
ಅದ್ಯಾಕೋ ತುಮಕೂರು ಸಿಟಿ ಇತ್ತೀಚಿನ ದಿನಗಳಲ್ಲಿ ಸಮಸ್ಯೆಗಳ ಆಗರವಾಗಿ ಬದಲಾಗುತ್ತಿದೆ. ಅತ್ತ ಜನರು ಕೂಡ ಪಾಲಿಕೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ನಿಮ್ಮ ಪ್ರಜಾಶಕ್ತಿ ಕೂಡ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಸುದ್ದಿಯನ್ನು ಬಿತ್ತರಿಸಿ, ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ಆದ್ರೆ ಅದ್ಯಾಕೋ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದಿಗೂ ಕೂಡ ಸಮಸ್ಯೆಗಳು ತಪ್ಪುತ್ತಿಲ್ಲ. ಒಂದಿಲ್ಲೊಂದು ಏರಿಯಾದಲ್ಲಿ ಸಮಸ್ಯೆಗಳ ಸರಮಾಲೆಗಳಾಗಿ ಬಟಾಬಯಲಾಗ್ತಿವೆ. ಇತ್ತ ಬಡ್ಡಿಹಳ್ಳಿ ಕೆರೆ ಹಿಂಭಾಗದ ರಿಂಗ್ ರಸ್ತೆಯ ಬಳಿ ಇರುವ ಜನರು ಯುಜಿಡಿ ದಿಗ್ಬಂಧನದಲ್ಲಿಯೇ ಜೀವನ ನಡೆಸುವಂತಾಗಿದೆ. ಆದ್ರೆ ಅಧಿಕಾರಿಗಳಿಗೆ ತಿಳಿಸಿದ್ರು ತಲೆಕೆಡಿಸಿಕೊಳ್ಳುತ್ತಿಲ್ಲವಂತೆ

ತುಮಕೂರಿನ ಕ್ಯಾತ್ಸಂದ್ರ 33 ನೇ ವಾರ್ಡ್ ನ ಬಡ್ಡಿಹಳ್ಳಿ ಕೆರೆ ಹಿಂಭಾಗ ರಿಂಗ್ ರಸ್ತೆ ಬಳಿ ಇರುವ, ಮನೆಗಳಿಗೆ ಯುಜಿಡಿ ನೀರು ನುಗ್ಗಿದ್ದು, ನಿವಾಸಿಗಳ ಸ್ಥಿತಿ ಹೇಳತೀರದಂತಾಗಿದೆ. ಇನ್ನು ಕೆರೆಯ ಪಕ್ಕದಲ್ಲಿ ಯುಜಿಡಿ ಹೊಡೆದು ಬಾರಿ ಪ್ರಮಾಣದ ನೀರು ಹರಿತಾ ಇದೆ. ಇದರಿಂದ ನೀರು ಮನೆಗಳಿಗೆ ನುಗ್ಗಿತ್ತಿದೆ. ಅಲ್ಲಿ ವಾಸಿಸುವ ಸ್ಥಳೀಯ ನಿವಾಸಿಗಳು ಪ್ರತಿನಿತ್ಯ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ವರ್ಷದಿಂದಲೂ ಯುಜಿಡಿ ಉಕ್ಕಿ ಹರಿತಾ ಇದೆ. ಸಾರ್ವಜನಿಕರು ಇಲ್ಲಿ ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ. ಮನೆಯಲ್ಲಿ ಮಕ್ಕಳು, ವಯೋ ವೃದ್ಧರಿದ್ದರಂತೆ. ಈ ಯುಜಿಡಿ ಸಮಸ್ಯೆಯಿಂದಾಗಿ ಅನೇಕ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದ್ರು ಕೂಡ ತಲೆ ಕೆಡಿಸಿಕೊಳ್ಳುತ್ತಿಲ್ಲವಂತೆ. ಹೀಗಾಗಿ ಪಾಲಿಕೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ರು.

ಇನ್ನು ಇಲ್ಲಿ ಸುಮಾರು 1 ವರ್ಷದಿಂದಲೂ ಯುಜಿಡಿ ಸಮಸ್ಯೆ ಇದ್ದು, ಇಲ್ಲಿ ಚಿಕ್ಕ ಮಕ್ಕಳು ಓಡಾಡಾಡುವುದಕ್ಕೆ ಕಷ್ಟ ಆಗ್ತಿದೆ. ಪ್ರತಿ ದಿನ ಕೂಡ ಸಮಸ್ಯೆ ಬೆಳೆಯುತ್ತಿದೆ ಹೊರತು, ಕಡಿಮೆಯಾಗುತ್ತಿಲ್ಲ. ಎಷ್ಟೇ ಬಾರಿ ಅಧಿಕಾರಿಗಳಿಗೆ ದೂರು ನೀಡಿದರು ಕೂಡ, ಯಾವುದೇ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಕಿಡಿಕಾರಿದ್ರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಇಲ್ಲಿನ ಜನರ ಜೀವವನ್ನು ರಕ್ಷಿಸುವ ಕೆಲಸ ಮಾಡಬೇಕಿದೆ. ಇಲ್ಲವಾದಲ್ಲಿ ಜನರು ಅನೇಕ ಮಾರಕ ರೋಗಗಳಿಗೆ ತುತ್ತಾಗಿ ಸಾವು-ನೋವು ಸಂಭವಿಸಿದ್ರೆ ಅನೇಕ ನೇರ ಹೊಣೆಗಾರರು ನೀವುಗಳೇ ಆಗುತ್ತಿರ..




