Mantralaya ದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿಗೆ ಭಕ್ತರಿಂದ ಕೋಟ್ಯಂತರ ರೂಪಾಯಿ ಹರಿದು ಬಂದಿದೆ.

ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷ ಎಂದೇ ಪ್ರಸಿದ್ಧಿ ಪಡೆದಿರುವ Mantralaya ದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿಯಲ್ಲಿ ಭಕ್ತರಿಂದ ಕೋಟ್ಯಂತರ ರೂಪಾಯಿ ಸಂಗ್ರಹವಾಗಿದೆ.
ಕಳೆದ 21 ದಿನಗಳಲ್ಲಿ ಒಟ್ಟು3,08,37,572 ರೂ. ಹಣದ ಜೊತೆಗೆ 13 ಗ್ರಾಂ ಬಂಗಾರ ಹಾಗೂ 1018 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ರಾಯಚೂರು ಜಿಲ್ಲೆಯ ಗಡಿ ಭಾಗದ ತುಂಗಾತೀರದಲ್ಲಿ ನೆಲೆಸಿರುವ ಗುರು ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನಕ್ಕಾಗಿ ದೇಶದ ಮೂಲೆಮೂಲೆಗಳಿಂದ ಭಕ್ತರು ಪ್ರತಿದಿನ ಆಗಮಿಸುತ್ತಿದ್ದಾರೆ. ಭಕ್ತರು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ಕಾಣಿಕೆಗಳನ್ನು ಹುಂಡಿಗೆ ಸಮರ್ಪಿಸುತ್ತಿದ್ದಾರೆ.
ಮಂತ್ರಾಲಯ ಹುಂಡಿ ಎಣಿಕೆ
ಫೆಬ್ರವರಿ 10ರಂದು ಹುಂಡಿ ತೆರೆಯಲಾಗಿದ್ದು, ಎಣಿಕೆ ಕಾರ್ಯ ನಡೆಸಲಾಯಿತು. ಸಂಗ್ರಹವಾದ ಮೊತ್ತದಲ್ಲಿ 2,98,13,571 ರೂ. ಮೌಲ್ಯದ ನೋಟುಗಳು ಹಾಗೂ 10,24,000 ರೂ. ಮೌಲ್ಯದ ನಾಣ್ಯಗಳು ಸೇರಿವೆ ಎಂದು ಶ್ರೀ ಮಠದ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ : ಪರೀಕ್ಷೆಗೆ ಕೆಲವೇ ದಿನ ಮೊದಲು ವಸತಿ ಶಾಲೆಯಲ್ಲೇ SSLC ವಿದ್ಯಾರ್ಥಿ Suicide

ರಾಯರ ದರ್ಶನ ಪಡೆಯಲು ವಿದೇಶಗಳಿಂದಲೂ ಆಗಮನ
ರಾಯರ ಮೇಲೆ ಅಪಾರ ಭಕ್ತಿ ಹೊಂದಿರುವ ಭಕ್ತರು ಕರ್ನಾಟಕ ಸೇರಿದಂತೆ ತೆಲಂಗಾಣ, ಮಹಾರಾಷ್ಟ್ರ ಹಾಗೂ ದೇಶದ ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದಲೂ ಆಗಮಿಸುತ್ತಿದ್ದಾರೆ.
ಹಲವರು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿಕೊಂಡು ಬಳಿಕ ರಾಯರ ದರ್ಶನ ಪಡೆಯುತ್ತಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಶ್ರೀ ಮಠದಿಂದ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ.
ಇನ್ನು ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ ಸದಸ್ಯರು ಹಾಗೂ ಕರಸೇವಕರು ಭಾಗವಹಿಸಿದ್ದರು.
ಡಿಸೆಂಬರ್ನಲ್ಲೂ ಭಾರೀ ಕಾಣಿಕೆ ಸಂಗ್ರಹ
ಕಳೆದ ಡಿಸೆಂಬರ್ ತಿಂಗಳಲ್ಲಿ ಹುಂಡಿ ತೆರೆಯಲಾಗಿದ್ದಾಗ ಕೇವಲ 20 ದಿನಗಳಲ್ಲಿ 3,73,66,587 ರೂ. ಕಾಣಿಕೆ ಸಂಗ್ರಹವಾಗಿತ್ತು. ಅದರಲ್ಲಿ 3,62,69,247 ರೂ. ಮೌಲ್ಯದ ನೋಟುಗಳು ಮತ್ತು 10,97,340 ರೂ. ಮೌಲ್ಯದ ನಾಣ್ಯಗಳು ಸೇರಿದ್ದವು. ಜೊತೆಗೆ 87 ಗ್ರಾಂ ಚಿನ್ನ ಹಾಗೂ 910 ಗ್ರಾಂ ಬೆಳ್ಳಿಯನ್ನೂ ಭಕ್ತರು ಸಮರ್ಪಿಸಿದ್ದರು.

ಇದನ್ನು ನೋಡಿ : GUN ಹಿಡಿದು ಕೈ ಮುಖಂಡನ ರೀಲ್ಸ್ – ಧುರಂಧರ್ ಸಾಂಗ್ಗೆ ಬಿಲ್ಡಪ್ ಡ್ಯಾನ್ಸ್




