Actor Dhanveer : ಸ್ಯಾಂಡಲ್ವುಡ್ ನಟರಾದ ಧನ್ವೀರ್ ಗೌಡ ಹಾಗೂ ಝೈದ್ ಖಾನ್ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.

Actor Dhanveer : ಇತ್ತೀಚೆಗೆ ‘ಹಯಗ್ರೀವ’ ಚಿತ್ರದ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ಧನ್ವೀರ್ ದರ್ಶನ್ ಅವರ ಫೋಟೋ ಹಿಡಿದುಕೊಂಡು, “ಮೀಟರ್ ಬೇಕು, ಮೀಟರ್” ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.
ಈ ಹೇಳಿಕೆಗೆ ಇದೀಗ ಧನ್ವೀರ್ ಸ್ಪಷ್ಟನೆ ನೀಡಿದ್ದು, ಕಷ್ಟದ ಸಮಯದಲ್ಲಿ ಬಂದು ನಿಲ್ಲಬೇಕಾದವರು, ಸುಖದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ದರ್ಶನ್ ಅಣ್ಣ ಕಷ್ಟದಲ್ಲಿದ್ದಾಗ ಒಂದು ದಿನವೂ ಬಂದು ನಿಂತಿಲ್ಲ.
ಆದರೆ ಅವರು ಜಾಮೀನಿನ ಮೇಲೆ ಹೊರಬಂದ ಮರುದಿನವೇ ಮನೆಗೆ ಬಿರಿಯಾನಿ ಕಳುಹಿಸುವುದು ಸುಲಭ. ಕಷ್ಟದಲ್ಲಿದ್ದಾಗ ಯಾಕೆ ನಿಲ್ಲಲಿಲ್ಲ? ಇದರಿಂದಲೇ ಅವರ ವ್ಯಕ್ತಿತ್ವ ಗೊತ್ತಾಗುತ್ತದೆ” ಎಂದು ತಿರುಗೇಟು ನೀಡಿದ್ದಾರೆ.

ಕ್ಯಾಮರಾ ಇದೆ, ಪಕ್ಕದಲ್ಲಿ ಹುಡುಗಿ ಇದ್ದಾಳೆ ಅಂತ ಗಂಡಸ್ತನ ತೋರಿಸುವುದು ಬೇಡ. ಗಂಡಸ್ತನ ಅನ್ನೋದು ಕಷ್ಟದ ಸಮಯದಲ್ಲಿ ತೋರಿಸಬೇಕು. ಕ್ಯಾಮರಾ ಮುಂದೆ ಬಂದು ಮಾತನಾಡುವ ಗಂಡಸರನ್ನು ನಾನು ಸಾಕಷ್ಟು ನೋಡಿದ್ದೇನೆ. ಇದು ಯಾರಿಗೆ ಅರ್ಥವಾಗಬೇಕೋ ಅವರಿಗೆ ಅರ್ಥವಾಗಿದೆ. ಹೆಸರು ಹೇಳಲೇಬೇಕೆಂಬ ಅಗತ್ಯವಿಲ್ಲ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಇದನ್ನೂ ಓದಿ : ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ನಿರ್ದೇಶಕ ಪ್ರೇಮ್ ದೂರು – FIR ದಾಖಲು
ನಾನು ದರ್ಶನ್ ಅವರ ವಿಚಾರದಲ್ಲಿ ಮುಂದೆ ಏನಾಗಬಹುದು ಅನ್ನೋದನ್ನ ತಿಳಿದೇ ಅವರ ಜೊತೆ ನಿಂತವನು. ನಾನು ಯಾರನ್ನಾದರೂ ಇಷ್ಟಪಟ್ಟರೆ, ಏನೇ ಬಂದರೂ ಅವರ ಜೊತೆಗೆ ನಿಲ್ಲುತ್ತೇನೆ. ಸಾಯೋವರೆಗೂ ದರ್ಶನ್ ಅಣ್ಣನ ಬಿಡೋದಿಲ್ಲ ಅಂತ ಅವತ್ತೇ ಹೇಳಿದ್ದೇನೆ” ಎಂದ್ರು.
ಅಲ್ಲದೇ, “ಇಲ್ಲಿ ಯಾವುದೇ ಸ್ಟಾರ್ವಾರ್ ಇಲ್ಲ. ಆಗದೇ ಇರೋರು ಮಾಡುವ ನೌಟಂಕಿ ಆಟಗಳಿವು. ಎಲ್ಲರೂ ತಮ್ಮ ತಮ್ಮ ಕೆಲಸ ಮಾಡಿಕೊಂಡು ಚೆನ್ನಾಗಿಯೇ ಇರುತ್ತಾರೆ” ಎಂದಿದ್ದಾರೆ.

ಜೊತೆಗೆ, ಕಿಚ್ಚ ಸುದೀಪ್ ಅವರ ಮಾತನ್ನು ಕೇಳಿ ನನಗೆ ಖುಷಿಯಾಯಿತು. ಅದಕ್ಕೇ ಅವರು ದೊಡ್ಡ ಸ್ಥಾನದಲ್ಲಿದ್ದಾರೆ. ಸುಮ್ಮನೆ ಮಾತನಾಡುವವರು ಸುದೀಪ್ ಅವರನ್ನು ನೋಡಿ ಕಲಿಯಬೇಕು” ಎಂದಿದ್ದಾರೆ.
ಒಟ್ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯ ಸಖತ್ ಸೌಂಡ್ ಮಾಡುತ್ತಿದೆ.
MUST WATCH : KN RAJANNA | ಕೆಡಿಪಿ ಸಭೆ ಕರೆದ ಶಾಸಕ ರಾಜಣ್ಣ- ಅಧಿಕಾರಿಗಳಿಗೆ ಫುಲ್ ಕ್ಲಾಸ್ ತಗೊಂಡ್ರು




