
CHAMARAJANAGARA NEWS : ದಸರಾ ರಜೆಯ ಹಿನ್ನೆಲೆಯಲ್ಲಿ ಅಜ್ಜಿ ಮನೆಗೆ ಬಂದಿದ್ದ ಇಬ್ಬರು ಸಹೋದರರು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ದುಃಖದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕುರುಬದೊಡ್ಡಿ ಗ್ರಾಮದಲ್ಲಿ ಇಂದು ನಡೆದಿದೆ.
ಆರ್.ಎಸ್.ದೊಡ್ಡಿ ಗ್ರಾಮದ ನಿವಾಸಿ ಕುಮಾರಸ್ವಾಮಿ ಅವರ ಪುತ್ರರಾದ ಯೋಗೇಶ್ (9)ಮತ್ತು ಸಂಜಯ್ (4)ಮೃತ ಬಾಲಕರಾಗಿದ್ದಾರೆ. ಅವರು ರಜೆಯ ನಿಮಿತ್ತ ಅಜ್ಜಿ ಮನೆಗೆ ಬಂದಿದ್ದು, ಅಲ್ಲಿ ಜಮೀನಿನ ಹತ್ತಿರ ಇರುವ ನೀರು ತುಂಬಿದ ಹೊಂಡದ ಬಳಿ ಆಟವಾಡುತ್ತಾ ಆಯತಪ್ಪಿ ಹೊಂಡಕ್ಕೆ ಬಿದ್ದಿದ್ದಾರೆ.
ಇನ್ನು ಈ ಅವಘಡದ ಬಗ್ಗೆ ತಿಳಿದ ತಕ್ಷಣ ಸ್ಥಳೀಯರು ಮಕ್ಕಳನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯ ಲಾ ದರೂ, ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದಾರೆ.




