
ಗುಬ್ಬಿ ತಾಲೂಕಿನ ಸಿ.ಎಸ್ ಪುರ ಹೋಬಳಿಯ ಇಡಗೂರು ಗ್ರಾಮದಲ್ಲಿ ಗರುಡನ ಮೇಲೆ ಕುಳಿತ ಇಡಗೂರು ರಾಜ ಎಂಬ ಹೆಸರಿನ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ, ಸಾವಿರಾರು ಮಂದಿ ಗ್ರಾಮಸ್ಥರ ಸಮ್ಮುಖದಲ್ಲಿ, ಅದ್ದೂರಿಯಾಗಿ ಜರುಗಿತು.
ಗೌರಿ ಗಣೇಶ ಹಬ್ಬದಂದು ಗ್ರಾಮದ ಯುವಕರ ತಂಡ ಮಾಡಲಾಗಿದ್ದ ಗಣೇಶ ಮೂರ್ತಿಗೆ, ಹಲವು ರೀತಿಯ ಧಾರ್ಮಿಕ ಕಾರ್ಯಕ್ರಮ ನೆರವೇರಿಸುವ ಜೊತೆಗೆ ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ, ಲಿಂಗದವೀರರ ಕುಣಿತ ಸೇರಿದಂತೆ ಹಲವು ರೀತಿಯ ವಾದ್ಯಗೋಷ್ಠಿಗಳೊಂದಿಗೆ, ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಇಡಗೂರು ಕೆರೆಯಲ್ಲಿ ಗಣೇಶ ಮೂರ್ತಿಯನ್ನು ಅದ್ದೂರಿಯಾಗಿ ವಿಸರ್ಜನೆ ಮಾಡಲಾಯಿತು.
ವಿಶೇಷವಾಗಿ ಗರುಡನ ಮೇಲೆ ಕುಳಿತ ಗಣೇಶ ಮೂರ್ತಿಯ ಮೆರವಣಿಗೆಯಲ್ಲಿ, ಹಳ್ಳಿಕಾರ್ ತಳಿಯ ಹಸುಗಳ ಪ್ರದರ್ಶನ ಕಣ್ಮನ ಸೆಳೆಯಿತು. ಜೊತೆಗೆ ಇಡಗೂರು ರಾಜ ಎಂಬ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮಕ್ಕೆ, ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ ಕೃಷ್ಣಪ್ಪ ಸೇರಿದಂತೆ ಹಲವು ಗಣ್ಯರು ವಿಸರ್ಜನಾ ಕಾರ್ಯಕ್ರಮದಲ್ಲಿ ಅತ್ಯಂತ ಸಂಭ್ರಮದಿಂದ ಭಾಗವಹಿಸಿದ್ರು.




