Chamarajanagara : ಚಾಮರಾಜನಗರ ಜಿಲ್ಲೆ ಬಳಿ ಚಲಿಸುತ್ತಿದ್ದ KSRTC ಬಸ್ನ ಆಕ್ಸೆಲ್ ಏಕಾಏಕಿ ಕಟ್ ಆಗಿದ್ದು, ಸಂಭವನೀಯ ದೊಡ್ಡ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.

Chamarajanagara : ಚಾಮರಾಜನಗರದಿಂದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ತ್ರಯಂಬಕಪುರ ಗೇಟ್ ಬಳಿ ಚಲಿಸುತ್ತಿದ್ದಾಗ ಆಕ್ಸೆಲ್ ಏಕಾಏಕಿ ಕಟ್ ಆಗಿದ್ದು, ದೊಡ್ಡ ದುರಂತವೊಂದು ಕೇವಲ ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ಚಲಿಸುತ್ತಿದ್ದ KSRTC ಬಸ್ನ ಆಕ್ಸೆಲ್ ಕಟ್
ಆಕ್ಸೆಲ್ ಮುರಿಯುತ್ತಿರುವ ಕಾರಣ ಬಸ್ ಮಾರ್ಗ ಮಧ್ಯದಲ್ಲೇ ನಿಂತಿದ್ದು, ಸ್ಥಳೀಯ ಹಾಗೂ ದೂರದ ಪ್ರಯಾಣಿಕರು, ವಿಶೇಷವಾಗಿ ಶಾಲೆ-ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸಿದ್ದಾರೆ.
ಇದನ್ನೂ ಓದಿ : ಶೀಘ್ರದಲ್ಲೇ ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ..?
ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರೀ ದುರಂತ
ಪ್ರಯಾಣಿಕರು ಡಿಪೋದಿಂದ ಬಸ್ ಅನ್ನು ಪರಿಶೀಲನೆ ಮಾಡದೆ ಹೇಗೆ ಹೊರಗೆ ಕಳುಹಿಸಲಾಗುವುದೆಂದು ಪ್ರಶ್ನಿಸುತ್ತಿದ್ದು, “ಒಂದು ಸಣ್ಣ ಎಡವಟ್ಟಾಗಿದ್ದರೂ ಕೂಡ ದೊಡ್ಡ ಅನಾಹುತವೇ ಸಂಭವಿಸಬಹುದಿತ್ತು” ಎಂದು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.
ಕೆಎಸ್ಆರ್ಟಿಸಿ ಅಧಿಕಾರಿಗಳು ತುರ್ತು ಪರಿಹಾರ ಕ್ರಮಗಳನ್ನು ಕೈಗೊಂಡು ಪ್ರಯಾಣಿಕರಿಗೆ ಪರ್ಯಾಯ ಬಸ್ ವ್ಯವಸ್ಥೆ ಮಾಡಿ ಕಳುಹಿಸಿದ್ದಾರೆ.
MUST WATCH : ಕಾರು ಮತ್ತು ಬೈಕ್ ನಡುವೆ ಆಕ್ಸಿಡೆಂ ಬೈಕ್ ಸವಾರ ಸ್ಥಳದಲ್ಲಿಯೇ ಸಾ*




