
ಮೈಸೂರಿನಂತೆ ತುಮಕೂರಿನಲ್ಲೂ ದಸರಾ ಹಬ್ಬ ಅದ್ಧೂರಿಗಾಗಿ ಆಚರಣೆ ಮಾಡಲಾಗ್ತಿದೆ. ಇಂದು ನವರಾತ್ರಿಯ ಮೂರನೇ ದಿನದಂದು ದುರ್ಗಾ ದೇವಿಯ ಮೂರನೇ ರೂಪವಾದ ಚಂದ್ರಘಂಟಾ ದೇವಿಯನ್ನು ಎಲ್ಲೆಡೆ ಪೂಜಿಸಲಾಗ್ತಿದೆ. ತುಮಕೂರಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಧಾರ್ಮಿಕ ಮಂಟಪ ನಿರ್ಮಾಣ ಮಾಡಲಾಗಿದ್ದು, ಮಂಟಪದಲ್ಲಿ ಚಾಮುಂಡೇಶ್ವರಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ದೇವಿಗೆ ನಿತ್ಯ ನವರಾತ್ರಿ ಅಂಗವಾಗಿ ಒಂದೊಂದು ಅವತಾರದಲ್ಲಿ ದೇವಿಗೆ ಅಲಂಕಾರ ಮಾಡಲಾಗ್ತಿದ್ದು, ಇಂದು ದೇವಿಗೆ ಚಂದ್ರಘಂಟಾ ಅಲಂಕಾರವನ್ನು ಮಾಡಲಾಗಿತ್ತು.

ನವರಾತ್ರಿ ಅಂಗವಾಗಿ ಮೂರನೇ ದಿನವಾದ ಇಂದು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ, ಅಭಿಷೇಕ, ಹೋಮ- ಹವನ ನಡೆಸಲಾಯ್ತು. ಮುಂಜಾನೆ ಬ್ರಾಹ್ಮಿ ಮೂಹರ್ತದಲ್ಲಿ ದೇವಿಗೆ ಸುಪ್ರಭಾತ ಸೇವೆ, ಗಣಪತಿ ಪೂಜೆ, ಮಹಾಲಕ್ಷ್ಮೀ ಪೂಜೆ ಸೇರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯ್ತು. ಅಲ್ದೇ ದೇವಿಗೆ ಇಂದು ಡಿಸಿ ಶುಭಕಲ್ಯಾಣ್ ದಂಪತಿ ಹಾಗೂ ಮಕ್ಕಳು ಪೂಜಾ ಕೈಂಕರ್ಯವನ್ನು ನೇರವೇರಿಸಿದ್ರು. ಬಳಿಕ ಧಾರ್ಮಿಕ ಮಂಟಪದ ಹೊರಭಾಗದಲ್ಲಿ ಫೋಟೋ ಸೆಷನ್ ಗಾಗಿ ಹಾಕಲಾಗಿದ್ದ I LOVE DASARA ಸೆಟ್ ಬಳಿ ಡಿಸಿ ದಂಪತಿ ಫೋಟೋಗೆ ಫೋಸ್ ನೀಡಿದ್ರು

ಇನ್ನು ನವರಾತ್ರಿಯ ಮೂರನೇ ದಿನವಾದ ಚಂದ್ರಘಟ್ಟ ದೇವಿಯ ಅಂಗವಾಗಿ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಧಿಕಾರಿಗಳು, ಸಾರ್ವಜನಿಕರು ನೀಲಿ ಬಟ್ಟೆಯಲ್ಲಿ ಕಂಗೊಳಿಸಿದ್ರು. ಡಿಸಿ ದಂಪತಿ ಹಾಗೂ ಮಕ್ಕಳು ಕೂಡ ನೀಲಿ ಬಣ್ಣದ ಬಟ್ಟೆಯನ್ನು ಧರಿಸಿ ಮಿರಿ ಮಿರಿ ಮಿಂಚುತ್ತಿದ್ದರು

ಈ ವೇಳೆ ಮಾತನಾಡಿದ ಡಿಸಿ ಶುಭಕಲ್ಯಾಣ್, ಅದ್ಧೂರಿಯಾಗಿ ತುಮಕೂರು ದಸರಾ ನಡೆಯುತ್ತಿದ್ದು, ಪ್ರತಿ ತಾಲೂಕಿನಿಂದಲೂ ದಸರಾ ವೀಕ್ಷಣೆಗೆ ಬರುವ ಜನರಿಗಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದ್ರು. ಅಲ್ದೇ ದಸರಾ ಅಂಗವಾಗಿ ಫಲಪುಷ್ಪ ಪ್ರದರ್ಶನ, ಆಹಾರ ಮೇಳೆ, ಪಂಜಿನ ಕಾವಯತ್ತು, ಹಾಟ್ ಏರ್ ಬಲೂನ್, ಹೆಲಿಕಾಫ್ಟರ್ ರೈಡ್ ಕೂಡ ಜನರಿಗಾಗಿ ಇದ್ದು, ಜನರು ದಸರಾವನ್ನು ಎಂಜಾಯ್ ಮಾಡಲಿ ಎಂದ್ರು.ಒಟ್ನಲ್ಲಿ ಕಳೆದ ವರ್ಷದಿಂದ ದಸರಾ ಮಹೋತ್ಸವವನ್ನು ತುಮಕೂರಿನಲ್ಲಿ ಅದ್ಧೂರಿಯಾಗಿ ನೇರವೇರಿಸಲಾಗ್ತಿದ್ದು, ಕಳೆದ ವರ್ಷದಿಂದ ಮತ್ತಷ್ಟು ವಿಜೃಂಭಣೆಯಿಂದ ದಸರಾ ಮಹೋತ್ಸವ ನೇರವೇರುತ್ತಿದ್ದೆ. ಜನರು ಕೂಡ ದಸರಾವನ್ನು ನೋಡಲು ದೂರದ ಊರುಗಳಿಂದ ತುಮಕೂರಿನತ್ತ ಮುಖ ಮಾಡ್ತಿದ್ದು, ದಸರಾ ಸಡಗರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.




