Kiccha Sudeep : Indian Racing Festival (IRF) ಅಂಗವಾಗಿ ಫೆಬ್ರವರಿ 14 ಮತ್ತು 15ರಂದು ಗೋವಾದ ರಸ್ತೆಗಳಲ್ಲಿ ಅದ್ಧೂರಿ ಸ್ಟ್ರೀಟ್ ರೇಸಿಂಗ್ ನಡೆಯಲಿದೆ.

Kiccha Sudeep : ಫೆಬ್ರವರಿ 14 ಮತ್ತು 15ರಂದು ಗೋವಾದ ರಸ್ತೆಗಳು ಹೈ–ಇಂಟೆನ್ಸಿಟಿ ಸ್ಟ್ರೀಟ್ ರೇಸಿಂಗ್ ಕಣವಾಗಿ ರೂಪುಗೊಳ್ಳಲಿವೆ. ನಟ ಹಾಗೂ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡದ ಮಾಲೀಕರಾದ ಕಿಚ್ಚ ಸುದೀಪ್ ಈ ಬಗ್ಗೆ ಮಾತನಾಡಿದ್ದಾರೆ.
ಫೆಬ್ರವರಿ 14–15ರಂದು ಗೋವಾದಲ್ಲಿ ರೇಸಿಂಗ್ ಜ್ವರ
ಸ್ಟ್ರೀಟ್ ರೇಸಿಂಗ್ನ ವೈಶಿಷ್ಟ್ಯತೆ ಮತ್ತು ಸವಾಲುಗಳ ಕುರಿತು . “ಸ್ಟ್ರೀಟ್ ರೇಸಿಂಗ್ ಎನ್ನುವುದು ಸಮಯಸ್ಪೂರ್ತಿ, ಧೈರ್ಯ ಮತ್ತು ಸಂಯಮದ ಪರಮ ಪರೀಕ್ಷೆ. ಇವೇ ಮೌಲ್ಯಗಳು ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಗುರುತು” ಎಂದು ಸುದೀಪ್ ಹೇಳಿದ್ದಾರೆ.
ಪರ್ಮನೆಂಟ್ ಟ್ರ್ಯಾಕ್ನಲ್ಲಿ ಎಲ್ಲವೂ ನಿರ್ದಿಷ್ಟ ನಿಯಂತ್ರಣದಲ್ಲಿ ಇರುತ್ತದೆ. ಆದರೆ ಸ್ಟ್ರೀಟ್ ರೇಸಿಂಗ್ ಸಂಪೂರ್ಣ ಭಿನ್ನವಾಗಿದ್ದು, ಅದು ರೇಸರ್ನ ಮೈಂಡ್ಸೆಟ್ನ್ನೇ ಬದಲಿಸಿಬಿಡುತ್ತದೆ ಎಂದು ಸುದೀಪ್ ಅಭಿಪ್ರಾಯಪಟ್ಟಿದ್ದಾರೆ.
ಸ್ಟ್ರೀಟ್ ರೇಸಿಂಗ್ ಕುರಿತು ಸುದೀಪ್ ಟಾಕ್.?
“ಇಲ್ಲಿ ಪರ್ಫೆಕ್ಷನ್ಗಿಂತ ಮುಖ್ಯವಾಗಿರುವುದು ಯಾವ ಸವಾಲನ್ನಾದರೂ ಎದುರಿಸುವ ಗಟ್ಟಿ ಮನಸ್ಸು. ಇದು ಬರೀ ರೇಸ್ ಅಲ್ಲ, ಧೈರ್ಯ ಮತ್ತು ಆಟಿಟ್ಯೂಡ್ಗೆ ನಡೆಯುವ ಅಗ್ನಿಪರೀಕ್ಷೆ. ಇಡೀ ನಗರವೇ ಜೀವಂತವಾಗಿರುವಾಗ, ರೇಸರ್ ಕೂಡ ಅದೇ ಜೋಶ್ನೊಂದಿಗೆ ಮುನ್ನುಗ್ಗಬೇಕಾಗುತ್ತದೆ” ಎಂದಿದ್ದಾರೆ.

