Davanagere : ಸ್ಕೂಲ್ಗೆ ಹೋಗಬೇಡ ಎಂದು ಪುಸ್ತಕವನ್ನು ಸುಟ್ಟು ಹಾಕಿದ ಪರಿಣಾಮ ತಂದೆಯ ವಿರುದ್ದವೇ ಪುತ್ರಿ ದೂರು ನೀಡಿದ್ದಾಳೆ.

Davanagere : ಶಾಲೆಗೆ ಹೋಗಬೇಡ ಎಂದು ಮಗಳ ಪುಸ್ತಕಗಳನ್ನು ಸುಟ್ಟು ಹಾಕಿದ ತಂದೆ ವಿರುದ್ಧ 10ನೇ ತರಗತಿ ಓದುತ್ತಿರುವ ಪುತ್ರಿಯೊಬ್ಬಳು ದೂರು ನೀಡಿರುವ ಘಟನೆ ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯ ಅರುಂಡಿ ಗ್ರಾಮದಲ್ಲಿ ನಡೆದಿದೆ.
ಕುಡಿತದ ಅಮಲಲ್ಲಿ ಪುಸ್ತಕ ಸುಟ್ಟ ತಂದೆ ವಿರುದ್ಧ ದೂರು
ಮಗಳು ಶಾಲೆಗೆ ಹೋಗುವುದನ್ನು ತಂದೆ ನಿರಂತರವಾಗಿ ತಡೆದು, ಮದ್ಯಪಾನ ಮಾಡಿ ಮನೆಗೆ ಬಂದು ಗಲಾಟೆ ನಡೆಸುತ್ತಿದ್ದನಂತೆ. ಇತ್ತೀಚೆಗೆ ಶಾಲೆಗೆ ಹೋಗಬೇಡ ಎಂಬ ಕಾರಣಕ್ಕೆ ಮಗಳ ಪಠ್ಯಪುಸ್ತಕಗಳನ್ನು ಸುಟ್ಟು ಹಾಕಿದ್ದಾನೆ.
ಇದರಿಂದ ಆತಂಕಗೊಂಡ ವಿದ್ಯಾರ್ಥಿನಿ ತಕ್ಷಣ 112 ತುರ್ತು ಸಹಾಯವಾಣಿಗೆ ಕರೆ ಮಾಡಿ, ತಂದೆ ಕುಡಿದು ಗಲಾಟೆ ಮಾಡುವುದಲ್ಲದೆ ತನ್ನ ವಿದ್ಯಾಭ್ಯಾಸಕ್ಕೆ ಅಡ್ಡಿಪಡಿಸುತ್ತಿದ್ದಾನೆ ಎಂದು ದೂರು ದಾಖಲಿಸಿದ್ದಾಳೆ.
ಇದನ್ನೂ ಓದಿ : ನಾಡ ಬಾಂಬ್ ಸ್ಪೋಟಿಸಿ ಎರಡು ಹೋರಿಗಳು ಸಾವು..!
ವಿದ್ಯಾರ್ಥಿನಿಗೆ ಧೈರ್ಯ ತುಂಬಿದ ಪೊಲೀಸರು
ದೂರು ಪಡೆದ 112 ಸಿಬ್ಬಂದಿಗಳಾದ ಹೇಮರಾಜ್ ಮತ್ತು ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಮದ್ಯವ್ಯಸನಿ ತಂದೆಯನ್ನು ತರಾಟೆಗೆ ತೆಗೆದುಕೊಂಡು ಕಾನೂನು ಅರಿವು ನೀಡಿದರು. ಅಲ್ಲದೇ, ವಿದ್ಯಾರ್ಥಿನಿಗೆ ಧೈರ್ಯ ತುಂಬಿ, ತಕ್ಷಣ ಅಗತ್ಯ ಪುಸ್ತಕಗಳು ಹಾಗೂ ನೋಟ್ಬುಕ್ಗಳನ್ನು ಒದಗಿಸಿದರು.
ನ್ಯಾಮತಿ ಪೊಲೀಸ್ ಠಾಣೆಯ PSI ರವಿ ಅವರು ವಿದ್ಯಾರ್ಥಿನಿಗೆ ಹೆಚ್ಚಿನ ರೀತಿಯಲ್ಲಿ ಅಗತ್ಯ ಪಠ್ಯಸಾಮಗ್ರಿಗಳನ್ನು ನೀಡುವ ವ್ಯವಸ್ಥೆ ಮಾಡಿದ್ದು, ಶಾಲಾ ಶಿಕ್ಷಕರಿಗೂ ಮಾಹಿತಿ ನೀಡಿ, ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ವಿದ್ಯಾರ್ಥಿನಿಯ ಶಿಕ್ಷಣ ಹಕ್ಕನ್ನು ರಕ್ಷಿಸಿದ ನ್ಯಾಮತಿ ಪೊಲೀಸ್ ಹಾಗೂ 112 ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಸೇರಿದಂತೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.
MUST WATCH : POLICE ಇಲಾಖೆಗೆ ಬೊಲೇರೋ ಹಸ್ತಾಂತರ – ಹೊಸ ವಾಹನಕ್ಕೆ SP ಶುಭನ್ವಿತಾ ಚಾಲನೆ




