Bengaluru : ಪುತ್ರನೇ ತನ್ನ ಹೆತ್ತ ತಂದೆ ಹಾಗೂ ತಾಯಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಪ್ರಾಣ ತೆಗೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Bengaluru : ಇತ್ತೀಚಿನ ದಿನಗಳಲ್ಲಿ ಜಮೀನು, ಮನೆಯ ವಿಚಾರಕ್ಕೆ ಗಲಾಟೆಗಳು ನಡೆಯುವುದು ಸರ್ವೆ ಸಾಮಾನ್ಯವಾಗಿದೆ. ಕೂತು ಬಗೆಹರಿಸಬಹುದಾದ ಚಿಕ್ಕಪುಟ್ಟ ವಿಚಾರಕ್ಕೂ ಕೊಲೆ ಮಾಡುವ ಹಂತಕ್ಕೆ ತಲುಪುತ್ತಿದ್ದಾರೆ.
ಸಾಫ್ಟ್ವೇರ್ ಉದ್ಯಮಿ ಪುತ್ರನಿಂದ ಪೋಷಕರ ಹತ್ಯೆ
ಇತ್ತ ಸಂಬಂಧವನ್ನೇ ಮರೆತು ಒಡಹುಟ್ಟಿದವರು, ಜನ್ಮ ಕೊಟ್ಟವರು ಅಂತನೂ ನೋಡದೇ ಕೊಲೆ ಮಾಡುತ್ತಿದ್ದಾರೆ. ಇಂತದ್ದೇ ಘಟನೆ ಇದೀಗ ಬೆಂಗಳೂರಿನಲ್ಲಿ ನಡೆದಿದೆ.
ಪುತ್ರನೇ ತನ್ನ ಹೆತ್ತ ತಂದೆ ಹಾಗೂ ತಾಯಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ನಗರದ ವಿಜ್ಞಾನನಗರದ ಅಪಾರ್ಟ್ಮೆಂಟ್ನಲ್ಲಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ..!

ಚಾಕುವಿನಿಂದ ಇರಿದು ಹೆತ್ತವರ ಪ್ರಾಣ ತೆಗೆದ ಮಗ
ಮೃತರನ್ನು 60 ವರ್ಷದ ನಿವೃತ್ತ ನೇವಿ ಕ್ಯಾಪ್ಟನ್ ನವೀನ್ ಚಂದ್ರ ಭಟ್ ಹಾಗೂ 55 ವರ್ಷದ ಪತ್ನಿ ಡಾ. ಶ್ಯಾಮಲಾ ಭಟ್ ಎಂದು ಗುರುತಿಸಲಾಗಿದೆ. ದಂಪತಿಗೆ ಸ್ವಂತ ಸಾಫ್ಟ್ವೇರ್ ಕಂಪನಿ ಹೊಂದಿದ್ದ ರೋಹನ್ ಭಟ್ ಎಂಬ ಪುತ್ರನಿದ್ದು, ಆತನೇ ಚಾಕುವಿನಿಂದ ಮನಸೋಇಚ್ಚೆ ಹಲ್ಲೆ ನಡೆಸಿದನೆಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಗಂಭೀರವಾಗಿ ಗಾಯಗೊಂಡ ದಂಪತಿಯನ್ನು ತಕ್ಷಣ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗಂಡ–ಹೆಂಡತಿ ಇಬ್ಬರೂ ಮೃತಪಟ್ಟಿದ್ದಾರೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.
ಹೆಚ್ಎಎಲ್ ಪೊಲೀಸರ ಕೈಗೆ ಸಿಕ್ಕ ಹಂತಕ ಪುತ್ರ
ಘಟನೆಯ ಮಾಹಿತಿ ತಿಳಿದ ಹೆಚ್ಎಎಲ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಆರೋಪಿ ರೋಹನ್ ಭಟ್ನ ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರಿಸಲಾಗಿದೆ.
ಸದ್ಯ ಹತ್ಯೆಗೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.
MUST WATCH : ಜೋಡಿ ದರ್ಗಾದಲ್ಲಿ ಉರುಸ್ ಸಂಭ್ರಮ ಮುಸ್ಲಿಂ ಬಾಂಧವರಿಂದ ಸಮಾಜಸೇವೆ




