
ಇತ್ತೀಚಿನ ದಿನಗಳಲ್ಲಿ ಅದ್ಯಾಕೋ ಲವ್ ಮ್ಯಾರೆಜ್, ಅರೆಂಜ್ ಮ್ಯಾರೆಜ್ ಎರಡರಲ್ಲೂ ದೊಡ್ಡ ದೊಡ್ಡ ಗಲಾಟೆಗಳೇ ನಡೆಯುತ್ತಿವೆ. ಇದೇ ಕಾರಣಕ್ಕೆ ಕೊಲೆ ಮಾಡುವ ಹಂತಕ್ಕೂ ಕೆಲವರು ತಲುಪುತ್ತಿದ್ದಾರೆ. ಚಿಕ್ಕಪುಟ್ಟ ವಿಷಯಗಳಿಗೆ ವಿಷ ಸೇವಿಸೋ, ನೇಣು ಹಾಕಿಕೊಳ್ಳೋದು, ಇಲ್ಲವೇ ಹೆಂಡತಿ ಕೊಲೆಗೆ ಗಂಡನೇ ಸ್ಕೇಚ್ ಹಾಕೋದು. ಇಲ್ಲ ಗಂಡನ ಕೊಲೆಗೆ ಹೆಂಡ್ತಿ ಸ್ಕೇಚ್ ಹಾಕೋದು ಕಾಮನ್ ಆಗಿಬಿಟ್ಟಿದೆ. ಅತ್ತ ಹಲವು ವರ್ಷ ಪ್ರೀತಿಸಿ, ಪೋಷಕರನ್ನು ಎದುರಾಕಿಕೊಂಡು ಮದುವೆ ಆದ ಪ್ರೇಮಿಗಳ ಜೀವನವೂ ಕೂಡ ಇದೇ ಹಾದಿ ಹಿಡಿಯುತ್ತಿದೆ. ಇಲ್ಲೊಂದು ಪ್ರೇಮ್ ಕಹಾನಿ ಇದೆ. ನಾವು ಹೇಳೊ ಹೊರಟಿರುವ ಈ ಪ್ರೇಮಿಗಳ ನಡುವೆ ಹುಳಿ ಹಿಂಡಿದವಳೆ ಹುಡುಗಿಯ ತಾಯಿಯಂತೆ. ಏನಿದು ಪ್ರೇಮ್ ಕಹಾನಿ, ನಿಜವಾಗಲೂ ತಾಯಿಯೆ ತನ್ನ ಮಗಳ ಜೀವನಕ್ಕೆ ಕೊಳ್ಳಿ ಇಟ್ಟಲಿ. ಆಗಾದ್ರೆ ಈ ಸ್ಟೋರಿಯನ್ನ ಕಂಪ್ಲೀಟ್ ಆಗಿ ನೋಡಿ..
ಹೌದು.. ಅವರಿಬ್ಬರು ಕಾಲೇಜಿಗೆ ಹೋಗುವಾಗಲೇ ಪ್ರೀತಿಸುತಿದ್ರು ..ಎರಡು ಕುಟುಂಬಗಳ ವಿರೋದದ ನಡುವೆಯೂ ತಿರುಪತಿಯಲ್ಲಿ ವಿವಾಹವಾಗಿದ್ರು. ಅವರಿಬ್ಬರ ದಾಂಪತ್ಯದ ಫಲವಾಗಿ ಒಂದು ಹೆಣ್ಣುಮಗು ಸಹ ಇತ್ತು. ,ಬಳಿಕ ಮಗನ ದಾಂಪತ್ಯದಲ್ಲಿ ಮೂಡಿದ ಬಿರುಕು ತಂದೆ ನರಕ ಅನುಭವಿಸುವಂತಾಗಿದೆ. ಹೀಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ತಂದೆ. ಖಾಕಿ ಕಣ್ಣಿಗೆ ಬೀಳದೆ ತಪ್ಪಿಸಿಕೊಂಡು ತಿರುಗಾಡುತ್ತಿರುವ ಮಗ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ.
ಇಷ್ಟಕ್ಕೂ ಈ ಪೋಟೋಗಳಲ್ಲಿ ಮುಂದಾಗಿ ಕಾಣುತ್ತಿರುವ ಜೋಡಿ ವರ್ಷಿಣಿ ಹಾಗೂ ಗುಣೇಶ್ ದಂಪತಿಗಳು ಗೂಬಲಹಳ್ಳಿ ಗ್ರಾಮದ ನಿವಾಸಿಗಳು. ಚಿಂತಾಮಣಿ ನಗರದ ವಿಕ್ರಮ್ ಕಾಲೇಜಿನಲ್ಲಿ ಪರಿಚಯವಾಗಿ ಬಳಿಕ ಪ್ರೀತಿಸುತಿದ್ರು , ಫೋಷಕರ ವಿರೋಧದ ನಡುವೆಯೂ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ವಿವಾಹವಾಗಿದ್ರು. ಅವರಿಬ್ಬರ ದಾಂಪತ್ಯಕ್ಕೆ ಫಲವಾಗಿ ಎರಡು ತಿಂಗಳ ಹೆಣ್ಣು ಮಗು ,ಬಳಿಕ ವರ್ಷಿಣಿಯ ತಾಯಿ ಸಿದ್ದಾರ್ಥಿ ಪದೇ ಪದೇ ಮಗಳ ಮನೆಗೆ ಬರುತ್ತಿದ್ದು, ಮಗಳ ಸಂಸಾರದಲ್ಲಿ ಹುಳಿ ಹಿಂಡಿದ್ದಳಂತೆ. ಬಳಿಕ ತಾಯಿಯ ತಾಳಕ್ಕೆ ಕುಣಿದ ವರ್ಷಿಣಿ ತನ್ನ ಗಂಡ ಗಣೇಶ್ ವಿರುದ್ದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ಲಂತೆ.
