂದಾಜು ಮೌಲ್ಯ ₹4.12 ಕೋಟಿ , ಮ್ಯಾನೇಜರ್ ಇಲ್ಲದ ಸಮಯದಲ್ಲಿ ಲಾಕರ್ ತೆರೆಯುತ್ತಿದ್ದ ಶಂಕೆ ಇದ್ದು ,
ಬ್ಯಾಂಕ್ ಲಾಕರ್ ಕೀ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಇಬ್ಬರ ಬಳಿಯೂ ಇದ್ದುದನ್ನು ದುರುಪಯೋಗ ಮಾಡಿಕೊಂಡಿದ್ದಾನೆ.
ಫೆಬ್ರವರಿ 2ರಂದು ಗ್ರಾಹಕರೊಬ್ಬರು ತಮ್ಮ ಚಿನ್ನ ಬಿಡಿಸಿಕೊಳ್ಳಲು ಬಂದಾಗ, ಚೀಫ್ ಮ್ಯಾನೇಜರ್ ದಿಲೀಪ್ ಕುಮಾರ್ ಲಾಕರ್ ಪರಿಶೀಲಿಸಿದರು. ಈ ವೇಳೆ ಆಭರಣಗಳು ನಾಪತ್ತೆಯಾಗಿರುವುದು ಪತ್ತೆಯಾಗಿ,
ಹೆಚ್ಚಿನ ಪರಿಶೀಲನೆ ವೇಳೆ ದೊಡ್ಡ ಮಟ್ಟದ ಕಳ್ಳತನ ಬೆಳಕಿಗೆ ಬಂದಿದೆ. ಬಳಿಕ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.

ಪೊಲೀಸರ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದು , ಕದ್ದ ಚಿನ್ನವನ್ನು Manappuram Finance ಮತ್ತು Muthoot Finance ನಲ್ಲಿ ಅಡವಿಟು , ಪಡೆದ ಹಣವನ್ನು ಆನ್ಲೈನ್ ಬೆಟ್ಟಿಂಗ್ ಮತ್ತು ಜೂಜಾಟದಲ್ಲಿ ಕಳೆದುಕೊಂಡಿದ್ದ…
ಪೊಲೀಸ್ ಕ್ರಮ
ಗಿರಿನಗರ ಪೊಲೀಸರು ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.
ಗ್ರಾಹಕರ ಚಿನ್ನದ ಸುರಕ್ಷತೆ ಕುರಿತು ಬ್ಯಾಂಕ್ಗಳಲ್ಲಿ ಜಾಗೃತಿ ಹೆಚ್ಚಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ನೋಡಿ : ATM ನಲ್ಲಿ ಹಣ ದೋಚಲು ಕಳ್ಳರು ಮಾಡಿದ ಪ್ಲಾನ್ ಗೆ ಪೊಲೀಸರೇ ಶಾಕ್




