ಮಮ್ಮಿ I AM Sorry – ವಸತಿ ಶಾಲೆಯಲ್ಲೇ SSLC ವಿದ್ಯಾರ್ಥಿ Suicide.

ಮಕ್ಕಳು ಚೆನ್ನಾಗಿ ಓದಿ ವಿದ್ಯಾವಂತರಾಗಲಿ ಎಂದು ಪೋಷಕರು ವಸತಿ ಶಾಲೆಗೆ ಮಕ್ಕಳನ್ನ ಸೇರಿಸ್ತಾರೆ. ಆದ್ರೆ ಈ ವಸತಿ ಶಾಲೆಯಲ್ಲೇ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ನಲ್ಲಿ ನಡೆದಿದೆ.
SSLC ವಿದ್ಯಾರ್ಥಿ Suicide
ಇನ್ನು ಶರತ್ (16) ಎಂಬ ಯುವಕ ಮೃತ ವಿದ್ಯಾರ್ಥಿಯಾಗಿದ್ದು, ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ನವೋದಯ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಇದನ್ನು ಓದಿ : ಇಬ್ಬರು ಮಕ್ಕಳಿರೋದನ್ನು ಮುಚ್ಚಿಟ್ಟು ಯುವಕ ನೊಂದಿಗೆ ವಿವಾಹವಾದ ಮಹಿಳೆ!
ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆ
ಮಂಠಾಳ ಗ್ರಾಮದ ಶರತ್, ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ನವೋದಯ ವಸತಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ. ನಿನ್ನೆ ರಾತ್ರಿ ಡೆತ್ ನೋಟ್ ಬರೆದಿಟ್ಟು ಶರತ್ Suicide ಗೆ ಶರಣಾಗಿದ್ದಾನೆ. ಹಾಸ್ಟೆಲ್ನಲ್ಲೇ ರಾತ್ರಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆಯಾಗಿದೆ. ಮಗನ ಸಾವಿನ ಸುದ್ದಿ ಕೇಳಿ ಪೋಷಕರು ಆಘಾತಗೊಂಡಿದ್ದು, ಹಾಸ್ಟೆಲ್ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
‘SORRY ಮಮ್ಮಿ, ಪಾಪ i love you’
ಶರತ್ ನೇಣಿಗೆ ಶರಣಾದ ಜಾಗದಲ್ಲಿ ಡೆತ್ ನೋಟ್ ಕೂಡ ಸಿಕ್ಕಿದೆ ‘SORRY ಮಮ್ಮಿ, ಪಾಪ i love you’ ಎಂದು ಬರೆದಿರುವ ಶರತ್ ‘Keep Smile Forever’ ಎಂದು ಉಲ್ಲೇಖಿಸಿದ್ದಾನೆ. ಮಗನ ಡೆತ್ ನೋಟ್ ಕಂಡು ತಂದೆ-ತಾಯಿ ಕಣ್ಣೀರು ಹಾಕ್ತಿದ್ದಾರೆ.

ಪ್ರಕರಣ ದಾಖಲು – Suicide
ಇನ್ನು ಘಟನಾ ಸ್ಥಳಕ್ಕೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನು ನೋಡಿ : ಕೊಡಿಗೇನಹಳ್ಳಿ ಅಭಿವೃದ್ಧಿಪಡಿಸುವೆ ಕೆ.ಎನ್.ರಾಜಣ್ಣ ಜನತೆಗೆ ಭರವಸೆ




