Bengaluru : ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) Hescom ಮನವಿ ಮಾಡಿದೆ.

Bengaluru : ರಾಜ್ಯದ ಜನರಿಗೆ ಮತ್ತೆ ಬೆಲೆ ಏರಿಕೆ ಬಿಸಿ ಎದುರಾಗಲಿದೆ. ಮೆಟ್ರೋ ದರ ಏರಿಕೆ ಪ್ರಸ್ತಾಪದ ಬೆನ್ನಲ್ಲೇ ಇದೀಗ ವಿದ್ಯುತ್ ದರ ಏರಿಕೆ ಶಾಕ್ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.
ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ
ಈ ವರ್ಷವೂ ವಿದ್ಯುತ್ ದರ ಹೆಚ್ಚಳಕ್ಕೆ ರಾಜ್ಯದ ಎಲ್ಲಾ ಎಸ್ಕಾಂಗಳು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC)ಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ಎಸ್ಕಾಂಗಳ ಖರ್ಚು ವೆಚ್ಚ ಸರಿದೂಗಿಸಲು ವಿದ್ಯುತ್ ದರ ಏರಿಕೆ ಅಗತ್ಯವಿದೆ ಎಂದು ಸಂಸ್ಥೆಗಳು ಮನವಿ ಮಾಡಿವೆ. ಯುನಿಟ್ಗೆ 1 ರೂ.ವರೆಗೆ ದರ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಎಸ್ಕಾಂಗಳ ಪ್ರಸ್ತಾವನೆಗೆ ನೀಡಿರುವ ಪ್ರಮುಖ ಕಾರಣಗಳು
- ಜನರ ವಿದ್ಯುತ್ ಬೇಡಿಕೆ ಪೂರೈಸಲು
- ಹೆಚ್ಚುತ್ತಿರುವ ನಿರ್ವಹಣಾ ಹಾಗೂ ಖರ್ಚು ವೆಚ್ಚ ಸರಿದೂಗಿಸಲು
- ಆರ್ಥಿಕ ನಷ್ಟ ತಗ್ಗಿಸಲು

ವಿದ್ಯುತ್ ದರ ಹೆಚ್ಚಳಕ್ಕೆ ಎಸ್ಕಾಂಗಳಿಂದ KERCಗೆ ಪ್ರಸ್ತಾವನೆ
ಕಳೆದ ಬಾರಿ ಸಹ ರಾಜ್ಯದ ಎಲ್ಲಾ ಎಸ್ಕಾಂಗಳು ಯುನಿಟ್ಗೆ 1 ರೂ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ವು. 2025–26ನೇ ಸಾಲಿನಲ್ಲಿ KERC ಯುನಿಟ್ಗೆ 35 ಪೈಸೆ ಮಾತ್ರ ದರ ಹೆಚ್ಚಿಸಿ ಆದೇಶ ಹೊರಡಿಸಿತ್ತು.
ಇದನ್ನೂ ಓದಿ : ಹೆತ್ತ ತಂದೆಯ ವಿರುದ್ಧವೇ ದೂರು ಕೊಟ್ಟ ಮಗಳು.!?
ಇದೀಗ ಮತ್ತೆ ದರ ಏರಿಕೆ ಪ್ರಸ್ತಾವನೆ ಸಲ್ಲಿಸಿರುವುದರಿಂದ ಈ ಬಾರಿ ಕೂಡ ಯುನಿಟ್ಗೆ 35 ಪೈಸೆ ಏರಿಕೆ ಆಗುವ ಸಾಧ್ಯತೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ವಾರ್ಷಿಕವಾಗಿ ಎಸ್ಕಾಂಗಳ ಮೇಲೆ ಸುಮಾರು 4,500 ಕೋಟಿ ರೂ ಹೆಚ್ಚುವರಿ ಹೊರೆಯಾಗಿದೆ.
ಯುನಿಟ್ಗೆ 1 ರೂ ಏರಿಕೆಗೆ ಎಸ್ಕಾಂಗಳ ಬೇಡಿಕೆ
ಈ ಆರ್ಥಿಕ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ವಿದ್ಯುತ್ ದರ ಏರಿಕೆ ಸಾಧ್ಯತೆ ಇದೆ. ತ್ರೈವಾರ್ಷಿಕ ದರ ಏರಿಕೆ ನೀತಿಯಂತೆ ಈ ಬಾರಿ ಕೂಡ ಯುನಿಟ್ಗೆ 35 ಪೈಸೆ ಹೆಚ್ಚಳವಾಗುವ ನಿರೀಕ್ಷೆ ವ್ಯಕ್ತವಾಗಿದೆ.

ಈ ಕುರಿತು ಫೆಬ್ರವರಿ 16ರಿಂದ 28ರವರೆಗೆ KERC ಸಾರ್ವಜನಿಕ ಆಕ್ಷೇಪಣೆಗಳನ್ನು ಆಹ್ವಾನಿಸಲಿದೆ. ಆ ಬಳಿಕ ನಡೆಯುವ ಸಭೆಯಲ್ಲಿ ಪ್ರತಿ ಯುನಿಟ್ಗೆ ಎಷ್ಟು ದರ ಏರಿಕೆ ಮಾಡಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.
ವಿದ್ಯುತ್ ದರ ಏರಿಕೆ ಜಾರಿಯಾದರೆ ರಾಜ್ಯದ ಗೃಹ ಬಳಕೆದಾರರು ಹಾಗೂ ವಾಣಿಜ್ಯ ಗ್ರಾಹಕರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ.
MUST WATCH : ಹುಷಾರ್..ಅಪ್ಪಿತಪ್ಪಿ ಈ ಆಸ್ಪತ್ರೆಗೆ ಹೋಗ್ಬೇಡಿ ಇಲ್ಲಿ ಟ್ರೀಟ್ಮೆಂಟ್ ತಗೊಂಡ್ರೆ ಅಷ್ಟೇ ಕಥೆ




