Kitchen Recipe : ಸಂಜೆಯ ಸ್ನ್ಯಾಕ್ಸ್ ಅಥವಾ ವಿಶೇಷ ಸಂದರ್ಭಗಳಿಗೆ ರುಚಿಕರ ಮತ್ತು ಆರೋಗ್ಯಕರ ಆಯ್ಕೆ ಎಂದರೆ ಸೋಯಾ ಬೀನ್ ಕಬಾಬ್

Kitchen Recipe : ಪ್ರೋಟೀನ್ ಸಮೃದ್ಧವಾಗಿರುವ ಈ ಕಬಾಬ್ಗಳನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಈಗ ಸರಳ ವಿಧಾನದಲ್ಲಿ ಸೋಯಾ ಬೀನ್ ಕಬಾಬ್ ಮಾಡುವ ರೆಸಿಪಿ ನೋಡೋಣ.
ಬೇಕಾಗುವ ಪದಾರ್ಥಗಳು (Ingredients for Soya Bean Kebab)
- ಸೋಯಾ ಬೀನ್ – 20-25
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
- ಹಸಿ ಮೆಣಸಿನಕಾಯಿ – 2
- ಈರುಳ್ಳಿ – 3
- ಮೊಸರು – ಸ್ವಲ್ಪ
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಖಾರದ ಪುಡಿ – 1 ಚಮಚ
- ಗರಂ ಮಸಾಲ – 1½ ಚಮಚ
- ಕಾಳು ಮೆಣಸಿನ ಪುಡಿ – 1 ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಎಣ್ಣೆ – ಕರಿಯಲು ಅಗತ್ಯವಿದ್ದಷ್ಟು
ಇದನ್ನೂ ಓದಿ : ಚಲಿಸುತ್ತಿದ್ದ KSRTC ಬಸ್ ಆಕ್ಸೆಲ್ Cut.. ತಪ್ಪಿದ ಭಾರೀ ಅನಾಹುತ.!
ತಯಾರಿಸುವ ವಿಧಾನ (Step-by-Step Preparation)
1:
ಮೊದಲು ಸೋಯಾ ಬೀನ್ ಅನ್ನು 20–25 ನಿಮಿಷ ಬಿಸಿ ನೀರಿನಲ್ಲಿ ನೆನೆಸಿಡಿ. ಇದರಿಂದ ಅದು ಮೃದುವಾಗುತ್ತದೆ.
2:
ನಂತರ ಹಸಿ ಮೆಣಸಿನಕಾಯಿ, ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿ.
3:
ಅದೇ ಮಿಕ್ಸಿಗೆ ನೆನೆಸಿದ ಸೋಯಾ ಬೀನ್ ಹಾಕಿ ರುಬ್ಬಿ. ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಗರಂ ಮಸಾಲ, ಮೊಸರು, ಕಾಳು ಮೆಣಸಿನ ಪುಡಿ, ಉಪ್ಪು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸುಮಾರು ಅರ್ಧ ಗಂಟೆ ನೆನೆಯಲು ಬಿಡಿ.
4:
ಇದೀಗ ಪ್ಯಾನ್ ಬಿಸಿ ಮಾಡಿ, ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಮಿಶ್ರಣವನ್ನು ಬೇಕಾದ ಆಕಾರದಲ್ಲಿ ತಟ್ಟಿ ಪ್ಯಾನ್ನಲ್ಲಿ ಹಾಕಿ ಸುಮಾರು 10 ನಿಮಿಷ ಫ್ರೈ ಮಾಡಿ.
ಸೇವಿಸುವ ಸಲಹೆ (Serving Tips)
ಬಿಸಿ ಬಿಸಿ ಸೋಯಾ ಬೀನ್ ಕಬಾಬ್ಗಳನ್ನು ಹಸಿರು ಚಟ್ನಿ ಅಥವಾ ಟೊಮ್ಯಾಟೋ ಸಾಸ್ ಜೊತೆ ಸೇವಿಸಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ. ಚಹಾ ಜೊತೆ ಸಂಜೆ ಸ್ನ್ಯಾಕ್ಸ್ ಆಗಿ ಸವಿಯಲು ಇದು ಸೂಕ್ತ ಆಯ್ಕೆ.
MUST WATCH : ಗಡುವಿಗೂ ಜಗ್ಗದ ಬೀದಿ ವ್ಯಾಪಾರಿಗಳು ಫೈನಲ್ ವಾರ್ನಿಂಗ್ ಕೊಟ್ಟ ಅಧಿಕಾರಿಗಳು