ಬಳಿಕ ಗುಣೇಶ್ ಗಾಗಿ ವರ್ಷಣಿಯ ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸುತ್ತಿದ್ರು. ಗುಣೇಶ್ ಸಿಕ್ಕರೆ ಕೊಂದೇ ಬಿಡ್ತಾರೇನೋ ಎಂಬ ಹಂತಕ್ಕೆ ಹುಡುಕಾಟ ನಡೆಸಿದ್ದಾರೆ. ಆ ವೇಳೆ ವರ್ಷಿಣಿಯ ಕುಟುಂಬಸ್ಥರಿಗೆ ಸಿಕ್ಕಿದ್ದು ಗುಣೇಶ್ ತಂದೆ ಮುನಿರಾಜು ,,ಶಿಡ್ಲಘಟ್ಟ ಪೊಲೀಸ್ ಠಾಣೆಗೆ ಕರೆತಂದು ಚಿಕ್ಕಬಳ್ಳಾಪುರ ಡಿಸಿಬಿ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಪದ್ಮ ಮುನಿರಾಜು ಮೇಲೆ ಹಲ್ಲೆ ಮಾಡಿದ್ರಂತೆ. ಬಳಿಕ ವರ್ಷಣಿಯ ಕುಟುಂಬಸ್ಥರೊಂದಿಗೆ ಸತೀಶ್ ಎಂಬ ಪೊಲೀಸ್ ಪೇದೆ ಗುಣೇಶ್ ತಂದೆಯನ್ನು ತಿರುಪತಿಗೆ ಕರೆದೊಯ್ದು ಮಾರಾಣಾಂತಿಕ ಹಲ್ಲೆ ನಡೆಸಿದ್ರಂತೆ..
ಇತ್ತ ವರದಕ್ಷಣೆ ಕಿರುಕುಳ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಗುಣೇಶ್. ಬೇಲ್ ಪೇಪರ್ ನ್ನು ಪೊಲೀಸ್ ಠಾಣೆಗೆ ಸಬ್ಮಿಟ್ ಮಾಡಬೇಕಾಗಿತ್ತು. ಆದರೆ, ವರ್ಷಣಿಯ ಕುಟುಂಬಸ್ಥರಿಂದ ಪ್ರಾಣಭಯ ಇರೋದ್ರಿಂದ ಅತ್ತ ಪೊಲೀಸರ ಕಣ್ಣಿಗೂ ಬೀಳದೆ ಅತ್ತ ವರ್ಷಣಿಯ ಪೋಷಕರ ಕಣ್ಣಿಗೂ ಬೀಳದೆ ತಪ್ಪಸಿಕೊಂಡು ಓಡಾಡುತಿದ್ದ. ಎರಡು ತಿಂಗಳ ಹಿಂದೆ ಹುಟ್ಟಿದ ಹೆಣ್ಣು ಮಗುವನ್ನ ನೋಡಲು ಆಗದೆ ಪರದಾಡುತಿದ್ದಾನೆ.
ಒಟ್ಟಾರೆ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾರೆ. ಕೂತು ಮಾತನಾಡಿ ಬಗೆ ಹರಿಸಿಕೊಳ್ಳಬೇಕಾದ ಸಂಸಾರದ ರಗಳೆ ಬೀದಿಗೆ ಬಂದಿದ್ದು, ಪೊಲೀಸ್ ಠಾಣೆ ಮೇಟ್ಟಿಲೇರಿದೆ. ಗಂಡಹೆಂಡತಿ ಮತ್ತು ಅವರ ಪೋಷಕರನ್ನು ಕರೆಸಿ ಬುದ್ದಿ ಹೇಳಿ ಒಂದುಗೂಡಿಸಬೇಕಿದ್ದ ಪೊಲೀಸರೇ, ಆರೋಪಿಯನ್ನು ಬಿಟ್ಟು ಆರೋಪಿಯ ತಂದೆಯನ್ನು ಎತ್ತಾಕ್ಕೊಂಡು ಹೋಗಿ ಥಳಿಸಿರೋದು ನಿಜಕ್ಕೂ ವಿಪರ್ಯ್ಯಾಸವೇ ಸರಿ.




