Ramanagara : ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು..? – ಕಾಂಗರೂ ಕೇರ್ ಆಸ್ಪತ್ರೆ ವಿರುದ್ಧ ಆರೋಪ.

Ramanagara ದಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ಶುರುವಾಗಿರೋ ತಾಯಿ- ಮಕ್ಕಳ ಹೈಟೆಕ್ ಆಸ್ಪತ್ರೆಯಾಗಿರೋ ಕಾಂಗರೂ ಕೇರ್ನ ವೈದ್ಯರ ನಿರ್ಲಕ್ಷ್ಯದಿಂದ ಎರಡೂವರೆ ವರ್ಷದ ಮಗು ಸಾವನ್ನಪ್ಪಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಎರಡೂವರೆ ವರ್ಷದ ಮಗು ಸಾವನ್ನಪ್ಪಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ವೈದ್ಯರ ನಿರ್ಲಕ್ಷ್ದದಿಂದ ಮಗು ಸಾವು ಆರೋಪ
24 ಗಂಟೆಗಳ ಕಾಲ ಸೇವೆ ನೀಡುವ ತಾಯಿ-ಮಕ್ಕಳ ಆಸ್ಪತ್ರೆ ಜೊತೆಗೆ ನವಜಾತ ಶಿಶುಗಳ ತೀವ್ರ ನಿಗಾ ಘಟಕ ಇರೋ ಕಾಂಗರೂ ಕೇರ್ ಆಸ್ಪತ್ರೆಯು ರಾಮನಗರದಲ್ಲಿ ಶುರುವಾಗಿದ್ದು, ರಾಮನಗರ ಸುತ್ತಮುತ್ತಲ ಜನರು ತಮ್ಮ ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಈ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೀಗ ಕಾಂಗರೂ ಕೇರ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ಎರಡೂವರೆ ವರ್ಷದ ಮಗು ಸಾವನ್ನಪ್ಪಿದೆ ಎಂದು ಆರೋಪ ಮಾಡಲಾಗಿದೆ.
ಇದನ್ನು ಓದಿ : ಗನ್ ಹಿಡಿದು ಕಾಂಗ್ರೆಸ್ ಮುಖಂಡನ ಡ್ಯಾನ್ಸ್..! ವಿಡಿಯೋ ವೈರಲ್

ವೈದ್ಯರ ನಿರ್ಲಕ್ಷ್ಯದಿಂದಲೇ ಸಾವನ್ನಪ್ಪಿದೆ ಎಂದು ಆರೋಪ
ರಾಮನಗರ ತಾಲೂಕಿನ ಚಕ್ಕೆರೆದೊಡ್ಡಿ ಗ್ರಾಮದ ಸಿದ್ದರಾಜು ಎಂಬುವವರ ಮಗುವಿಗೆ ಶೀತ, ಕೆಮ್ಮು ಹೆಚ್ಚಾಗಿದ್ದು, ಕಾಂಗರೂ ಕೇರ್ ಆಸ್ಪತ್ರೆಗೆ ಕರೆತರಲಾಗಿತ್ತು.
ಆದ್ರೆ ಚಿಕಿತ್ಸೆ ವೇಳೆ ಮಗು ಸಾವನ್ನಪ್ಪಿದೆ, ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿದ್ರು. ಆಸ್ಪತ್ರೆ ಮುಂಭಾಗ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.
ಉತ್ತಮ ಚಿಕಿತ್ಸೆ ಸಿಗ್ತಾ ಇಲ್ವಾ..?
ರಾಜ್ಯದಲ್ಲಿ ತಾಯಿ ಹಾಗೂ ನವಜಾತ ಶಿಶುಗಳ ಆರೋಗ್ಯಕ್ಕಾಗಿ ಸುಮಾರು 8 ಜಿಲ್ಲೆಗಳಲ್ಲಿ ಶುರುವಾಗಿದ್ದು, ಉತ್ತಮ ಚಿಕಿತ್ಸೆ ನೀಡುತ್ತೆ ಅನ್ನೋ ಭರವಸೆ ಮೂಡಿಸಿದ್ದ ಕಾಂಗರೂ ಕೇರ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಎರಡುವರೆ ವರ್ಷದ ಮಗು ಸಾವನ್ನಪ್ಪಿದ್ದು, ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.
ಅಲ್ದೇ ಜನರ ವಿಶ್ವಾಸ ಗಳಿಸಿದ್ದ ಕಾಂಗರೂ ಕೇರ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗ್ತಾ ಇಲ್ವಾ..? ವೈದ್ಯರು ನಿರ್ಲಕ್ಷ್ಯ ತೋರಿಸ್ತಾ ಇದ್ದಾರಾ ಎಂಬ ಅನುಮಾನ ವ್ಯಕ್ತವಾಗ್ತಾ ಇದೆ.

ಇದನ್ನು ನೋಡಿ : ರಾತ್ರೋರಾತ್ರಿ ಚಿನ್ನದ ಅಂಗಡಿಗೆ ಕನ್ನ – ಕಳ್ಳತನಕ್ಕೆ ಬೆಚ್ಚಿಬಿದ್ದ ಅಂಗಡಿ ಮಾಲೀಕ




