Bengaluru ಟ್ರಿನಿಟಿ–ಸಿವಿ ಜಂಕ್ಷನ್ ನಡುವೆ ರೋಡ್ ರೇಜ್ ಪ್ರಕರಣದಲ್ಲಿ ವ್ಯಕ್ತಿಯನ್ನು ಕಾರಿನ ಬಾನೆಟ್ ಮೇಲೆ 1 ಕಿಮೀ ಎಳೆದೊಯ್ದ ಚಾಲಕ ಸುರೇಶ್ ಬಂಧನ. ಹಲಸೂರು ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Bengaluru ನಗರದಲ್ಲಿ ರೋಡ್ ರೇಜ್ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಕಾರು ಚಾಲಕನೊಬ್ಬ ವ್ಯಕ್ತಿಯನ್ನು ಕಾರಿನ ಬಾನೆಟ್ ಮೇಲೆ ಸುಮಾರು 1 ಕಿಲೋಮೀಟರ್ ದೂರ ಎಳೆದುಕೊಂಡು ಹೋಗಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ನಗರದಲ್ಲಿ ಆತಂಕ ಮೂಡಿಸಿದೆ.
ಟ್ರಿನಿಟಿ ಜಂಕ್ಷನ್ ಬಳಿ ಆರಂಭವಾದ ಗಲಾಟೆ
ಮಾಹಿತಿಯ ಪ್ರಕಾರ, ನಂಜುಂಡ ಎಂಬ ಗೂಡ್ಸ್ ವಾಹನ ಚಾಲಕ ಹೂವು ಸಾಗಿಸುತ್ತಿದ್ದ ವೇಳೆ ಟ್ರಿನಿಟಿ ಜಂಕ್ಷನ್ ಬಳಿ ಬಲ ತಿರುವು ಪಡೆಯುವಾಗ ಕಾರು ಚಾಲಕ ಸುರೇಶ್ ಜೊತೆ ವಾಗ್ವಾದ ನಡೆದಿದೆ. ಈ ವೇಳೆ ಸುರೇಶ್ ಅವಾಚ್ಯ ಪದ ಬಳಸಿ ನಿಂದನೆ ಮಾಡಿದನೆಂದು ಆರೋಪಿಸಲಾಗಿದೆ.
ಇದನ್ನೂ ಓದಿ : ಮಂತ್ರಾಲಯ ಹುಂಡಿ ಎಣಿಕೆ – 21 ದಿನಗಳಲ್ಲಿ 3 ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹ
ನಂತರ ಸಿವಿ ಜಂಕ್ಷನ್ ಬಳಿ ಇಬ್ಬರ ನಡುವೆ ಮತ್ತೆ ಗಲಾಟೆ ಉಂಟಾಗಿದೆ. ಅವಾಚ್ಯ ಪದ ಬಳಕೆಯನ್ನು ಪ್ರಶ್ನಿಸಿದ ನಂಜುಂಡ ಎದುರಿಗಿದ್ದರೂ ಗಮನಿಸದೇ, ಸುರೇಶ್ ಕಾರನ್ನು ಚಲಾಯಿಸಿ ಅವನನ್ನು ಬಾನೆಟ್ ಮೇಲೆ ಸುಮಾರು 1 ಕಿಮೀ ದೂರ ಎಳೆದುಕೊಂಡು ಹೋಗಿದ್ದಾನೆ ಎಂದು ಹೇಳಲಾಗಿದೆ.
ಪೊಲೀಸರ ಕ್ರಮ
ಘಟನೆಯ ನಂತರ ಹಲಸೂರು ಪೊಲೀಸರು ತಕ್ಷಣ ಕ್ರಮ ಕೈಗೊಂಡು ಕಾರು ಚಾಲಕ ಸುರೇಶ್ನನ್ನು ಬಂಧಿಸಿದ್ದಾರೆ. ಗೂಡ್ಸ್ ವಾಹನ ಚಾಲಕ ನಂಜುಂಡ ನೀಡಿದ ದೂರಿನ ಆಧಾರದ ಮೇಲೆ ಕೊಲೆ ಯತ್ನ (Attempt to Murder) ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
MUST WATCH : ಮನೆಗೆ ಬರ್ತಿದೆ ಗಲೀಜು ನೀರು- ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ




