
TUMAKURU NEWS : ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕ ಸುರೇಶ್ ಗೌಡ ಅವರು ಅಭಿವೃದ್ಧಿ ಪರ್ವ ಮುಂದುವರೆಸಿದ್ದಾರೆ. ಹೆಬ್ಬೂರು ಗ್ರಾಮ ಪಂಚಾಯ್ತಿಯಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ ಹಾಗೂ ಲೋಕಪಯೋಗಿ ಇಲಾಖೆಯಡಿ ವಿವಿಧ ಕಾಮಗಾರಿಗಳಿಗೆ ಶಾಸಕ ಸುರೇಶ್ ಗೌಡ ಅವರು ಗುದ್ದಲಿ ಪೂಜೆ ನೆವೇರಿಸಿದ್ರು.
ಲೋಕಪಯೋಗಿ ಇಲಾಖೆಯಡಿಯಲ್ಲಿ ಸುಮಾರು 1ಕೋಟಿ 85 ಲಕ್ಷ ರೂಪಾಯಿ ವೆಚ್ಚದ ಹೆಬ್ಬೂರು- ಕಲ್ಲೂರು ರಸ್ತೆಯ ಕಾಮಗಾರಿಗೆ ಶಾಸಕ ಸುರೇಶ್ ಗೌಡ ಅವರು ಗುದ್ದಲಿ ಪೂಜೆ ನೆರವೇರಿಸಿದ್ರು. ಅಲ್ದೇ ಮೋದಿ ಅವರ 75 ನೇ ಜನ್ಮ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಹಾಗೂ ಬೃಹತ್ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ರು. ಈವೇಳೆ ಮಾತನಾಡಿದ ಶಾಸಕ ಸುರೇಶ್ ಗೌಡ ಅವರು, ಹೆಬ್ಬೂರು ಹೋಬಳಿ ಅತಿ ವೇಗವಾಗಿ ಬೆಳೆಯುತ್ತಿದ್ದು, ಇದನ್ನು ತಾಲೂಕು ಕೇಂದ್ರವನ್ನಾಗಿಸಲು ಸರ್ಕಾರದ ಗಮನಕ್ಕೆ ತರುತ್ತೇನೆ. ಹಾಗೂ ಹೆಬ್ಬೂರು ಹೋಬಳಿ ತಾಲೂಕು ಕೇಂದ್ರ ಆಗಲು ಎಲ್ಲಾ ಅರ್ಹತೆ ಇದೆ. ಹೀಗಾಗಿ ತಾಲೂಕು ಕೇಂದ್ರ ಮಾಡಲು ನನ್ನ ಸಹಮತವೂ ಇದೆ ಎಂದು ತಿಳಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದಿವ್ಯ ಪ್ರದೀಪ್, ಉಪಾಧ್ಯಕ್ಷರಾದ ಬಾಬಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಉಮೇಶ್ ಗೌಡರು, ವೈ.ಟಿ ನಾಗರಾಜ್, ತಾರಾದೇವಿ,ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ರಾಜಶೇಖರ್, ಜಿಲ್ಲಾ ಮುಖಂಡರುಗಳಾದ ಮಾಸ್ತಿಗೌಡರು, ಸಿದ್ದೇಗೌಡರು ಸೇರಿ ಹೆಬ್ಬೂರು ಗ್ರಾಮ ಪಂಚಾಯ್ತಿ ಎಲ್ಲಾ ಸದಸ್ಯರು, ಅನೇಕ ಮುಖಂಡರುಗಳು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ರು.





