Haveri : ಮದುವೆ ಹೆಸರಿನಲ್ಲಿ ವಂಚನೆ ಕೃತ್ಯಗಳನ್ನು ಎಸಗುವ ಪ್ರಕರಣಗಳ ಬಗ್ಗೆ ಆಗಾಗ್ಗೆ ವರದಿಯಾಗುತ್ತಿರುತ್ತವೆ.

ಮದುವೆ ಹೆಸರಿನಲ್ಲಿ ವಂಚನೆ ಕೃತ್ಯಗಳನ್ನು ಎಸಗುವ ಪ್ರಕರಣಗಳ ಬಗ್ಗೆ ಆಗಾಗ್ಗೆ ವರದಿಯಾಗುತ್ತಿರುತ್ತವೆ. ಆದರೆ, Haveriಯಲ್ಲೊಂದು ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ. ವಿವಾಹಿತ ಮಹಿಳೆಯೊಬ್ಬಳು, ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಯುವಕನ ಕೈಹಿಡಿದು ಆತನಿಂದ 2.5 ಲಕ್ಷ ರೂ. ಪಡೆದು ಮೋಸ ಮಾಡಿದ್ದಾಳೆ.
2.5 ಲಕ್ಷ ರೂಪಾಯಿ ವಧು ದಕ್ಷಿಣೆ
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರವಿಚಂದ್ರ ಎಂಬ ಯುವಕ ಈ ವಂಚನೆಗೆ ಒಳಗಾಗಿದ್ದಾನೆ. ತುಮಕೂರಿನ ಪಾವಗಡ ಮೂಲದರೇಖಾ ಎಂಬ ಮಹಿಳೆ ಆತನನ್ನು ಮದುವೆಯಾದ್ದಲ್ಲದೆ, ಸುಮಾರು 2.5 ಲಕ್ಷ ರೂಪಾಯಿ ವಧು ದಕ್ಷಿಣೆ ಪಡೆದ್ದಾಳೆ.

‘ನಾವು ರೇಖಾ ಮಕ್ಕಳು’
ಕಳೆದ ವಾರ ಹಿರೇಕೇರೂರು ದುರ್ಗಾ ದೇವಿ ದೇವಸ್ಥಾನದಲ್ಲಿ ಇವರ ಮದುವೆ ನೆರವೇರಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಪ್ರಕರಣ ಬಯಲಾಗಿದೆ. ಮಂಗಳವಾರ ರೇಖಾಳ ಮೊಬೈಲ್ಗೆ ಕರೆ ಮಾಡಿದ ಮಕ್ಕಳು ‘ನಾವು ರೇಖಾ ಮಕ್ಕಳು’ ಎಂದು ಹೇಳಿದ ಬಳಿಕ ರವಿಚಂದ್ರ ಹಾಗೂ ಅವರ ಕುಟುಂಬದವರಿಗೆ ಅನುಮಾನ ಮೂಡಿದೆ.
ಇದನ್ನು ನೋಡಿ : SSLC EXAM|ರಿಸಲ್ಟ್ ಸುಧಾರಣೆಗೆ ಕಸರತ್ತು- ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬ್ಯಾಕ್ ಟು ಬ್ಯಾಕ್ ಟಾಸ್ಕ್
ಮಹಿಳೆಯ ಕಳ್ಳಾಟ ಬಯಲು – Haveri
ತನ್ನ ಬಗ್ಗೆ ಸತ್ಯ ಹೊರಬಂದಿದೆ ಎಂಬುದು ತಿಳಿದ ರೇಖಾ, ತುಮ್ಮಿನಕಟ್ಟಿ ಗ್ರಾಮದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಈ ಮಾಹಿತಿ ತಿಳಿದ ರವಿಚಂದ್ರ ಮತ್ತು ಗ್ರಾಮಸ್ಥರು ಆಕೆಯನ್ನು ಹಿಡಿದು ಹಲಗೇರಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಪ್ರಕರಣ ದಾಖಲು – Haveri
ಸದ್ಯ ಆರೋಪಿತ ಮಹಿಳೆ ಪೊಲೀಸರ ವಶದಲ್ಲಿದ್ದು, ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ : Toxic ಗೆ ಮತ್ತೊಂದು ಸಂಕಷ್ಟ – ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು




