ಬೆಂಗಳೂರು ಸರ್ಜಾಪುರ–ಹೆಬ್ಬಾಳ ರೆಡ್ ಲೈನ್ Metro ಹಾಗೂ ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರ ಸರ್ಕಾರ ತಾತ್ಕಾಲಿಕ ತಡೆ. ₹28,405 ಕೋಟಿ ಡಿಪಿಆರ್ ಮರುಪರಿಶೀಲನೆ ಸೂಚನೆ; ಆಯ್ದ ಜಂಕ್ಷನ್ಗಳಲ್ಲಿ ಮಾತ್ರ ಡಬಲ್ ಡೆಕ್ಕರ್ ಸಾಧ್ಯತೆ.

ಬೆಂಗಳೂರು Metro ದರ ಏರಿಕೆ ಚರ್ಚೆಗಳ ನಡುವೆ ರಾಜ್ಯ ಸರ್ಕಾರಕ್ಕೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ. ನಮ್ಮ ಮೆಟ್ರೋ ರೆಡ್ ಲೈನ್ ಹಾಗೂ ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರ ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿದ್ದು, ಯೋಜನೆಗಳನ್ನು ಮರುಪರಿಶೀಲಿಸಲು ಸೂಚಿಸಿದೆ.
ಸರ್ಜಾಪುರ – ಹೆಬ್ಬಾಳ ಮೆಟ್ರೋ ಕಾರಿಡಾರ್ಗೆ ತಾತ್ಕಾಲಿಕ ತಡೆ
ಈ ಕುರಿತು ಮಾಹಿತಿ ನೀಡಿದ ಸಂಸದ ಪಿ.ಸಿ. ಮೋಹನ್, ಸರ್ಜಾಪುರ – ಹೆಬ್ಬಾಳ ಮೆಟ್ರೋ ಕಾರಿಡಾರ್ ಯೋಜನೆಗೆ ಕೇಂದ್ರ ಸರ್ಕಾರ ತಡೆ ನೀಡಿದೆ ಎಂದು ತಿಳಿಸಿದ್ದಾರೆ. ಸುಮಾರು ₹28,405 ಕೋಟಿ ವೆಚ್ಚದ ಡಿಪಿಆರ್ ಹಿನ್ನೆಲೆ ಅನುಮೋದನೆಯನ್ನು ಸ್ಥಗಿತಗೊಳಿಸಿ, ಯೋಜನೆಯನ್ನು ಮತ್ತೆ ಪರಿಶೀಲಿಸಲು ಸೂಚಿಸಲಾಗಿದೆ.

ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರದ ಆಕ್ಷೇಪ
ಕೇಂದ್ರ ಸರ್ಕಾರದ ಅಭಿಪ್ರಾಯದ ಪ್ರಕಾರ, ಎಲ್ಲಾ ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ವ್ಯವಸ್ಥೆ ಮಾಡಿದರೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಆದ್ದರಿಂದ, ರೆಡ್ ಲೈನ್ ಕಾರಿಡಾರ್ನಲ್ಲಿ ಸಂಪೂರ್ಣ ಡಬಲ್ ಡೆಕ್ಕರ್ ಬೇಡವೆಂದು ಸೂಚಿಸಿದ್ದು, ಆಯ್ದ ಜಂಕ್ಷನ್ಗಳಲ್ಲಿ ಮಾತ್ರ ಈ ವ್ಯವಸ್ಥೆ ಮಾಡಬಹುದು ಎಂದು ಹೇಳಿದೆ.
ಇದನ್ನೂ ಓದಿ : ಜನ್ಮ ಕೊಟ್ಟ ತಂದೆ ತಾಯಿಯನ್ನೇ ಕೊಂದ ಪಾಪಿ ಮಗ.!

ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಗೆ ಮತ್ತೊಮ್ಮೆ ಬ್ರೇಕ್
ರಾಜ್ಯ ಸರ್ಕಾರ ಮುಂಬರುವ ಮೆಟ್ರೋ ಮಾರ್ಗಗಳಲ್ಲೆಲ್ಲಾ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸಲು ಯೋಜಿಸಿತ್ತು. ಆದರೆ, ಯೋಜನಾ ವೆಚ್ಚ ಹೆಚ್ಚಾಗಿದೆ ಎಂಬ ಕಾರಣದಿಂದ ಡಿಪಿಆರ್ನ್ನು ಹಿಂದೆಯೂ ಕೇಂದ್ರ ಸರ್ಕಾರ ವಾಪಸ್ ಕಳಿಸಿತ್ತು. ಇದೀಗ ಮತ್ತೊಮ್ಮೆ ಯೋಜನೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ.
MUST WATCH : ರೈತರ ಬೆಳೆ ಸಮೀಕ್ಷೆಯಲ್ಲಿ ಭಾರೀ ಲೋಪದ ಆರೋಪ




