
ಇಷ್ಟು ದಿನ ದೊಡ್ಡ ಬ್ಯಾಂಕ್ಗಳಲ್ಲಿ, ಸಂಘಗಳಲ್ಲಿ ವಂಚನೆ ಆಗ್ತಾ ಇರೋದನ್ನ ಕಂಡಿದ್ವೀ ಇದೀಗ ಕೃಷಿ ಪತ್ತಿನ ಸಂಘದಲ್ಲೂ ಅಕ್ರಮ ನಡೆದಿದ್ದು, ಕೃಷಿ ಪತ್ತಿನ ಸಂಘವನ್ನು ನಂಬಿಕೊಂಡ ಬಡ ಕುಟುಂಬಗಳು ಇದೀಗ ಬಿದ್ದಿವೆ. ಹೌದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೆಂಡೋಣೆ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಮಾಜಿ ಕಾರ್ಯ ನಿರ್ವಹಣಾಧಿಕಾರಿ ಸೇರಿ ಸಂಘದ ಸದಸ್ಯರು ನೂರಾರು ಬಡ ಕುಟುಂಬಗಳಿಗೆ ವಂಚನೆ ಮಾಡಿರೋ ಪ್ರಕರಣ ಬೆಳಕಿಗೆ ಬಂದಿದೆ,
ಕೊರಟಗೆರೆ ತಾಲೂಕಿನ ಬೆಂಡೋಣೆ ಕೃಷಿ ಪತ್ತಿನ ಸಂಘದಲ್ಲಿ ನಕಲಿ ಠೇವಣಿ ಬಾಂಡ್ ಮಾಫೀಯಾ ನಡೆದಿರೋದು ಬೆಳಕಿಗೆ ಬಂದಿದೆ. ಹೌದು ಬೆಂಡೋಣೆ ಕೃಷಿ ಪತ್ತಿನ ಸಂಘದ ಮಾಜಿ ಕಾರ್ಯ ನಿರ್ವಹಣಾಧಿಕಾರಿ ರಮೇಶ್ ಆಂಡ್ ಟೀಂ, ಸಂಘದ ಜನರಿಗೆ ನಕಲಿ ನಿಶ್ಚಿತ ಠೇವಣಿ ಬಾಂಡ್ ವಿತರಿಸಿದ್ದು, ಸುಮಾರು 70 ಲಕ್ಷ ರೂಪಾಯಿಯಷ್ಟು ವಂಚನೆ ಮಾಡಿದ್ದು, ನೂರಾರು ಮಂದಿ ಬಡ ಕುಟುಂಬಗಳು ಬೀದಿಗೆ ಬಿದ್ದಿವೆ,
ಇನ್ನು ಕೃಷಿ ಪತ್ತಿನ ಸಂಘದ ಕಾರ್ಯ ನಿರ್ವಹಣಾಧಿಕಾರಿ ರಮೇಶ್ ತಂಡ ಮುಗ್ದ ಜನರನ್ನು ಟಾರ್ಗೆಟ್ ಮಾಡುತ್ತಿದ್ದು, ಕೆಲವರಿಗೆ ಮಾತ್ರ ಅಸಲಿ ಬಾಂಡ್ ವಿತರಣೆ ಮಾಡಿದ್ದು ಉಳಿದವರಿಗೆ ನಕಲಿ ಬಾಂಡ್ ವಿತರಣೆ ಮಾಡಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಜನರಿಗೆ ನಕಲಿ ಠೇವಣಿ ಬಾಂಡ್ ವಿತರಣೆ ಮಾಡಿ ವಂಚನೆ ಮಾಡಿದ್ದಾರೆ. ಮಹಿಳೆಯರು ಹೊಟ್ಟೆ ಬಟ್ಟೆ ಕಟ್ಟಿ ಕೃಷಿ ಪತ್ತಿನ ಸಂಘದಲ್ಲಿ ಠೇವಣಿ ಇಟ್ಟಿದ್ದರು. ಆದ್ರೆ ಇವರಿಗೆ ನಕಲಿ ನಿಶ್ಚಿತ ಠೇವಣಿ ಬಾಂಡ್ ನೀಡಿ ಜನರನ್ನು ಯಾಮಾರಿಸಿ, ಹಣ ಲೂಟಿ ಹೊಡೆದಿದ್ದಾರೆ. ಇನ್ನು ಕೃಷಿ ಪತ್ತಿನ ಸಂಘದ ಠೇವಣಿ ಹಣ ದುರುಪಯೋಗ ಆಗಿರೋದು ಸಾಬೀತಾದ ಬೆನ್ನಲ್ಲೇ ಕಾರ್ಯ ನಿರ್ವಹಣಾಧಿಕಾರಿ ರಮೇಶ್ ಅವರನ್ನು ಅಮಾನತು ಮಾಡಲಾಗಿದೆ. ಅಲ್ದೇ ರಮೇಶ್ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಇತ್ತ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಬಡ ಜನರ ದುಡ್ಡು ಹೊಡೆದ ತಪ್ಪಿತಸ್ಥರ ಮೇಲೆ ಎಫ್ಐಆರ್ ದಾಖಲಿಸುವಂತೆ ಸಾರ್ವಜನಿಕರಿಂದ ಒತ್ತಾಯ ಮಾಡಿದ್ರು. ಅಲ್ದೇ ಬಿ ಡಿ ಪಿ ಸಾಲ ಸೌಲಭ್ಯದಲ್ಲು ಅಕ್ರಮ ನಡೆದಿದೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ರು. ಕೂಡಲೇ ನಮ್ಮ ಠೇವಣಿ ಹಣ ನಮಗೆ ತಕ್ಷಣ ವಾಪಸ್ ಕೊಡಿಸಿ ಕೊಡಿ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ಎನ್ ರಾಜಣ್ಣ ರವರಲ್ಲಿ ಮನವಿ ಮಾಡಿದ್ದಾರ
ಇನ್ನು ಬೆಂಡೋಣೆ ಯಲ್ಲಿ ಆಡಳಿತಾತ್ಮಕ ಹಾಗೂ ನಿಶ್ಚಿತ ಠೇವಣಿ ಬಾಂಡ್ ವಿತರಣೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ವರದಿ ನೀಡುವಂತೆ ಆದೇಶ ನೀಡುವುದರ ಜೊತೆಗೆ ಪರಿವೀಕ್ಷಣಾಧಿಕಾರಿಯಾಗಿ ಶ್ರೀನಿವಾಸ್ ಗುರುರಾಜು, ಸಹಕಾರ ಅಭಿವೃದ್ಧಿ ಅಧಿಕಾರಿಯನ್ನು ನೇಮಕ ಮಾಡಿ ಆದೇಶ ನೀಡಿದೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಂಡು ಈ ಮುಗ್ಧ ಜನರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ..




