Chikkaballapura : ಅತಿಥಿ ಶಿಕ್ಷಕನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ.

ಇತ್ತೀಚಿಗೆ ಪ್ರೀತಿ ಪ್ರೇಮ ಎಂಬುದು ಬರೀ ಮದುವೆ ಆಗೋವರೆಗೆ ಮಾತ್ರ ಎನ್ನುವಂತಾಗಿದೆ. ಮೂರ್ನಾಲ್ಕು ವರ್ಷ ಪ್ರೀತಿ ಮಾಡಿ, ಮನೆಯವರನ್ನ ಒಪ್ಪಿಸಿ, ನನಗೆ ನಿಮ್ಮ ಮಗಳನ್ನ ಮಾತ್ರ ಕೊಡಿ ಯಾವುದೇ ವರದಕ್ಷಿಣೆ ಏನೂ ಬೇಡ ಎಂದು ಕಾಡಿ ಬೇಡಿ ಮದುವೆ ಆದವ, ಮದುವೆ ಆದ ನಂತರ ವರಸೆ ಬದಲಿಸಿದ್ದಾನೆ.
ಮಕ್ಕಳಾಗಿಲ್ಲ, ವರದಕ್ಷಿಣೆ ತಂದಿಲ್ಲ ಎಂದು ಪ್ರತಿನಿತ್ಯ ಕಿರುಕುಳ ನೀಡ್ತಾ ಇದ್ದು, ನೊಂದ ಮಹಿಳೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಬಾಸುಂಡೆ ಬರುವಂತೆ ಥಳಿಸಿದ ಕಿರಾತಕ
ಹೀಗೆ ಮಹಿಳೆಯ ದೇಹದ ಮೇಲೆ ಬಿದ್ದಿರುವ ಬಾಸುಂಡೆ ಬರೆಗಳು, ನನಗೆ ನ್ಯಾಯ ಬೇಕು ಎಂದು ಕೇಳಿಕೊಳ್ಳುತ್ತಿರುವ ಮಹಿಳೆ, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತೆನೆಯೂರು ಗ್ರಾಮದಲ್ಲಿ. ಅದೇ ಗ್ರಾಮದ ವಿಜಯ್ ಕುಮಾರ್ ಎಂಬಾತ ವೃತ್ತಿಯಲ್ಲಿ ಅತಿಥಿ ಶಿಕ್ಷಕ.
ಮಕ್ಕಳಿಗೆ ಸರಿಯಾದ ಪಾಠ ಹೇಳಿಕೊಡಬೇಕಾದ ಈತನೇ ಈಗ ದಾರಿ ತಪ್ಪಿದ್ದಾನೆ. 2019 ರಲ್ಲಿ ಯುವತಿಯೋರ್ವಳನ್ನು ಮೂರ್ನಾಲ್ಕು ವರ್ಷಗಳ ಕಾಲ ಪ್ರೀತಿ ಮಾಡಿ ಮನೆಯವರನ್ನ ಒಪ್ಪಿಸಿ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದನಂತೆ.
ನನಗೆ ಯಾವುದೇ ವರದಕ್ಷಿಣಿ ಬೇಡ
ಹೆಣ್ಣು ಕೇಳಲು ಹೋದಾಗ ನನಗೆ ಯಾವುದೇ ವರದಕ್ಷಿಣೆ ಏನೂ ಬೇಡ ನಿಮ್ಮ ಮಗಳು ಕೊಟ್ಟರೆ ಸಾಕು ಎಂದು ಹೇಳಿ, ಮದುವೆ ಆಗಿ ಐದು ವರ್ಷ ಆದ ನಂತರ ಮಕ್ಕಳಾಗಿಲ್ಲ, ನೀನು ತವರು ಮನೆಯಿಂದ ವರದಕ್ಷಿಣೆ ತಂದಿಲ್ಲ ಎಂದು ಹೆಂಡತಿಗೆ ಬಾಸುಂಡೆ ಬರೆ ಬರುವ ರೀತಿ ಹೊಡೆದಿದ್ದಾನೆ ಎಂದು ಆರೋಪ ಮಹಿಳೆ ಆರೋಪ ಮಾಡುತ್ತಿದ್ದಾಳೆ.
ಇದನ್ನು ಓದಿ : ಗೋವಾದಲ್ಲಿ ಹೈ–ಇಂಟೆನ್ಸಿಟಿ Racing ಕುರಿತು ಕಿಚ್ಚ Sudeep ಟಾಕ್.!

ಶಿಕ್ಷಕನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ
ಇನ್ನು ಗಂಡ ವಿಜಯ್ ಕುಮಾರ್ ಕಿರುಕುಳಕ್ಕೆ ಆತನ ತಾಯಿಯೂ ಕೂಡ ಸಾಥ್ ಕೊಡ್ತಾ ಇದ್ದು ಈ ವಿಚಾರವಾಗಿ ಈ ಹಿಂದೆ ಕೂಡ ಮಹಿಳೆ ಪೋಲೀಸ್ ಠಾಣಾ ಮೆಟ್ಟಿಲು ಏರಿದ್ದಳು. ಆಗ ಕುಟುಂಬಸ್ಥರು ಮತ್ತು ಹಿರಿಯರು ಸೇರಿ ನ್ಯಾಯ ಪಂಚಾಯತಿ ಮಾಡಿ ಇಬ್ಬರನ್ನೂ ರಾಜಿ ಮಾಡಿ ಕಳಿಸಿದ್ದರಂತೆ.
ವಾಚ್ಯ ಶಬ್ದಗಳಿಂದ ನಿಂದನೆ
ಆದರೆ ಆಸಾಮಿ ಮಾತ್ರ ಬದಲಾಗಿಲ್ಲ. ನೀನು ಹಣ ತರಬೇಕು ಎಂದು ಪ್ರತಿನಿತ್ಯ ಹಲ್ಲೆಯ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದನಂತೆ.
ಜೊತೆಗೆ ತನ್ನ ತಾಯಿ ಕರೆ ಮಾಡಿದರೂ ಅನುಮಾನದಿಂದ ನೋಡುತ್ತಿದ್ದನಂತೆ. ಯಾರ ಜೊತೆ ಮಾತನಾಡುತ್ತಿದ್ದೀಯಾ ಎಂದು ಗಲಾಟೆ ಮಾಡುತ್ತಿದ್ದನಂತೆ.
ಗಂಡ ಮತ್ತು ಅತ್ತೆಯ ಮೇಲೆ ದೂರು
ಈಗ ನೊಂದ ಮಹಿಳೆ ಸೂಲಿಬೆಲೆ ಪೋಲೀಸ್ ಠಾಣೆಗೆ ಗಂಡ ಮತ್ತು ಅತ್ತೆಯ ಮೇಲೆ ದೂರು ನೀಡಿದ್ದಾಳೆ. ಇಬ್ಬರನ್ನೂ ಬಂಧಿಸಬೇಕು ಎಂದು ಆಗ್ರಹ ಮಾಡುತ್ತಿದ್ದಾಳೆ.

ಇದನ್ನು ನೋಡಿ : TUMAKURU | ಊರುಕೆರೆ ಬಳಿ ಟ್ರಾಫಿಕ್ ಜಾಮ್ ವಾಹನ ಸವಾರರು ಹೈರಾಣು




