
ಮುಖದ ಅಂದವನ್ನು ಹೆಚ್ಚಿಸುವಲ್ಲಿ ತುಟಿಗಳ ಪಾತ್ರ ಅಪಾರ. ಲಿಪ್ಸ್ಟಿಕ್ ಹಚ್ಚಿದರೂ, ತುಟಿಗಳು ಕಪ್ಪಾಗಿದ್ದರೆ ಸಂಪೂರ್ಣ ನೋಟ ಮಸುಕಾಗುತ್ತದೆ. ಇತ್ತೀಚೆಗೆ ಧೂಮಪಾನ, ಪೌಷ್ಟಿಕಾಂಶದ ಕೊರತೆ, ಹಾರ್ಮೋನು ಅಸಮತೋಲನ ಹಾಗೂ ಅತಿಯಾದ ಕಾಸ್ಮೆಟಿಕ್ ಬಳಕೆಯಿಂದ ತುಟಿಗಳ ಚರ್ಮ ಹಾನಿಗೊಳಗಾಗುತ್ತಿದ್ದು, ಕಪ್ಪಾಗುವ ಸಮಸ್ಯೆ ಸಾಮಾನ್ಯವಾಗಿದೆ.
ಬ್ಯೂಟಿ ತಜ್ಞರ ಪ್ರಕಾರ, ತುಟಿಗಳನ್ನು ಗುಲಾಬಿ ಬಣ್ಣದಲ್ಲಿ ಕಾಪಾಡಿಕೊಳ್ಳಲು ಜೀವನಶೈಲಿಯಲ್ಲಿ ಸಣ್ಣ ಬದಲಾವಣೆ ಹಾಗೂ ಮನೆಮದ್ದುಗಳು ಸಹಾಯಕ.
ತುಟಿಗಳು ಕಪ್ಪಾಗಲು ಕಾರಣಗಳು
- ಅತಿಯಾದ ಧೂಮಪಾನ
- ಪೌಷ್ಟಿಕಾಂಶದ ಕೊರತೆ
- ಹಾರ್ಮೋನು ಅಸಮತೋಲನ
- ಕೆಲವು ಔಷಧಿಗಳ ಅಡ್ಡ ಪರಿಣಾಮ
- ಅತಿಯಾಗಿ ಲಿಪ್ಸ್ಟಿಕ್ ಹಾಗೂ ಕಾಸ್ಮೆಟಿಕ್ ಬಳಕೆ
ಕಪ್ಪಾದ ತುಟಿಗಳಿಗೆ ಮನೆಮದ್ದುಗಳು
- ಸಕ್ಕರೆ–ನಿಂಬೆ–ಆಲಿವ್ ಎಣ್ಣೆ ಪೇಸ್ಟ್
ಒಂದು ಬೌಲ್ನಲ್ಲಿ ಸಕ್ಕರೆ, ಕೆಲವು ಹನಿ ನಿಂಬೆ ರಸ ಹಾಗೂ ಆಲಿವ್ ಎಣ್ಣೆ ಸೇರಿಸಿ ಪೇಸ್ಟ್ ತಯಾರಿಸಿ. ಪ್ರತಿದಿನ ತುಟಿಗಳಿಗೆ ಹಚ್ಚಿ ಮಸಾಜ್ ಮಾಡಿದರೆ ಡೆಡ್ ಸ್ಕಿನ್ ತೆಗೆಯುತ್ತದೆ ಮತ್ತು ತುಟಿಗಳು ನೈಸರ್ಗಿಕವಾಗಿ ಹೊಳೆಯುತ್ತವೆ.

ಅಲೋವೆರಾ ಜೆಲ್
ರಾತ್ರಿ ಮಲಗುವ ಮುನ್ನ ತುಟಿಗಳಿಗೆ ಅಲೋವೆರಾ ಜೆಲ್ ಹಚ್ಚಿ ಬಿಡುವುದರಿಂದ ಶುಷ್ಕತೆ ಹೋಗಿ, ತುಟಿಗಳು ಗುಲಾಬಿ ಬಣ್ಣ ಪಡೆಯುತ್ತವೆ.

ರೋಸ್ ವಾಟರ್
ಹತ್ತಿಯ ಸಹಾಯದಿಂದ ರೋಸ್ ವಾಟರ್ ಹಚ್ಚುವುದರಿಂದ ಹೈಪರ್ ಪಿಗ್ಮೆಂಟೇಶನ್ ಕಡಿಮೆಯಾಗುತ್ತದೆ ಮತ್ತು ತುಟಿಗಳ ನೈಸರ್ಗಿಕ ಬಣ್ಣ ಕಾಪಾಡಿಕೊಳ್ಳಬಹುದು.

ಆಲಿವ್ ಎಣ್ಣೆ–ಸಕ್ಕರೆ ಸ್ಕ್ರಬ್
ವಾರಕ್ಕೆ ಎರಡು ಬಾರಿ ಆಲಿವ್ ಎಣ್ಣೆ ಮತ್ತು ಸಕ್ಕರೆ ಸ್ಕ್ರಬ್ ಮಾಡಿದರೆ ಕಪ್ಪಾದ ತುಟಿಗಳು ಕ್ರಮೇಣ ಮೃದುತ್ವ ಹಾಗೂ ನೈಸರ್ಗಿಕ ಬಣ್ಣ ಪಡೆಯುತ್ತವೆ.

ನೈಸರ್ಗಿಕ ಮನೆಮದ್ದುಗಳೊಂದಿಗೆ ಆರೋಗ್ಯಕರ ಆಹಾರ, ಧೂಮಪಾನ ನಿಯಂತ್ರಣ ಹಾಗೂ ಸರಿಯಾದ ಆರೈಕೆ ಮೂಲಕ ಕಪ್ಪಾದ ತುಟಿಗಳ ಸಮಸ್ಯೆಯನ್ನು ಸಂಪೂರ್ಣವಾಗಿ ತಡೆಯಬಹುದು.