ಇನ್ನು ಸ್ಟ್ರೀಟ್ ರೇಸಿಂಗ್ ಮೋಟಾರ್ಸ್ಪೋರ್ಟ್ ಅನ್ನು ಜನರಿಗೆ ಇನ್ನಷ್ಟು ಹತ್ತಿರ ತರುತ್ತದೆ ಎಂದು ಅವರು ಹೇಳಿದ್ದಾರೆ. “ಈ ಕ್ರೀಡೆಯನ್ನು ಮುಚ್ಚಿದ ಸರ್ಕ್ಯೂಟ್ಗಳಿಂದ ಹೊರತಂದು ನಗರದ ಹೃದಯಭಾಗಕ್ಕೆ ಕರೆದೊಯ್ಯುತ್ತದೆ.
ಇದು ಭಾರೀ ಅಬ್ಬರದ ಮತ್ತು ತೀವ್ರ ಸ್ಪರ್ಧೆಯಾಗಿದ್ದು, ಸಣ್ಣ ತಪ್ಪಿಗೂ ಅವಕಾಶವಿಲ್ಲ. ಜನರ ಶಕ್ತಿಯೇ ತಂಡವನ್ನು ಸದಾ ಎಚ್ಚರದಲ್ಲೂ ಶಾರ್ಪ್ ಆಗಿಯೂ ಇಡುತ್ತದೆ” ಎಂದು ಸುದೀಪ್ ಹೇಳಿದರು.
IRF ಸ್ಟ್ರೀಟ್ ರೇಸಿಂಗ್ಗೆ ಕಿಚ್ಚ ಸುದೀಪ್ ಬೆಂಬಲ
ಇನ್ನೂ ತಂಡದ ಸಿದ್ಧತೆಗಳ ಕುರಿತು ಮಾತನಾಡಿದ ಅವರು, “ನಾವು ನಮ್ಮ ಚಾಲಕರ ಅಂತಃಪ್ರಜ್ಞೆ, ಅನುಭವ ಮತ್ತು ಶಿಸ್ತಿನ ಮೇಲೆ ನಂಬಿಕೆ ಇಟ್ಟಿದ್ದೇವೆ. ಅತಿಯಾದ ವೇಗಕ್ಕಿಂತ ಇಲ್ಲಿ ನಿಖರತೆ ಮತ್ತು ನಿಯಂತ್ರಣವೇ ಮುಖ್ಯ.
ಇದನ್ನೂ ಓದಿ : ಕ್ರಿಸ್ ಗೇಲ್ ಭರ್ಜರಿ ದಾಖಲೆ ಮುರಿದ Shimron Hetmyer

ಒಬ್ಬ ಯುವ ಯುರೋಪಿಯನ್ ರೇಸರ್ ಭಾರತವನ್ನು ತನ್ನ ಪ್ರತಿಭೆ ಪ್ರದರ್ಶಿಸುವ ವೇದಿಕೆಯಾಗಿ ಆಯ್ಕೆ ಮಾಡುತ್ತಿರುವುದು, ಜಾಗತಿಕ ಮಟ್ಟದ ಪ್ರತಿಭೆಗಳಿಗೆ ನಮ್ಮ ರೇಸಿಂಗ್ ವ್ಯವಸ್ಥೆಯ ಮೇಲೆ ಇರುವ ವಿಶ್ವಾಸವನ್ನು ತೋರಿಸುತ್ತದೆ” ಎಂದು ಸುದೀಪ್ ತಿಳಿಸಿದ್ದಾರೆ.
MUST WATCH : ಬೆಂಗಳೂರಲ್ಲಿ ಮತ್ತೆ RCB ಮ್ಯಾಚ್ ಭದ್ರತೆ ಬಗ್ಗೆ ಪರಮೇಶ್ವರ್ ಏನಂದ್ರು ಗೊತ್ತಾ?




