Bengaluru : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯದ ಭವಿಷ್ಯ ನಿರ್ಧಾರವಾಗಲಿದ್ದು, ಸರ್ಕಾರ ಪಂದ್ಯ ಆಯೋಜನೆ ಸಂಬಂಧ ಅಧಿಕೃತ ನಿರ್ಧಾರ ತಿಳಿಸಲಿದೆ.

Bengaluru : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಸರ್ಕಾರ ಇಂದು ಅಧಿಕೃತ ನಿರ್ಧಾರ ಪ್ರಕಟಿಸಲಿದ್ದು, ಎಲ್ಲರ ಕಣ್ಣುಗಳು ಸರ್ಕಾರದ ತೀರ್ಮಾನದತ್ತ ನೆಟ್ಟಿವೆ.
ಚಿನ್ನಸ್ವಾಮಿ ಕ್ರೀಡಾಂಗಣವು 18 ವರ್ಷಗಳಿಂದ ಕಪ್ ಕನಸಿನ ಜೊತೆ ಬದುಕಿದ ಆರ್ಸಿಬಿ ಅಭಿಮಾನಿಗಳ ಎಮೋಷನಲ್ ಸೆಂಟರ್. ಆದರೆ ಕಾಲ್ತುಳಿತ ದುರಂತದ ಬಳಿಕ ಮೈದಾನದಲ್ಲಿ ಪಂದ್ಯಗಳ ಆಯೋಜನೆ ಪ್ರಶ್ನಾರ್ಥಕವಾಗಿತ್ತು.
KSCA ಮೈದಾನದಲ್ಲಿ ಮತ್ತೆ ಪಂದ್ಯಗಳನ್ನು ನಡೆಸಲು ಹಲವು ಕ್ರಮಗಳನ್ನು ಕೈಗೊಂಡಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲು ಸಜ್ಜಾಗಿದೆ. ಘಟನೆಯ ನಂತರ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.
ಜನಸಂದಣಿ ನಿಯಂತ್ರಣದಲ್ಲಿ ಗಂಭೀರ ಕೊರತೆ, ಸಮರ್ಪಕ ಪ್ರವೇಶ–ನಿರ್ಗಮನ ದ್ವಾರಗಳ ಅಭಾವ ಹಾಗೂ ತುರ್ತು ಪರಿಸ್ಥಿತಿಗೆ ಸ್ಪಷ್ಟ ಕಾರ್ಯಯೋಜನೆ ಇಲ್ಲದಿರುವುದು ಬೆಳಕಿಗೆ ಬಂದಿತ್ತು.

ಅಭಿಮಾನಿಗಳ ಸುರಕ್ಷತೆಗಾಗಿ ಕ್ರಮಕೈಗೊಳ್ಳುವಂತೆ ಶಿಫಾರಸು ಮಾಡಲಾಗಿತ್ತು. ಈ ಹಿನ್ನೆಲೆ, ಎಂಟ್ರಿ–ಎಕ್ಸಿಟ್ ದ್ವಾರಗಳ ಅಗಲೀಕರಣ, ಅಗ್ನಿಶಾಮಕ ಮತ್ತು ತುರ್ತು ಸೇವಾ ವಾಹನಗಳ ಸುಗಮ ಓಡಾಟಕ್ಕೆ ವ್ಯವಸ್ಥೆ ಸೇರಿದಂತೆ ಹಲವು ಕಾಮಗಾರಿಗಳನ್ನ ಪೂರ್ಣಗೊಳಿಸಲಾಗಿದೆ.
ಇದನ್ನೂ ಓದಿ : ಜನ್ಮ ಕೊಟ್ಟ ತಂದೆ ತಾಯಿಯನ್ನೇ ಕೊಂದ ಪಾಪಿ ಮಗ.!
ಗೃಹ ಇಲಾಖೆ ನೇಮಿಸಿದ್ದ GBA ಮುಖ್ಯ ಆಯುಕ್ತರ ನೇತೃತ್ವದ ಸಮಿತಿ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಿದ್ದು, ಇಂದು ಗೃಹಸಚಿವರಿಗೆ ಸಲ್ಲಿಕೆ ಮಾಡಲಿದೆ. ಇಂದಿನ ಸಭೆಯಲ್ಲಿ KSCA ಮತ್ತು RCB ನಿಯೋಗದೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಕಳೆದ ಬಾರಿ ಚಾಂಪಿಯನ್ ಆಗಿರುವ ಆರ್ಸಿಬಿ ನಿಯಮದಂತೆ ಉದ್ಘಾಟನಾ ಪಂದ್ಯವನ್ನು ಬೆಂಗಳೂರಿನಲ್ಲೇ ಆಡಬೇಕಾಗಿದೆ. ಆದ್ರೆ, ಉದ್ಘಾಟನಾ ಪಂದ್ಯದ ವೇಳೆ ಹೆಚ್ಚಿನ ಜನಸಂದಣಿ ಸೇರುವುದರಿಂದ ಮತ್ತೆ ಸಮಸ್ಯೆ ಆಗುತ್ತಾ ಎಂಬ ಕುತೂಹಲ ಮೂಡಿದೆ.

ಹೀಗಾಗಿ ಇಂದಿನ ಸಭೆಯ ನಿರ್ಧಾರದಿಂದ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳ ಆಯೋಜನೆ ಮತ್ತು ಉದ್ಘಾಟನಾ ಪಂದ್ಯದ ಭವಿಷ್ಯ ಸ್ಪಷ್ಟವಾಗಲಿದೆ.
MUST WATCH : ರೈತರ ಬೆಳೆ ಸಮೀಕ್ಷೆಯಲ್ಲಿ ಭಾರೀ ಲೋಪದ ಆರೋಪ




