ಗುಂಡ್ಲುಪೇಟೆಯಲ್ಲಿ ಯುವಕನ ಬರ್ಬರ Murder.

ಗೆಳೆಯನೊಂದಿಗೆ ಬೈಕ್ನಲ್ಲಿ ಪಾರ್ಟಿಗೆ ತೆರಳಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಸಮೀಪದ ದೊಡ್ಡಕೆರೆ ಏರಿ ಬಳಿ ಬೆಳಕಿಗೆ ಬಂದಿದೆ.
ಕತ್ತು ಸೀಳಿ ಬರ್ಬರವಾಗಿ Murder ಮಾಡಿದ್ಯಾರು?
ಗುಂಡ್ಲುಪೇಟೆ ತಾಲೂಕಿನ ಮೂಖಹಳ್ಳಿ ಗ್ರಾಮದ ನಿವಾಸಿ ನಂಜುಂಡಸ್ವಾಮಿ (23) ಕೊಲೆಯಾದ ಯುವಕನಾಗಿದ್ದಾನೆ. ಕತ್ತು ಕೊಯ್ದು Murder ಮಾಡಿದ ಸ್ಥಿತಿಯಲ್ಲಿ ನಂಜುಂಡಸ್ವಾಮಿಯ ಶವ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಪಾರ್ಟಿ ಮಾಡೋಣ ಬಾ
ಕೆಲಸ ಮುಗಿಸಿ ಮನೆಗೆ ಬಂದಿದ್ದ ನಂಜುಂಡಸ್ವಾಮಿಯನ್ನು ಬಲವಂತದಿಂದ ಪಾರ್ಟಿ ಮಾಡೋಣ ಬಾ ಎಂದು ಕರೆದೊಯ್ದಿದ್ದ ಅಜಯ್ ಎಂಬಾತ ಸದ್ಯ ತಲೆ ಮರೆಸಿಕೊಂಡಿದ್ದಾನೆ. ನಂಜುಂಡಸ್ವಾಮಿ ಬೆಂಗಳೂರು ಹಾಗೂ ನಂಜನಗೂಡು ಸೇರಿದಂತೆ ಹಲವೆಡೆಗಳಲ್ಲಿ ಸಣ್ಣಪುಟ್ಟ ಕೂಲಿ ಕೆಲಸ ಹಾಗೂ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದರೆ ಪಾರ್ಟಿಗೆ ಹೋದ ನಂತರ ಅಲ್ಲಿ ಏನಾಯಿತು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.
READ THIS : ಕೌಟುಂಬಿಕ ಕಲಹ – ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿದ ತಾಯಿ!

ಗಾಂಜಾ ಅಥವಾ ಮದ್ಯದ ನಶೆಯಲ್ಲಿ Murder?
ನಂಜುಂಡಸ್ವಾಮಿ, ಅಜಯ್ ಇಬ್ಬರೇ ಪಾರ್ಟಿ ಮಾಡಿದ್ದರಾ ಅಥವಾ ಇನ್ನೂ ಕೆಲವರು ಇದ್ದರಾ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಗಾಂಜಾ ಅಥವಾ ಮದ್ಯದ ನಶೆಯಲ್ಲಿ ಈ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ದಾಖಲು
ಮರಣೋತ್ತರ ಪರೀಕ್ಷೆ ಬಳಿಕ ನಂಜುಂಡಸ್ವಾಮಿಯ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ನಂಜುಂಡಸ್ವಾಮಿ ಸಹೋದರ ರಾಜು ನೀಡಿದ ದೂರಿನ ಮೇರೆಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗೆ ಪೊಲೀಸರ ತಂಡ ರಚಿಸಲಾಗಿದೆ. ನಂಜುಂಡಸ್ವಾಮಿಯನ್ನು ಪಾರ್ಟಿಗೆ ಕರೆದೊಯ್ದಿದ್ದ ಅಜಯ್ ಸಿಕ್ಕ ಬಳಿಕವೇ ಘಟನೆ ಸಂಪೂರ್ಣ ಸತ್ಯ ಬಯಲಾಗಬೇಕಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
MUST WATCH : ಹೆಣ್ಣು ಮಕ್ಕಳ ರಕ್ಷಣೆಗೆ ನಿಂತ ಸಖಿ, ಸಾಂತ್ವನ ಕೇಂದ್ರಗಳು





